ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

ಗೃಹಜ್ಯೋತಿ ಬಳಕೆದಾರರಿಗೆ D-Link ಸೌಲಭ್ಯ|ಏನಿದರ ಉಪಯೋಗ ವಿವರ ನೋಡಿ

Hubli News: ಕರ್ನಾಟಕ ರಾಜ್ಯ ಸರ್ಕಾರದ Karnataka Government )ಮಹತ್ವಾಕಾಂಕ್ಷೆಯ ಯೋಜನೆಯಾದ 'ಗೃಹ ಜ್ಯೋತಿ' ಯೋಜನೆ (Gruha Jyothi ) ಜಾರಿಗೆ ಒಂದು ವರ್ಷ ತುಂಬಿದೆ.
03:00 PM Sep 10, 2024 IST | ಶುಭಸಾಗರ್
featuredImage featuredImage

ವರದಿ|ಸಾಗರ್.

Advertisement

Hubli News: ಕರ್ನಾಟಕ ರಾಜ್ಯ ಸರ್ಕಾರದ Karnataka Government )ಮಹತ್ವಾಕಾಂಕ್ಷೆಯ ಯೋಜನೆಯಾದ 'ಗೃಹ ಜ್ಯೋತಿ' ಯೋಜನೆ (Gruha Jyothi ) ಜಾರಿಗೆ ಒಂದು ವರ್ಷ ತುಂಬಿದೆ.

ಒಂದು ವರ್ಷದ ನಂತರ ಈ ಬಳಕೆದಾರರಿಗಾಗಿ ವಿದ್ಯತ್ ಕಂಪನಿಯಿಂದ ಡಿ.ಲಿಂಕ್ ಸೌಲಭ್ಯ ಕಲ್ಪಿಸಿದೆ.

ಏನಿದು ಡಿ-ಲಿಂಕ್ ? ಗ್ರಾಹಕರು ಇದರ ಲಾಭ ಪಡೆದುಕೊಳ್ಳುವುದು ಹೇಗೆ? ಇಲ್ಲಿದೆ ಮಾಹಿತಿ.

ಡಿ-ಲಿಂಕ್ ಡಿ ಆಕ್ಟಿವೇಟ್ ಎಂದಾಗಿದ್ದು ಈ ಲಿಂಕ್ ಬಳಸಿ ಗೃಹ ಜ್ಯೋತಿ ಸೌಲಭ್ಯ ಬಂದ್ ಮಾಡುವ ಹಾಗೂ ಮತ್ತೊಂದು ಮೀಟರ್ ಗೆ ಲಿಂಕ್ ಮಾಡುವ ಸೌಲಭ್ಯವಾಗಿದೆ.

Advertisement

ಮನೆ ಬದಲಾಯಿಸಿದ ನಂತರ ಯೋಜನೆಯ ಲಾಭ ಪಡೆಯಲು ಹೊಸ ಮನೆಯ ಆರ್.ಆರ್‌ ಸಂಖ್ಯೆಯನ್ನು ಲಿಂಕ್ ಮಾಡುವ ಸೌಲಭ್ಯ ಇದಾಗಿದ್ದು ಯೋಜನೆ ಲಾಭ ಬೇರೆ ಮನೆಗೆ ತೆರಳಿದ ಮೇಲೂ ಹೊಸ ಮನೆಯ ನೊಂದಣಿ ಮೀಟರ್ ಗೆ ಪಡೆದುಕೊಳ್ಳಬಹುದಾಗಿದೆ.

ಒಂದು ಮನೆಯಿಂದ ಇನ್ನೊಂದು ಮನೆಗೆ ನೀವು ಬಾಡಿಗೆಗೆ ತೆರಳಿದಾಗ ಇಲ್ಲವೇ ಇತರ ಕಾರಣಗಳಿಗೆ ಮನೆ ಬದಲಿಸುವ ವಳೇ ಈಗಾಗಲೇ ನೋಂದಾವಣೆಗೊಂಡಿರುವ ಸಂಖ್ಯೆಯನ್ನು (ಆರ್.ಆರ್.ನಂಬರ್ ಗೆ ಆಧಾರ ಜೋಡಣೆ) ಡಿ-ಲಿಂಕ್ ಮಾಡಿ, ಮತ್ತೊಂದು ಮನೆಯ ಆರ್.ಆರ್. ಸಂಖ್ಯೆಯೊಂದಿಗೆ ನೋಂದಣಿ ಮಾಡಿಸಿಕೊಳ್ಳಬೇಕು. ಆಗ ನೀವು ಹಾಲಿ ವಾಸಿಸುವ ಮನೆಯಲ್ಲಿ ಗೃಹ ಜ್ಯೋತಿ ಯೋಜನೆ ನಿಯಮಗಳು, ಲಾಭ ಅನ್ವಯವಾಗಲಿದೆ.

ಇದನ್ನೂ ಓದಿ:-Daily Astrology| ದಿನ ಭವಿಷ್ಯ 10 ಸೆಪ್ಟಂಬರ್ 2024

ಡಿ-ಲಿಂಕ್‌ ಮಾಡುವುದು ಹೇಗೆ?

ಗೃಹ ಜ್ಯೋತಿ ಬಳಕೆದಾರರು https://sevasindhu.karnataka.gov.in/GruhaJyothi_Delink/GetAadhaarData.aspx ಲಿಂಕ್ ಮೂಲಕ ನೋಂದಣಿ ಮಾಡಿಕೊಂಡು ಈ ಡಿ-ಲಿಂಕ್ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ.

ಗೃಹ ಜ್ಯೋತಿ ಪೋರ್ಟಲ್ ಓಪನ್ ಆಗದೇ ಇದ್ದಲ್ಲಿ, Cache Memory Clear ಮಾಡಿ ಹೀಗೆ ಮಾಡುವುದರಿಂದ ಪೋರ್ಟಲ್ ಲಿಂಕ್ ಮತ್ತೆ ಓಪನ್ ಆಗುತ್ತದೆ.

ಹೇಗೆ ಮಾಡಬೇಕು-


ಡಿ.ಲಿಂಕ್ ಗೆ ಪ್ರವೇಶಿಸಿ- ಆಧಾರ್ ನಂಬರ್ ನೊಂದಾಯಿಸಿ submit ಮಾಡಿ - ನಂತರ ಎರಡು option ತೋರಿಸುತ್ತದೆ . ಇದರಲ್ಲಿ ಮನೆ ಬದಲಾವಣೆ ಹಾಗೂ ಗೃಹ ಜ್ಯೋತಿ ಯೋಜನೆ ರದ್ದಿನ ಆಯ್ಕೆ ಇರುತ್ತದೆ. ಇದರಲ್ಲಿ ಯಾವುದು ಎಂಬುದನ್ನು ಆಯ್ಕೆ ಮಾಡಿ- ನಂತರ OTP - ಅಥವಾ fingerprint ಆಯ್ಕೆ ಇರುತ್ತದೆ- OTP ಆಯ್ಕೆ ಮಾಡಿದರೇ ನಿಮ್ಮ ಮೊಬೈಲ್ ಗೆ ಬಂದ OTP ಯನ್ನು ಹಾಕಿ submit ಮಾಡಿ.

Advertisement
Tags :
ApplicationD-linkGruha Jyothi schemeHubli newsKannda newsKarnatakaKarnataka governmentಗೃಹ ಜ್ಯೋತಿಹೆಸ್ಕಾಂ
Advertisement
Advertisement