Karnataka| ಸಚಿವ ಸಂಪುಟ ಪುನಾರಚನೆಗೆ ಅಸ್ತು| ಯಾರೆಲ್ಲಾ ಔಟ್ ,ಯಾರು ಇನ್ ! ಸಂಭಾವ್ಯ ಪಟ್ಟಿ ಇಲ್ಲಿದೆ.
Karnataka| ಸಚಿವ ಸಂಪುಟ ಪುನಾರಚನೆಗೆ ಅಸ್ತು| ಯಾರೆಲ್ಲಾ ಔಟ್ ,ಯಾರು ಇನ್ ! ಸಂಭಾವ್ಯ ಪಟ್ಟಿ ಇಲ್ಲಿದೆ.
ಬೆಂಗಳೂರು: ಬಿಹಾರ ವಿಧಾನಸಭಾ ಚುನಾವಣೆಯ ಬಳಿಕ ರಾಜ್ಯ ಸಂಪುಟ ಪುನಾರಚನೆ ಆಗಲಿದೆ ಎನ್ನುವ ಮಾತು ಸತ್ಯವಾಗುವಂತಿದೆ. ಕಾಂಗ್ರೆಸ್ ಹೈಕಮಾಂಡ್ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಸಂಪುಟ ಪುನಾರಚನೆಗೆ ಒಪ್ಪಿಗೆ ಸೂಚಿಸಿದ್ದಾರೆ.
karnataka | ಸಚಿವ ಸಂಪುಟ ಪುನಾರಚನೆ |ಆರ್.ವಿ ದೇಶಪಾಂಡೆ ಏನಂದ್ರು ಗೊತ್ತಾ?
ಈ ಭಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಬೆಂಬಲಿಗರಿಗೆ ಸಮಾನ ಅವಕಾಶ ನೀಡುವ ಸಾಧ್ಯತೆಗಳಿವೆ.
ಹೀಗಾಗಿ ಸಂಪುಟ ಪುನಾರಚನೆ ವೇಳೆ ಯಾರು ಇನ್? ಯಾರು ಔಟ್ ಎನ್ನುವ ಸಂಭಾವ್ಯ ಪಟ್ಟಿ ಇಲ್ಲಿದೆ.
ರಾಜ್ಯ ಸಂಪುಟ ಪುನಾರಚನೆಯಲ್ಲಿ ಹಾಲಿ ಸಚಿವ ಸಂಪುಟದ 12 ಮಂದಿಯನ್ನು ಕೈಬಿಟ್ಟು ಹೊಸ ಮುಖಗಳಿಗೆ ಮಣೆ ಹಾಕಲಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೇ ಖಾಲಿ ಇದ್ದಂತ 2 ಸ್ಥಾನಗಳನ್ನು ಭರ್ತಿ ಮಾಡಲು ಸಿಎಂ ಸಿದ್ಧರಾಮಯ್ಯ ಸಿದ್ದತೆ ಮಾಡಿದ್ದಾರೆ ಎಂಬುದಾಗಿ ಹೇಳಲಾಗುತ್ತಿದೆ.
ಕಾಂಗ್ರೆಸ್ ಉನ್ನತ ಮೂಲಗಳಂತೆ ಹಾಲಿ 12 ಸಚಿವರಿಗೆ ಕೋಕ್ ಕೊಟ್ಟು, ಹೊಸಬರಿಗೆ ಅವಕಾಶವನ್ನು ನೀಡಲಾಗುತ್ತಿದೆ ಎನ್ನಲಾಗುತ್ತಿದೆ. ಇದಷ್ಟೇ ಅಲ್ಲದೇ ಒಂದು ವೇಳೆ ಇನ್ನೂ ಹೆಚ್ಚಿನ ಸಚಿವರಿಗೆ ಗೇಟ್ ಪಾಸ್ ನೀಡಿ ಅಂದ್ರೆ ಅದಕ್ಕೂ ಸಿಎಂ ಸಿದ್ಧರಾಮಯ್ಯ ಪ್ಲಾನ್ 2 ರೆಡಿ ಮಾಡಿಟ್ಟುಕೊಂಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.ಹಾಗಾದ್ರೇ ಯಾರು ಔಟ್..? ಯಾರು ಇನ್ ಎನ್ನುವ ಸಂಭಾವ್ಯ ಪಟ್ಟಿ ಇಲ್ಲಿದೆ.
ಸಿಎಂ ಸಿದ್ಧರಾಮಯ್ಯ ಸಂಪುಟದಿಂದ ಯಾರೆಲ್ಲ ಔಟ್?
| ಸಂಖ್ಯೆ | ಸಚಿವರ ಹೆಸರು | ಖಾತೆ | ವಿಧಾನಸಭೆ/ವಿಧಾನಪರಿಷತ್ ಕ್ಷೇತ್ರ |
|---|---|---|---|
| 1 | ಕೆ.ಹೆಚ್. ಮುನಿಯಪ್ಪ | ಆಹಾರ ಮತ್ತು ನಾಗರೀಕ ಸರಬರಾಜು | ದೇವನಹಳ್ಳಿ |
| 2 | ದಿನೇಶ್ ಗುಂಡೂರಾವ್ | ಆರೋಗ್ಯ ಇಲಾಖೆ | ಗಾಂಧಿನಗರ |
| 3 | ಹೆಚ್.ಸಿ. ಮಹದೇವಪ್ಪ | ಸಮಾಜ ಕಲ್ಯಾಣ | ಟಿ. ನರಸೀಪುರ |
| 4 | ಶರಣಬಸಪ್ಪ ದರ್ಶನಾಪುರ | ಸಣ್ಣ ಕೈಗಾರಿಕೆ | ಶಹಾಪುರ್ |
| 5 | ಎನ್.ಎಸ್. ಬೋಸರಾಜು | ಸಣ್ಣ ನೀರಾವರಿ / ವಿಜ್ಞಾನ & ತಂತ್ರಜ್ಞಾನ | ವಿಧಾನ ಪರಿಷತ್ |
| 6 | ಡಾ. ಎಂ.ಸಿ. ಸುಧಾಕರ | ಉನ್ನತ ಶಿಕ್ಷಣ | ಚಿಂತಾಮಣಿ |
| 7 | ಶಿವಾನಂದ ಪಾಟೀಲ್ | ಸಕ್ಕರೆ ಮತ್ತು ಜವಳಿ | ಬಸವನ ಬಾಗೇವಾಡಿ |
| 8 | ರಹೀಂ ಖಾನ್ | ಪೌರಾಡಳಿತ | ಬೀದರ್ |
| 9 | ಎಸ್.ಎಸ್. ಮಲ್ಲಿಕಾರ್ಜುನ | ತೋಟಗಾರಿಕೆ & ಗಣಿನಿಲಯ | ದಾವಣಗೆರೆ |
| 10 | ಆರ್.ಬಿ. ತಿಮ್ಮಾಪುರ | ಅಬಕಾರಿ ಇಲಾಖೆ | ಮುದೋಳ |
| 11 | ಕೆ. ವೆಂಕಟೇಶ್ | ಪಶು ಸಂಗೋಪನೆ | ಪಿರಿಯಪಟ್ಟಣ |
| 12 | ಡಿ. ಸುಧಾಕರ್ | ಯೋಜನೆ ಮತ್ತು ಸಾಂಖ್ಯಿಕ | ಹಿರಿಯೂರು |
ಸಿಎಂ ಸಿದ್ಧರಾಮಯ್ಯ ಸಂಪುಟಕ್ಕೆ ಹೊಸದಾಗಿ ಯಾರೆಲ್ಲ ಶಾಸಕರು ಇನ್?
| ಸಂಖ್ಯೆ | ಹೆಸರು | ಪದವಿ | ಕ್ಷೇತ್ರ |
|---|---|---|---|
| 1 | ಯು.ಟಿ. ಖಾದರ್ | ವಿಧಾನಸಭೆ ಸ್ಪೀಕರ್ | ಮಂಗಳೂರು |
| 2 | ಕೆ.ಎನ್. ರಾಜಣ್ಣ | ಶಾಸಕ | ಮಧುಗಿರಿ |
| 3 | ಆರ್.ವಿ. ದೇಶಪಾಂಡೆ | ಶಾಸಕ | ಹಳಿಯಾಳ |
| 4 | ಬಿ.ಕೆ. ಹರಿಪ್ರಸಾದ್ | ವಿಧಾನ ಪರಿಷತ್ ಸದಸ್ಯ | — |
| 5 | ಎಂ. ಕೃಷ್ಣಪ್ಪ | ಶಾಸಕ | ವಿಜಯನಗರ |
| 6 | ತನ್ವೀರ್ ಸೇಠ್ | ಶಾಸಕ | ನರಸಿಂಹರಾಜ |
| 7 | ಸಲೀಂ ಅಹಮದ್ | ವಿಧಾನ ಪರಿಷತ್ ಸದಸ್ಯ | — |
| 8 | ರಿಜ್ವಾನ್ ಅರ್ಷದ್ | ಶಾಸಕ | ಶಿವಾಜಿನಗರ |
| 9 | ಮಾಗಡಿ ಬಾಲಕೃಷ್ಣ | ಶಾಸಕ | ಮಾಗಡಿ |
| 10 | ಎನ್.ಎ. ಹ್ಯಾರಿಸ್ | ಶಾಸಕ | ಶಿವಾಜಿನಗರ |
| 11 | ರೂಪಕಲಾ ಶಶಿಧರ್ | ಶಾಸಕಿ | — |
| 12 | ಗೋಪಾಲಕೃಷ್ಣ ಬೇಳೂರು | ಶಾಸಕ | ಸಾಗರ |