Kannadavani Impact ಬೈಕ್ ಸವಾರನ ಬಳಿ ಲಂಚ ಸ್ವೀಕರಿಸಿದ ಶಿರಸಿ ಹೆಡ್ ಕಾನಸ್ಟೇಬಲ್ ಅಮಾನತು
ಕಾರವಾರ :-ಬೈಕ್ ಸವಾರನ ಬಳಿ ಲಂಚ ಸ್ವೀಕರಿಸುತಿದ್ದ ಶಿರಸಿ ಹೊಸ ಮಾರುಕಟ್ಟೆ ಠಾಣೆ ಸಿ.ಹೆಚ್.ಸಿ 1530 ಚಂದ್ರಶೇಖರ್ ಹುದ್ದಾರ್ ರವರನ್ನು ಅಮಾನತು ಮಾಡಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎಂ.ನಾರಾಯಣ್ ರವರು ಆದೇಶಿಸಿದ್ದಾರೆ.
Kannadavani Impact ಬೈಕ್ ಸವಾರನ ಬಳಿ ಲಂಚ ಸ್ವೀಕರಿಸಿದ ಶಿರಸಿ ಹೆಡ್ ಕಾನಸ್ಟೇಬಲ್ ಅಮಾನತು
Advertisement
ಪ್ರಕೃತಿ ಮೆಡಿಕಲ್ ,ಕಾರವಾರ.
ಕಾರವಾರ :-ಬೈಕ್ ಸವಾರನ ಬಳಿ ಲಂಚ ಸ್ವೀಕರಿಸುತಿದ್ದ ಶಿರಸಿ ಹೊಸ ಮಾರುಕಟ್ಟೆ ಠಾಣೆ ಸಿ.ಹೆಚ್.ಸಿ 1530 ಚಂದ್ರಶೇಖರ್ ಹುದ್ದಾರ್ ರವರನ್ನು ಅಮಾನತು ಮಾಡಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎಂ.ನಾರಾಯಣ್ ರವರು ಆದೇಶಿಸಿದ್ದಾರೆ.
ಯಲ್ಲಾಪುರ(yallapura) ನಾಕಾದ ಚಕ್ ಪೋಸ್ಟ್ ನಲ್ಲಿ ಕರ್ತವ್ಯದಲ್ಲಿ ಇದ್ದಾಗ ಬೈಕ್ ನಿಲ್ಲಿಸಿ ಅವರಿಂದ ಹಣ ಪಡೆದುಕೊಂಡಿರುವ ಹಾಗೂ ಬಾಡಿ ಕ್ಯಾಮರಾ ವನ್ನು ಧರಿಸದೇ ಕರ್ತವ್ಯದಲ್ಲಿ ನಿರ್ಲಕ್ಷತನ ತೋರಿದಂತೆ ಕಂಡುಬಂದಿರುವ ವಿಡಿಯೋ(video) ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಈ ಕುರಿತು ಚಂದ್ರಶೇಖರ್ ರವರ ಮೇಲೆ ಇಲಾಖೆ ವಿಚಾರಣೆ ಬಾಕಿ ಇರಿಸಿ ತಕ್ಷಣ ಜಾರಿಗೆ ಬರುವಂತೆ ಅಮಾನತು ಮಾಡಲಾಗಿದೆ ಎಂದು ಪೊಲೀಸ್ ವರಿಷ್ಟಾಧಿಕಾರಿ ಎಂ ನಾರಾಯಣ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.