Karnataka: ಕರಾವಳಿ ಬಂದರಿನಿಂದ ಹೊರಟ ಸರಕು ಸಾಗಾಟ ಹಡಗು ಮುಳುಗಡೆ- 6 ಜನರ ರಕ್ಷಣೆ
Karnataka: ಕರಾವಳಿ ಬಂದರಿನಿಂದ ಹೊರಟ ಸರಕು ಸಾಗಾಟ ಹಡಗು ಮುಳುಗಡೆ- 6 ಜನರ ರಕ್ಷಣೆ
ಮಂಗಳೂರು: ಸಮುದ್ರ ಮಧ್ಯದಲ್ಲಿ ಲಕ್ಷದ್ವೀಪಕ್ಕೆ (Lakshadweep) ತೆರಳುತ್ತಿದ್ದ ಸರಕು ಹಡಗು ಮಂಗಳೂರಿನಿಂದ 60 ನಾಟಿಕಲ್ ಮೈಲ್ ದೂರದಲ್ಲಿ ಮುಳುಗಡೆಯಾಗಿದೆ.
ಮಂಗಳೂರಿನಿಂದ ಎಂಎಸ್‌ವಿ ಸಲಾಮತ್ ಹೆಸರಿನ ಸರಕು ಸಾಗಣೆ ಹಡಗು ಮೇ 12ರಂದು ಮಂಗಳೂರು ಬಂದರಿನಿಂದ ಸಿಮೆಂಟ್ ಹಾಗೂ ನಿರ್ಮಾಣ ಸಾಮಾಗ್ರಿ ಹೊತ್ತುಕೊಂಡು ಲಕ್ಷದ್ವೀಪದತ್ತ ಪ್ರಯಾಣ ಆರಂಭಿಸಿತ್ತು.
ಮೇ18 ರಂದು ಲಕ್ಷದ್ವೀಪದ ಕಡಮತ್ ದ್ವೀಪಕ್ಕೆ ತಲುಪಬೇಕಾಗಿತ್ತು. ದಾರಿ ಮಧ್ಯೆ ತಾಂತ್ರಿಕ ಸಮಸ್ಯೆಯಿಂದ ಒಳಗಡೆ ನೀರು ನುಗ್ಗಿ ಹಡಗು ಮುಳುಗಿದೆ.
ಹಡಗಿನಲ್ಲಿ 6 ಭಾರತೀಯ ಸಿಬ್ಬಂದಿ ಪ್ರಯಾಣಿಸುತ್ತಿದ್ದರು.ಘಟನೆ ನಡೆದ ತಕ್ಷಣ ಹಡಗಿನಲ್ಲಿ ಇದ್ದ ಮಿನಿ ಬೋಟ್ ಮೂಲಕ ಪ್ರಾಣ ಉಳಿಸಿಕೊಂಡಿದ್ದಾರೆ.
ಇದನ್ನೂ ಓದಿ:-Karnataka: ಆನಂದ್ ಗುರುಜಿ ಕಾರು ಅಡ್ಡಗಟ್ಟಿ ಬ್ಲಾಕ್ ಮೇಲ್ ! ದಿವ್ಯ ವಸಂತ ಸೇರಿ ಇಬ್ಬರ ವಿರುದ್ಧ ದೂರು
ಇನ್ನು ಘಟನೆ ಮಾಹಿತಿಯನ್ನು ಭಾರತೀಯ ಕರಾವಳಿ ರಕ್ಷಣಾ ಪಡೆಗೆ ರವಾನಿಸಿದ್ದು, ಕೋಸ್ಟ್ ಗಾರ್ಡ್‌ನ (Indian Coast Guard) ‘ವಿಕ್ರಂ’ ಶಿಪ್ ನಲ್ಲಿ ರಕ್ಷಣೆ ಮಾಡಲಾಗಿದೆ.
ಇಸ್ಮಾಯಿಲ್ ಶರೀಫ್, ಅಲೆಮನ್ ಅಹ್ಮದ್ ಬಾಯ್ ಗಾವ್ಡ, ಕಾಕಲ್ ಸುಲೇಮಾನ್ ಇಸ್ಮಾಯಿಲ್, ಅಕ್ಬರ್ ಅಬ್ದುಲ್ ಸುರಾನಿ, ಕಸಂ ಇಸ್ಮಾಯಿಲ್ ಮತ್ತು ಅಜ್ಮಲ್ ಅವರನ್ನು ರಕ್ಷಿಸಲಾಗಿದೆ.