Cyber crime| ಕೊಠಡಿಯಲ್ಲಿ ಗಂಡ ಹೆಂಡತಿ Digital Arrest ಏನದು ಘಟನೆ?
Cyber crime| ಕೊಠಡಿಯಲ್ಲಿ ಗಂಡ ಹೆಂಡತಿ Digital Arrest ಏನದು ಘಟನೆ?
ತಂತ್ರಜ್ಞಾನ ಬೆಳದಂತೆ ದೇಶದಲ್ಲಿ ಸೈಬರ್ ಕ್ರೈಮ್ (Cyber crime) ಹೆಚ್ಚುತ್ತಿದೆ. ಇದೀಗ ಡಿಜಿಟಲ್ ಅರೆಸ್ಟ್ (Digital Arrest) ವಂಚನೆ ಪ್ರಕರಣ ಹೊಸದಾಗಿ ಸೇರ್ಪಡೆ ಗೊಂಡಿದೆ.
ಕೇಂದ್ರ ಗೃಹ ಸಚಿವಾಲಯದ ವ್ಯಾಪ್ತಿಯ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ (ಐ4ಸಿ) ಈ ಬಗ್ಗೆ ಎಚ್ಚರ ವಹಿಸುವಂತೆ ಜನರಿಗೆ ತಿಳಿಸಿದೆ.
ಈ ಎಚ್ಚರಿಕೆ ನಡುವೆಯೇ ಕಳೆದ ತಿಂಗಳು ಶಿವಮೊಗ್ಗದಲ್ಲಿ ದಂಪತಿಯ ಡಿಜಿಟಲ್ ಅರೆಸ್ಟ್ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಸೈಬರ್ ಕ್ರೈಮ್ ವಿಭಾಗದಲ್ಲಿ ಪ್ರಕರಣ ದಾಖಲಾಗಿದೆ.
ಏನಿದು Digital Arrest?
ಪೊಲೀಸ್, ಸಿಬಿಐ, ಇ.ಡಿ, ಕಸ್ಟಮ್ಸ್ ಅಧಿಕಾರಿಗಳು, ನ್ಯಾಯಾಧೀಶರು ಎಂದು ವಾಟ್ಸಪ್, ಸ್ಕೈಪ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳ ಮೂಲಕ ವಿಡಿಯೋ ಕರೆ ಮಾಡಿ, ಜನರಿಗೆ ಬೆದರಿಕೆ ಒಡ್ಡಲಾಗುತ್ತಿದೆ. ಪ್ರಕರಣ ದಾಖಲಿಸುವುದಾಗಿ ಭೀತಿ ಹುಟ್ಟಿಸಲಾಗುತ್ತಿದೆ. ಬಳಿಕ ಇದೇ ನಪವಾಗಿಸಿಕೊಂಡು ಹಣ ವಸೂಲಿ ಮಾಡಲಾಗುತ್ತಿದೆ.
ನೀವೇ ಮೊದಲ ಆರೋಪಿ! Shivamogga ದಲ್ಲಿ ನಡೆದಿದ್ದು ಹೀಗೆ?
ನಿಮ್ಮ ಆಧಾರ್ ಕಾರ್ಡ್ ಬಳಸಿ ಮುಂಬೈನ ಬ್ಯಾಂಕ್ ಆಫ್ ಬರೋಡದಲ್ಲಿ ಖಾತೆ ತೆರೆಯಲಾಗಿದೆ. ಅದರ ಮೂಲಕ ಸುಮಾರು 200 ಕೋಟಿ ರೂ. ಅವ್ಯವಹಾರವಾಗಿದೆ. ಈ ಸಂಬಂಧ 270 ಆರೋಪಿಗಳನ್ನು ಗುರುತಿಸಲಾಗಿದೆ. ನೀವೆ ಪ್ರಥಮ ಆರೋಪಿʼ ಎಂದು ಸಬ್ ಇನ್ಸ್‌ಪೆಕ್ಟರ್ ವೇಷಧಾರಿ ಬೆದರಿಸಿದ್ದ. ಕೆಲವು ಹೊತ್ತಿನ ಬಳಿಕ ಸಿಬಿಐ ಅಧಿಕಾರಿಯ ಸೋಗಿನಲ್ಲಿ ವಿಡಿಯೋ ಕಾಲ್ ಮಾಡಿದ್ದ ಮತ್ತೊಬ್ಬ ವ್ಯಕ್ತಿ, ನಿಮ್ಮ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಲಾಗುತ್ತದೆ. ನಿಮ್ಮ ಬಂಧನವಾದರೆ ಕನಿಷ್ಠ ಒಂದೂವರೆ ವರ್ಷ ಜೈಲು ಶಿಕ್ಷೆಯಾಗಲಿದೆ ಎಂದು ಬೆದರಿಸಿದ್ದ.
ಈ ಕೇಸಿನಿಂದ ತಮ್ಮನ್ನು ಬಿಡುಗಡೆ ಮಾಡಬೇಕಿದ್ದರೆ ಹಣ ನೀಡುವಂತೆ ಸಬ್ ಇನ್ಸ್‌ಪೆಕ್ಟರ್ ವೇಷಧಾರಿ ಸೂಚಿಸಿದ್ದ. ಆತಂಕಕ್ಕೀಡಾದ ನಿವೃತ್ತ ಉದ್ಯೋಗಿ ಎರಡು ಕಂತುಗಳಲ್ಲಿ 41 ಲಕ್ಷ ರೂ. ಹಣ ವರ್ಗಾಯಿಸಿದ್ದಾರೆ. ವಂಚನೆಗೊಳಗಾದ ವಿಷಯ ಗೊತ್ತಾಗುತ್ತಿದ್ದಂತೆ ಶಿವಮೊಗ್ಗದ ಸಿಇಎನ್ ಠಾಣೆಯಲ್ಲಿ ದಂಪತಿಗಳು ದೂರು ನೀಡಿದ್ದಾರೆ.
ಡಿಜಿಟಲ್ ಅರೆಸ್ಟ್ ಕುರಿತು ಎಚ್ಚರ ವಹಿಸಿ
ಡಿಜಿಟಲ್ ಅರೆಸ್ಟ್ ಕುರಿತು ಜನರು ಎಚ್ಚರ ವಹಿಸಬೇಕು ಎಂದು ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ ತಿಳಿಸಿದೆ. ಸಿಬಿಐ, ಇ.ಡಿ, ಪೊಲೀಸ್, ಕಸ್ಟಮ್ಸ್ ಅಧಿಕಾರಿಗಳು, ನ್ಯಾಯಾಧೀಶರು ವಿಡಿಯೋ ಕರೆ ಮಾಡಿ ಜನರನ್ನು ಬಂಧಿಸುವುದಿಲ್ಲ. ಹಾಗಾಗಿ ಇಂಥ ವಂಚನೆಗಳ ಕುರಿತು ಎಚ್ಚರದಿಂದ ಇರಿ ಎಂದು ತಿಳಿಸಿದೆ.
ಇಂಥ ಪ್ರಕರಣಗಳನ್ನು ಸಹಾಯವಾಣಿ ಸಂಖ್ಯೆ 1930ಗೆ ಕರೆ ಮಾಡಿ ತಿಳಿಸಬಹುದು. www.cybercrime.gov.in ಮೂಲಕ ಗಮನಕ್ಕೆ ತರುವಂತೆ ತಿಳಿಸಿದೆ.
ಇದನ್ನೂ ಓದಿ:-Arecanut market price| ಅಡಿಕೆ ಧಾರಣೆ 04 ಅಕ್ಟೋಬರ್2024