Karnataka: ಶಕ್ತಿ ಸೌಧದ ವಿದ್ಯುತ್ ಬಿಲ್ ಬಾಕಿ| ಪವರ್ ಕಟ್ ಮಾಡುವ ಎಚ್ಚರಿಕೆ ನೀಡಿದ ಹೆಸ್ಕಾಂ!
Karnataka: ಶಕ್ತಿ ಸೌಧದ ವಿದ್ಯುತ್ ಬಿಲ್ ಬಾಕಿ| ಪವರ್ ಕಟ್ ಮಾಡುವ ಎಚ್ಚರಿಕೆ ನೀಡಿದ ಹೆಸ್ಕಾಂ!
ಬೆಳಗಾವಿ: ರಾಜ್ಯ ಸರ್ಕಾರದ ಖಜಾನೆ ಕಾಲಿಯಾಗುದೆಯೇ? ಅಭಿವೃದ್ಧಿ ಕೆಲಸಕ್ಕೆ ಹಣವಿಲ್ಲ,ಇದೀಗ ಶಕ್ತಿ ಸೌಧಕ್ಕೆ ವಿದ್ಯುತ್ ಬಿಲ್ ಕಟ್ಟಲು ಹಣವಿಲ್ಲವೇ ಎಂಬ ಪ್ರಶ್ನೆ ಏಳುವಂತೆ ಮಾಡಿದೆ.
ಹೌದು ರಾಜ್ಯದ ಎರಡನೇ ಶಕ್ತಿಸೌಧದ ವಿದ್ಯುತ್ ಶುಲ್ಕವನ್ನೇ ಅಧಿಕಾರಿಗಳು ಬಾಕಿ ಉಳಿಸಿಕೊಂಡಿದ್ದಾರೆ. ಬೆಳಗಾವಿಯ ಸುವರ್ಣಸೌಧದ (Belagavi Suvarna Soudha) ವಿದ್ಯುತ್ ಬಿಲ್ 1.20 ಲಕ್ಷ ರೂಪಾಯಿಯನ್ನು ಲೋಕೋಪಯೋಗಿ ಇಲಾಖೆಯ (PWD) ಅಧಿಕಾರಿಗಳು ಹೆಸ್ಕಾಂ ಇಲಾಖೆಗೆ ಇನ್ನೂ ಪಾವತಿಸಿಲ್ಲ.
Karnataka: ಮನೆಗೆ ನುಗ್ಗಿ ಮಕ್ಕಳ ಅಪಹರಣ ಫೈರಿಂಗ್ ಮಾಡಿ ಮಕ್ಕಳ ರಕ್ಷಣೆ.
ಈ ತಿಂಗಳು ಬಾಕಿ ಬಿಲ್ ಪಾವತಿಸದಿದ್ದರೆ ಸುವರ್ಣಸೌಧದ ವಿದ್ಯುತ್ ಸಂಪರ್ಕ ಕಡಿತಗೊಳಿಸುತ್ತೇವೆ ಎಂದು ಲೋಕಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಹೆಸ್ಕಾಂ ಅಧಿಕಾರಿಗಳು ನೋಟಿಸ್ ನೀಡಿ ಎಚ್ಚರಿಕೆ ನೀಡಿದ್ದಾರೆ.
Karnataka NHPC recruitment|248 ಖಾಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಲ್ಲಿದೆ ವಿವರ
ಸುವರ್ಣ ಸೌಧಕ್ಕೆ ಬಣ್ಣ ಬಳಿಯಲೂ ಸಹ ಸರ್ಕಾರದ ಬಳಿ ದುಡ್ಡಿಲ್ವಾ ಎನ್ನುವ ಅನುಮಾನಗಳು ಕಾಡುತ್ತಿವೆ. 2012 ರಲ್ಲಿ ನಿರ್ಮಾಣವಾದ ಸುವರ್ಣಸೌಧಕ್ಕೆ ಸುಣ್ಣ ಬಣ್ಣ ಬಳಿದಿಲ್ಲ. ಸುಣ್ಣ ಬಣ್ಣ ಬಳಿಯಲು ಲೋಕೋಪಯೋಗಿ ಇಲಾಖೆ ಸಲ್ಲಿಸಿದ್ದ 9 ಕೋಟಿ ರೂ. ಪ್ರಸ್ತಾವನೆಯನ್ನು ಹಣಕಾಸು ಇಲಾಖೆ ತಿರಸ್ಕರಿಸಿದ್ದು ಇದೀಗ ಸರ್ಕಾರ ಮುಖಭಂಗ ಎದುರಿಸುವಂತಾಗಿದೆ.
