For the best experience, open
https://m.kannadavani.news
on your mobile browser.
Advertisement

Uttra kannda|ಮೂಡಾ ಹಗರಣ ಮುಖ್ಯಮಂತ್ರಿ ಅರ್ಜಿ ವಜಾ- ಶಾಸಕರು ಸಚಿವರು ಹೇಳಿದ್ದೇನು?

ಕಾರವಾರ :- .ಮುಡಾ (Muda) ಹರಣದ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM siddaramaiha )ರವರ ಅರ್ಜಿಯನ್ನು ಹೈಕೋರ್ಟ್ (court)ತಿರಸ್ಕರಿಸಿದೆ. ಇದರ ಬೆನ್ನಲ್ಲೇ ಉತ್ತರ ಕನ್ನಡ ಜಿಲ್ಲೆಯ ಕಾಂಗ್ರೆಸ್ (congress) ಶಾಸಕರು ಪ್ರತಿಕ್ರಿಯೆ ನೀಡಿದ್ದಾರೆ.
05:03 PM Sep 24, 2024 IST | ಶುಭಸಾಗರ್
uttra kannda ಮೂಡಾ ಹಗರಣ ಮುಖ್ಯಮಂತ್ರಿ ಅರ್ಜಿ ವಜಾ  ಶಾಸಕರು ಸಚಿವರು ಹೇಳಿದ್ದೇನು

ಕಾರವಾರ :- .ಮುಡಾ (Muda) ಹರಣದ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM siddaramaiha )ರವರ ಅರ್ಜಿಯನ್ನು ಹೈಕೋರ್ಟ್ (court)ತಿರಸ್ಕರಿಸಿದೆ. ಇದರ ಬೆನ್ನಲ್ಲೇ ಉತ್ತರ ಕನ್ನಡ ಜಿಲ್ಲೆಯ ಕಾಂಗ್ರೆಸ್ (congress) ಶಾಸಕರು ಪ್ರತಿಕ್ರಿಯೆ ನೀಡಿದ್ದಾರೆ.

Advertisement

ಶಿರಸಿ ಶಾಸಕ ಭೀಮಣ್ಣ ನಾಯ್ಕ ಹೇಳಿದ್ದೇನು?

ಶಿರಸಿ:-ಮುಡಾ ಹಗರಣ ಬಿಜೆಪಿ ಮಾಡಿದ ಸೃಷ್ಟಿ, ಬಿಜೆಪಿಯಿಂದ ಇಲ್ಲಸಲ್ಲದ ಮಾತು ಹೇಳುತ್ತಾ ರಾಜಕೀಯ ಮಾಡಿದರು.

ಮುಖ್ಯಮಂತ್ರಿ ‌ಸಿದ್ದರಾಮಯ್ಯ ಎಲ್ಲಿಯೂ ಮುಡಾ ಹಗರಣದಲ್ಲಿ ಭಾಗಿಯಾಗಿಲ್ಲ.ಬಿಜೆಪಿಯವರು ರಾಜ್ಯಪಾಲರನ್ನು ಅಸ್ತ್ರಮಾಡಿಕೊಂಡು ಸಿಎಂ ವಿರುದ್ಧ ಮಾಡಿದ ಸಂಚು.

ಇದನ್ನೂ ಓದಿ:-Sirsi| ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷೆ ಉಷಾ ಹೆಗಡೆಗೆ ಬ್ರಷ್ಟಾಚಾರ ಆರೋಪದಡಿ ಶಿಕ್ಷೆ.

ಈಗ ನ್ಯಾಯಾಲಯದ ಆದೇಶವನ್ನು ಗೌರವಿಸುತ್ತೇವೆ,ಮುಂದೆ ಸಿಎಂ ರವರಿಗೆ ನ್ಯಾಯ ಸಿಕ್ಕೇ ಸಿಗುತ್ತದೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರದ್ದು ಯಾವುದೇ ತಪ್ಪಿಲ್ಲ ಎಂದು ಸಾಬೀತಾಗಲಿದೆ ಎಂದು ಶಾಸಕ ಭೀಮಣ್ಣ ನಾಯ್ಕ ಶಿರಸಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಸಚಿವ ಮಂಕಾಳು ವೈದ್ಯ ಹೇಳಿದ್ದೇನು?

Bhatkal:- ಸಿಎಂ ಸಿದ್ಧರಾಮಯ್ಯ ಅರ್ಜಿ ವಜಾ ಕುರಿತು ಸಚಿವ ಮಂಕಾಳು ವೈದ್ಯ ಭಟ್ಕಳದಲ್ಲಿ (bhatkal) ದಲ್ಲಿ ‌ಪ್ರತಿಕ್ರಿಯೆ ನೀಡಿದ ಸಚಿವ ಮಾಂಕಾಳು ವೈದ್ಯ, ಹೈಕೋರ್ಟ್ ಅದೇಶವನ್ನು ನಾವು ಗೌರವಿಸುತ್ತೇವೆ ,ಆದರೆ ಅದು ಸತ್ಯ ಎಂದು ನಾನು ಒಪ್ಪಿಕೊಳ್ಳಲು ಸಿದ್ಧನಿಲ್ಲ.

ಇದನ್ನೂ ಓದಿ:-Bhatkal|ರಿಕ್ಷಾದಲ್ಲಿ ಮೆರೆದಾಡಿದ ಪ್ಯಾಲಸ್ತೀನ್ ಬೆಂಬಲದ ಧ್ವಜ| ಸಂಸದರೇನು ಮಾಡಿದ್ರು ಗೊತ್ತಾ?

ಹೈಕೋರ್ಟ್ ಏನು ತೀರ್ಪು ನೀಡಿದೆ ಎಂದು ಈವರೆಗೆ ನನ್ನ ಗಮನಕ್ಕೆ ಬಂದಿಲ್ಲ ,ಹೈಕೋರ್ಟ್ ಏನು ತೀರ್ಪು ನೀಡಿದೆಯೋ ಅದಕ್ಕೆ ನಾವು ತಲೆ ಬಾಗುತ್ತೇವೆ.

ನಮ್ಮ ಸಿಎಂ ಯಾವುದೇ ತಪ್ಪು ಮಾಡಿಲ್ಲ ಎಂದು ಘಂಟಾ ಘೋಷವಾಗಿ ಹೇಳುತ್ತೇನೆ.ಹೈಕೋರ್ಟ್ ಆದೇಶ ಸತ್ಯ ಎಂದು ಹೇಳಲು ಸಿದ್ಧನಿಲ್ಲ, ನಾನು ಅದರ ಬಗ್ಗೆ ತಿಳಿದುಕೊಂಡಿದ್ದೇನೆ. ಯಾವುದೇ ರೀತಿಯಲ್ಲಿ ನಮ್ಮ ಮುಖ್ಯಮಂತ್ರಿಗಳು ತಪ್ಪು ಮಾಡಿಲ್ಲ ಎಂದು ಸಚಿವ ಮಾಂಕಾಳು ವೈದ್ಯ ಹೇಳಿದ್ದಾರೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ