karnataka | ಸಚಿವ ಸಂಪುಟ ಪುನಾರಚನೆ |ಆರ್.ವಿ ದೇಶಪಾಂಡೆ ಏನಂದ್ರು ಗೊತ್ತಾ?
karnataka | ಸಚಿವ ಸಂಪುಟ ಪುನಾರಚನೆ |ಆರ್.ವಿ ದೇಶಪಾಂಡೆ ಏನಂದ್ರು ಗೊತ್ತಾ?
ಕಾರವಾರ :-ರಾಜ್ಯ ಸಂಪುಟ ಪುನಾರಚನೆಗೆ ಹೈ ಕಮಾಂಡ್ ಗ್ರೀನ್ ಸಿಗ್ನಲ್ ನೀಡಿದ ಬೆನ್ನಲ್ಲೇ ಆಕಾಂಕ್ಷಿಗಳ ಪಟ್ಟಿಯೂ ಬೆಳೆಯುತ್ತಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಹಳಿಯಾಳದ ಶಾಸಕ ಹಾಗೂ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ ದೇಶಪಾಂಡೆ (RV Deshpande) ಹೆಸರು ಅಗ್ರ ಸ್ಥಾನದಲ್ಲಿ ಇದೆ.
ಸರ್ಕಾರ ರಚನೆಯಾದಾಗ ಜಿಲ್ಲೆಯ ಭಟ್ಕಳ ಶಾಸಕ ಮಂಕಾಳು ವೈದ್ಯ ರಿಗೆ ಮೀನುಗಾರಿಕಾ ಸಚಿವ ಸ್ಥಾನ ದೊರೆಯಿತು. ಆದರೇ ಆದರೇ ಹಿರಿಯ ನಾಯಕರಾಗಿರುವ ಆರ್.ವಿ ದೇಶಪಾಂಡೆಗೆ ಸಚಿವ ಸ್ಥಾನ ದೊರೆಯಲಿಲ್ಲ. ಇದರಿಂದ ಅವರ ಬೆಂಬಲಿತ ನಾಯಕರು ಹಾಗೂ ಕಾರ್ಯಕರ್ತರಲ್ಲಿ ಅಸಮದಾನ ಮೂಡಿತ್ತು.

ಆರ್.ವಿ ದೇಶಪಾಂಡೆಯವರು ಸಾರ್ವಜನಿಕವಾಗಿ ಎಲ್ಲಿಯೂ ಅಸಮದಾನ ತೋರಿಸಿಕೊಳ್ಳದಿದ್ದರೂ ಅವರ ಮಾತುಗಳಲ್ಲಿ ಇದು ತೋರುತಿತ್ತು. ಈ ಹಿನ್ನಲೆಯಲ್ಲಿ ಅವರಿಗಾಗಿ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಸ್ಥಾನ ನೀಡಲಾಯಿತು.

Karnataka |ಸಚಿವ ಗಾದಿ ಏರಲಿದ್ದಾರಾ ಆರ್.ವಿ ದೇಶಪಾಂಡೆ?
ಮುಖ್ಯಮಂತ್ರಿ ಸಿದ್ದರಾಮಯ್ಯ ರವರ ಆಪ್ತ ರಾಗಿರು ಆರ್.ವಿ ದೇಶಪಾಂಡೆ ಸರ್ಕಾರ ರಚನೆಯಾದಾಗಲೆಲ್ಲ ಸಚಿವರಾಗಿದ್ದವರು. ಪ್ರವಾಸೋಧ್ಯಮ , ಕೈಗಾರಿಕಾ ಸಚಿವ ಸ್ಥಾನ ಪಡೆಯುತಿದ್ದ ಅವರು ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರು ಸಹ ಆಗಿದ್ದರು. ಜನತಾ ಪಕ್ಷದಿಂದ ಕಾಂಗ್ರೆಸ್ ಜೋಳಿಗೆಗೆ ಬಿದ್ದ ಅವರು ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ರವರಿಂದ ಇಂದಿನ ಸಿದ್ದರಾಮಯ್ಯ ಸರ್ಕಾರದ ವರೆಗೆ ರಾಜಕಾರಣವನ್ನು ಮಾಡಿಕೊಂಡು ಬಂದವರು.
78 ವರ್ಷದ ವಯಸ್ಸಿನ ಅವರು ಈಗಲೂ ಸರ್ಕಾರದ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆದಿದ್ದಾರೆ.
ಸಚಿವ ಸ್ಥಾನದ ಆಕಾಂಕ್ಷೆ ಬಗ್ಗೆ ಆರ್.ವಿ ದೇಶಪಾಂಡೆ ಏನಂದ್ರು.?
ಮುಖ್ಯಮಂತ್ರಿಯವರು ರಾಹುಲ್ ಗಾಂಧಿಯನ್ನು ಭೇಟಿಯಾಗಿರುವುದು ಗೊತ್ತಾಗಿದೆ. ಸಚಿವ ಸಂಪುಟ ವಿಸ್ತರಣೆ ಪಟ್ಟಿ ಬಗ್ಗೆ ಯಾವುದೂ ಗೊತ್ತಿಲ್ಲ. ಇದು ಪ್ರಜಾಪ್ರಭುತ್ವವಿದೆ . ನಾವು ಒಂದುಸಾರಿ ಸಿದ್ದರಾಮಯ್ಯನವರನ್ನು ಆರಿಸಿದ ನಂತರ ಮಂತ್ರಿ ಮಂಡಳದಲ್ಲಿ ಯಾರು ಇರಬೇಕು ಎಂಬುದನ್ನ ಮುಖ್ಯಮಂತ್ರಿಯೇ ಹೈಕಮಾಂಡ್ ಜೊತೆ ಚರ್ಚಿಸಿ ತೀರ್ಮಾನ ಮಾಡುತ್ತಾರೆ.ನಾನೊಬ್ಬ ಸೀನಿಯರ್ ಲೀಡರ್ ಆಗಿ ಡಿಸಿಪ್ಲೀನ್ ನಲ್ಲಿ ಇರಬೇಕಾಗುತ್ತದೆ ,ಮಂತ್ರಿ ಮಂಡಳದಲ್ಲಿ ಯಾರು ಇರಬೇಕು ,ಯಾರು ಬೇಡ ಎಂಬುದನ್ನ ಅವರೇ ತೀರ್ಮಾನ ಮಾಡುತ್ತಾರೆ ಎಂದು ಹೇಳಿದ್ದಾರೆ.
