For the best experience, open
https://m.kannadavani.news
on your mobile browser.
Advertisement

Karnataka| ಸಚಿವ ಸಂಪುಟ ಪುನಾರಚನೆಗೆ ಅಸ್ತು| ಯಾರೆಲ್ಲಾ ಔಟ್ ,ಯಾರು ಇನ್ ! ಸಂಭಾವ್ಯ ಪಟ್ಟಿ ಇಲ್ಲಿದೆ.

Karnataka Cabinet reshuffle: Congress high command approves major revamp as CM Siddaramaiah prepares to drop 12 ministers and induct fresh faces. Check the full list of who is out and who is likely to enter the new Karnataka cabinet.
08:12 PM Nov 16, 2025 IST | ಶುಭಸಾಗರ್
Karnataka Cabinet reshuffle: Congress high command approves major revamp as CM Siddaramaiah prepares to drop 12 ministers and induct fresh faces. Check the full list of who is out and who is likely to enter the new Karnataka cabinet.
karnataka  ಸಚಿವ ಸಂಪುಟ ಪುನಾರಚನೆಗೆ ಅಸ್ತು  ಯಾರೆಲ್ಲಾ ಔಟ್  ಯಾರು ಇನ್   ಸಂಭಾವ್ಯ ಪಟ್ಟಿ ಇಲ್ಲಿದೆ

Karnataka| ಸಚಿವ ಸಂಪುಟ ಪುನಾರಚನೆಗೆ ಅಸ್ತು| ಯಾರೆಲ್ಲಾ ಔಟ್ ,ಯಾರು ಇನ್ ! ಸಂಭಾವ್ಯ ಪಟ್ಟಿ ಇಲ್ಲಿದೆ.

Advertisement

ಬೆಂಗಳೂರು: ಬಿಹಾರ ವಿಧಾನಸಭಾ ಚುನಾವಣೆಯ ಬಳಿಕ ರಾಜ್ಯ ಸಂಪುಟ ಪುನಾರಚನೆ ಆಗಲಿದೆ ಎನ್ನುವ ಮಾತು ಸತ್ಯವಾಗುವಂತಿದೆ. ಕಾಂಗ್ರೆಸ್ ಹೈಕಮಾಂಡ್ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಸಂಪುಟ ಪುನಾರಚನೆಗೆ ಒಪ್ಪಿಗೆ ಸೂಚಿಸಿದ್ದಾರೆ.

karnataka | ಸಚಿವ ಸಂಪುಟ ಪುನಾರಚನೆ |ಆರ್.ವಿ ದೇಶಪಾಂಡೆ ಏನಂದ್ರು ಗೊತ್ತಾ? 

ಈ ಭಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಬೆಂಬಲಿಗರಿಗೆ ಸಮಾನ ಅವಕಾಶ ನೀಡುವ ಸಾಧ್ಯತೆಗಳಿವೆ.

ಹೀಗಾಗಿ ಸಂಪುಟ ಪುನಾರಚನೆ ವೇಳೆ ಯಾರು ಇನ್? ಯಾರು ಔಟ್ ಎನ್ನುವ ಸಂಭಾವ್ಯ ಪಟ್ಟಿ ಇಲ್ಲಿದೆ.

ರಾಜ್ಯ ಸಂಪುಟ ಪುನಾರಚನೆಯಲ್ಲಿ ಹಾಲಿ ಸಚಿವ ಸಂಪುಟದ 12 ಮಂದಿಯನ್ನು ಕೈಬಿಟ್ಟು ಹೊಸ ಮುಖಗಳಿಗೆ ಮಣೆ ಹಾಕಲಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೇ ಖಾಲಿ ಇದ್ದಂತ 2 ಸ್ಥಾನಗಳನ್ನು ಭರ್ತಿ ಮಾಡಲು ಸಿಎಂ ಸಿದ್ಧರಾಮಯ್ಯ ಸಿದ್ದತೆ  ಮಾಡಿದ್ದಾರೆ ಎಂಬುದಾಗಿ ಹೇಳಲಾಗುತ್ತಿದೆ.

ಕಾಂಗ್ರೆಸ್ ಉನ್ನತ ಮೂಲಗಳಂತೆ ಹಾಲಿ 12 ಸಚಿವರಿಗೆ ಕೋಕ್ ಕೊಟ್ಟು, ಹೊಸಬರಿಗೆ ಅವಕಾಶವನ್ನು ನೀಡಲಾಗುತ್ತಿದೆ ಎನ್ನಲಾಗುತ್ತಿದೆ. ಇದಷ್ಟೇ ಅಲ್ಲದೇ ಒಂದು ವೇಳೆ ಇನ್ನೂ ಹೆಚ್ಚಿನ ಸಚಿವರಿಗೆ ಗೇಟ್ ಪಾಸ್ ನೀಡಿ ಅಂದ್ರೆ ಅದಕ್ಕೂ ಸಿಎಂ ಸಿದ್ಧರಾಮಯ್ಯ ಪ್ಲಾನ್ 2 ರೆಡಿ ಮಾಡಿಟ್ಟುಕೊಂಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.ಹಾಗಾದ್ರೇ ಯಾರು ಔಟ್..? ಯಾರು ಇನ್ ಎನ್ನುವ ಸಂಭಾವ್ಯ ಪಟ್ಟಿ ಇಲ್ಲಿದೆ.

https://chat.whatsapp.com/HbI3YG8zHwtAYxenaKEbAg?mode=ems_copy_ta

ಸಿಎಂ ಸಿದ್ಧರಾಮಯ್ಯ ಸಂಪುಟದಿಂದ ಯಾರೆಲ್ಲ ಔಟ್?

ಸಂಖ್ಯೆಸಚಿವರ ಹೆಸರುಖಾತೆವಿಧಾನಸಭೆ/ವಿಧಾನಪರಿಷತ್ ಕ್ಷೇತ್ರ
1ಕೆ.ಹೆಚ್. ಮುನಿಯಪ್ಪಆಹಾರ ಮತ್ತು ನಾಗರೀಕ ಸರಬರಾಜುದೇವನಹಳ್ಳಿ
2ದಿನೇಶ್ ಗುಂಡೂರಾವ್ಆರೋಗ್ಯ ಇಲಾಖೆಗಾಂಧಿನಗರ
3ಹೆಚ್.ಸಿ. ಮಹದೇವಪ್ಪಸಮಾಜ ಕಲ್ಯಾಣಟಿ. ನರಸೀಪುರ
4ಶರಣಬಸಪ್ಪ ದರ್ಶನಾಪುರಸಣ್ಣ ಕೈಗಾರಿಕೆಶಹಾಪುರ್
5ಎನ್.ಎಸ್. ಬೋಸರಾಜುಸಣ್ಣ ನೀರಾವರಿ / ವಿಜ್ಞಾನ & ತಂತ್ರಜ್ಞಾನವಿಧಾನ ಪರಿಷತ್
6ಡಾ. ಎಂ.ಸಿ. ಸುಧಾಕರಉನ್ನತ ಶಿಕ್ಷಣಚಿಂತಾಮಣಿ
7ಶಿವಾನಂದ ಪಾಟೀಲ್ಸಕ್ಕರೆ ಮತ್ತು ಜವಳಿಬಸವನ ಬಾಗೇವಾಡಿ
8ರಹೀಂ ಖಾನ್ಪೌರಾಡಳಿತಬೀದರ್
9ಎಸ್.ಎಸ್. ಮಲ್ಲಿಕಾರ್ಜುನತೋಟಗಾರಿಕೆ & ಗಣಿನಿಲಯದಾವಣಗೆರೆ
10ಆರ್.ಬಿ. ತಿಮ್ಮಾಪುರಅಬಕಾರಿ ಇಲಾಖೆಮುದೋಳ
11ಕೆ. ವೆಂಕಟೇಶ್ಪಶು ಸಂಗೋಪನೆಪಿರಿಯಪಟ್ಟಣ
12ಡಿ. ಸುಧಾಕರ್ಯೋಜನೆ ಮತ್ತು ಸಾಂಖ್ಯಿಕಹಿರಿಯೂರು

ಸಿಎಂ ಸಿದ್ಧರಾಮಯ್ಯ ಸಂಪುಟಕ್ಕೆ ಹೊಸದಾಗಿ ಯಾರೆಲ್ಲ ಶಾಸಕರು ಇನ್?

ಸಂಖ್ಯೆಹೆಸರುಪದವಿಕ್ಷೇತ್ರ
1ಯು.ಟಿ. ಖಾದರ್ವಿಧಾನಸಭೆ ಸ್ಪೀಕರ್ಮಂಗಳೂರು
2ಕೆ.ಎನ್. ರಾಜಣ್ಣಶಾಸಕಮಧುಗಿರಿ
3ಆರ್.ವಿ. ದೇಶಪಾಂಡೆಶಾಸಕಹಳಿಯಾಳ
4ಬಿ.ಕೆ. ಹರಿಪ್ರಸಾದ್ವಿಧಾನ ಪರಿಷತ್ ಸದಸ್ಯ
5ಎಂ. ಕೃಷ್ಣಪ್ಪಶಾಸಕವಿಜಯನಗರ
6ತನ್ವೀರ್ ಸೇಠ್ಶಾಸಕನರಸಿಂಹರಾಜ
7ಸಲೀಂ ಅಹಮದ್ವಿಧಾನ ಪರಿಷತ್ ಸದಸ್ಯ
8ರಿಜ್ವಾನ್ ಅರ್ಷದ್ಶಾಸಕಶಿವಾಜಿನಗರ
9ಮಾಗಡಿ ಬಾಲಕೃಷ್ಣಶಾಸಕಮಾಗಡಿ
10ಎನ್.ಎ. ಹ್ಯಾರಿಸ್ಶಾಸಕಶಿವಾಜಿನಗರ
11ರೂಪಕಲಾ ಶಶಿಧರ್ಶಾಸಕಿ
12ಗೋಪಾಲಕೃಷ್ಣ ಬೇಳೂರುಶಾಸಕಸಾಗರ

ಪ್ರಕೃತಿ ಮೆಡಿಕಲ್ ,ಕಾರವಾರ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ