Karnataka :ಪಕ್ಕದ ಊರಿಗೆ ಪಾತ್ರೆ ಕೊಟ್ಟವನಿಗೆ ಊರಿನವರ ಬಹಿಷ್ಕಾರ, 6000 ದಂಡ!
Karnataka :ಪಕ್ಕದ ಊರಿಗೆ ಪಾತ್ರೆ ಕೊಟ್ಟವನಿಗೆ ಊರಿನವರ ಬಹಿಷ್ಕಾರ, 6000 ದಂಡ!
ಚಿಕ್ಕಮಗಳೂರು.:- ಪಕ್ಕದ ಊರಿನವರಿಗೆ ಪಾತ್ರೆ ಕೊಟ್ಟಿದ್ದಕ್ಕೆ ಊರಿನವರು ಬಹಿಷ್ಕಾರ ಹಾಕಿ ದಂಡ ವಿಧಿಸಿದ ವಿಲಕ್ಷಣ ಘಟನೆ ಚಿಕ್ಕಮಗಳೂರಿನಲ್ಲಿ (Chikkamagaluru)ನಡೆದಿದೆ.
ಚಿಕ್ಕಮಗಳೂರು ತಾಲೂಕಿನ ಮುಳ್ಳುವಾರೆ ಗ್ರಾಮದ ಭೈರಪ್ಪ ಎಂಬುವರಿಗೆ ಪಕ್ಕದ ಊರಿಗೆ ಪಾತ್ರೆ ಕೊಟ್ಟಿದ್ದಕ್ಕೆ ಬಹಿಷ್ಕಾರ ಹಾಕಿದ್ದಾರೆ. ಜೊತೆಗೆ 6 ಸಾವಿರ ದಂಡ ಕೂಡ ಹಾಕಿದ್ದಾರೆ.
ಇದನ್ನೂ ಓದಿ:-Karnataka:ಗೋವಾ-ಕುಂದಾಪುರ ರಾಷ್ಟ್ರೀಯ ಹೆದ್ದಾರಿ 66 ಬಿಗ್ ಅಪ್ಡೇಟ್
ಆ ಮನೆಯವರ ಜೊತೆ ಯಾರೂ ಮಾತನಾಡುವಂತಿಲ್ಲ. ಅವರ ಮನೆಗೆ ಯಾರೂ ಹೋಗುವಂತಿಲ್ಲ. ಅವರ ತೋಟಕ್ಕೆ ಕೆಲಸಕ್ಕೂ ಹೋಗುವಂತಿಲ್ಲ. ಅವರ ಮಗನ ಮದುವೆಗೆ ಯಾರೂ ಹೋಗಿಲ್ಲ. ಯಾರಾದ್ರು ಮಾತನಾಡ್ಸೋದು-ಮನೆಗೆ-ಕೆಲಸಕ್ಕೆ ಹೋಗೋದು ಕಂಡು ಬಂದ್ರೆ ಅವರಿಗೂ 5000 ದಂಡ. ಗ್ರಾಮಸ್ಥರಿಂದ ಬಹಿಷ್ಕಾರಕ್ಕೊಳಪಟ್ಟಿರೋ ಭೈರಪ್ಪ ನ್ಯಾಯಕ್ಕಾಗಿ ಡಿಸಿ ಕಚೇರಿ, ಪೋಲಿಸ್ ಸ್ಟೇಷನ್ ಅಲೆಯುತ್ತಿದ್ದಾರೆ.
ಚಿಕ್ಕಮಗಳೂರು ತಾಲೂಕಿನ ಮುಳ್ಳುವಾರೆ ಗ್ರಾಮಸ್ಥರಾದ ಭೈರಪ್ಪ ಮುಳ್ಳುವಾರೆ ಗ್ರಾಮದಲ್ಲಿ ಗ್ರಾಮಸ್ಥರೇ ಇವರನ್ನ ಮುಖಂಡರನ್ನಾಗಿಸಿದ್ದಾರೆ.
ಮುಳ್ಳುವಾರೆ-ಕೆಸರಿಕೆ ಗ್ರಾಮ ಅಕ್ಕಪಕ್ಕದ ಗ್ರಾಮಗಳು. ಇತ್ತೀಚೆಗೆ ಕೆಸರಿಕೆ ಗ್ರಾಮದಲ್ಲಿ ಒಂದೇ ದಿನ ಮೂರು ಮದುವೆಯಾಗಿದ್ದವು. ಅಂದು ಅಡುಗೆಗೆ ಪಾತ್ರೆ ಸಮಸ್ಯೆಯಾಗಿದೆ ಎಂದು ಕೆಸರಿಕೆ ಗ್ರಾಮದವರು ಬಂದು ಪಾತ್ರೆ ಕೇಳಿದ್ದರು. ಭೈರಪ್ಪ ಕೊಟ್ಟಿದ್ದರು.
ಪಾತ್ರೆಯನ್ನು ಪಕ್ಕದ ಹಳ್ಳಿಗೆ ಕೊಟ್ಟಿದ್ದೇ ಈಗ ಇವರನ್ನ ಬಹಿಷ್ಕಾರ ಹಾಕೋದಕ್ಕೆ ಕಾರಣವಾಗಿದೆ. ಭೈರಪ್ಪ ಹೀಗೆ ಪಾತ್ರೆಗಳನ್ನ ಕೊಟ್ಟಿದ್ದು ಇದೇ ಮೊದಲಲ್ಲ. ಈ ಹಿಂದೆಯೂ ಕೊಟಿದ್ದರು. ಈಗ ಮಾತ್ರ ಬಹಿಷ್ಕಾರ ಹಾಕಿದ್ದಾರೆ. 6000 ಸಾವಿರ ದಂಡ ಹಾಕಿ, ಭೈರಪ್ಪನವರ ಮನೆಗೆ ಯಾರೂ ಹೋಗದಂತೆ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
ಪಕ್ಕದ ಊರಿಗೆ ಪಾತ್ರೆ ನೀಡಿದ್ದಕ್ಕೆ ಇವರಿಗೆ 6 ಸಾವಿರ ದಂಡ ಹಾಕಿರುವ ಗ್ರಾಮಸ್ಥರು ಇವರನ್ನ ಇವರ ಮನೆಯವರನ್ನ ಯಾರಾದ್ರು ಮಾತನಾಡಿಸಿದರೆ ಅವರಿಗೂ 5 ಸಾವಿರ ದಂಡ ವಿಧಿಸುವ ಎಚ್ಚರಿಕೆ ನೀಡಿದ್ದಾರೆ.
ಇವರ ಮನೆಗೆ-ಮನೆಯ ಕಾರ್ಯಕ್ರಮಕ್ಕೆ ಯಾರೂ ಹೋಗುವಂತಿಲ್ಲ. ಇವರನ್ನ ಮಾತನಾಡಿಸುವಂತಿಲ್ಲ. ಇವರ ತೋಟಕ್ಕೆ ಕೆಲಸಕ್ಕೂ ಹೋಗುವಂತಿಲ್ಲ. ಹೋದರೆ 5 ಸಾವಿರ ದಂಡ. ಇತ್ತೀಚೆಗೆ ಇವರ ಮಗನ ಮದುವೆಯಾಗಿದ್ದು ಆ ಮದುವೆಗೂ ಊರಿನ ಜನ ಹೋಗಿಲ್ಲ ಎಂದು ನೊಂದಿದ್ದಾರೆ. ಈ ಹಿಂದೆಯೂ ಪಾತ್ರೆ ನೀಡಿದ್ದ ಅಂದು ತಪ್ಪಾಗಿರಲಿಲ್ಲ. ಆದರೆ, ಈಗ ಪಾತ್ರೆ ನೀಡಿರುವುದು ತಪ್ಪಾಗಿ ಹರೀಶ್, ಪುಟ್ಟಸ್ವಾಮಿ, ಮಂಜುನಾಥ್, ಸತೀಶ್, ಗಿರೀಶ್ ಹಾಗೂ ಪುಟ್ಟಸ್ವಾಮಿ ಎಂಬ ಆರು ಜನ ದಂಡ ವಿಧಿಸಿ ಬಹಿಷ್ಕಾರ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ:-chikkaballapur|ಸ್ಥಾನಮಾನ ಅಂಗಡಿಯಲ್ಲಿ ಸಿಗುತ್ತಾ? ವಿರೋಧಿಗಳಿಗೆ ಟಾಂಗ್ ಕೊಟ್ಟ ಡಿ ಕೆ ಶಿವಕುಮಾರ್.
ಈ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಆಲ್ದೂರು ಪೊಲೀಸರಿಗೂ ದೂರು ನೀಡಿದ್ದಾರೆ. ಆದ್ರೆ, ಯಾವುದೇ ಕ್ರಮಕೈಗೊಂಡಿಲ್ಲ. ಎಸ್ಸಿ-ಎಸ್ಟಿ ದೌರ್ಜನ್ಯ ಸಮಿತಿ ಸಭೆ ದಿನ ಪತ್ನಿಗೆ ಹಾರ್ಟ್ ಆಪರೇಷನ್ ಆಗಿದ್ದ ಕಾರಣ ಹೋಗಿಲ್ಲ. ನನಗೆ ನ್ಯಾಯ ಕೊಡಿಸಿ ಎಂದು ಬೇಡಿಕೊಂಡಿದ್ದಾರೆ.
ಒಟ್ಟಿನಲ್ಲಿ ಬಹಿಷ್ಕಾರ ಎನ್ನುವ ಪದ್ದತಿ ಇಂದಿಗೂ ಜೀವಂತವಾಗಿದ್ದು ಮಾತ್ರ ದುರಂತ.