Budget:ಕಳೆದ ವರ್ಷ ಹಣವನ್ನೇ ರಿಲೀಸ್ ಮಾಡದ ಸರ್ಕಾರ ಯಾವ ಇಲಾಖೆಗೆ ಎಷ್ಟು ಅನುದಾನ ಬರಬೇಕು ಗೊತ್ತಾ?
ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರ ( Karnataka state government) ಇನ್ನೆರೆಡು ತಿಂಗಳಲ್ಲೇ ಹೊಸ ಬಜೆಟ್ (budget) ಮಂಡನೆ ಮಾಡಲು ಸಿದ್ದವಾಗಿದೆ. ಆದ್ರೆ ಕಳೆದ 2024-25 ನೇ ಸಾಲಿನ ಬಜೆಟ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಘೋಷಿಸಿದ ಅನುದಾನ ಅರ್ಧ ಭಾಗದ ಹಣವನ್ನೇ ಈವರೆಗೆ ಬಿಡುಗಡೆ ಮಾಡಿಲ್ಲ.
2024-25ನೇ ಸಾಲಿನ ಬಜೆಟ್‌ನಲ್ಲಿ ಮುಖ್ಯಮಂತ್ರಿಗಳು ಎಲ್ಲಾ ಇಲಾಖೆಗೂ 3,10,248 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದರು. ಈ ಪೈಕಿ ಇಲ್ಲಿಯವರೆಗೂ 1,81,785 ಲಕ್ಷ ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ.
ಹಂಚಿಕೆಯಾದ ಅನುದಾನದಲ್ಲಿ 80% ಇಲಾಖೆಗಳಿಗೆ 50% ಹಣವನ್ನು ಮಾತ್ರ ಸರ್ಕಾರ ನೀಡಿದೆ. ಆದರೆ ಎಲ್ಲಾ ಇಲಾಖೆಗಳಿಗೂ ಸರಿಯಾಗಿ ಅನುದಾನ ಬಿಡುಗಡೆಯಾಗಿಲ್ಲ.
ಇದನ್ನೂ ಓದಿ:-Karnataka|ಎರಡು ದಶಕದ ನಕ್ಸಲ್ ಹೋರಾಟಕ್ಕೆ ತೆರೆ ಆರು Naxals ಮುಖ್ಯಮಂತ್ರಿ ಮುಂದೆ ಶರಣಾಗತಿ.
ಹೀಗಾಗಿ ಗ್ಯಾರಂಟಿ ಯೋಜನೆಗಳಿಂದಾಗಿ ಸರ್ಕಾರಿ ಇಲಾಖೆಗಳಿಗೆ ಹೊಡೆತ ಬೀಳುತ್ತಿದೆ. ಹಂಚಿಕೆ ಮಾಡಿದ್ದ ಅನುದಾನ ಬಿಡುಗಡೆಗೆ ಸರ್ಕಾರಕ್ಕೆ ಹಣದ ಕೊರತೆ ಕಾಡ್ತಿದೆಯಾ? ಸರ್ಕಾರದ ಖಜಾನೆ ಬರಿದಾಗಿದೆಯಾ? ಎನ್ನುವಂತಾಗಿದೆ.
ಹಾಗುದ್ರೆ 2024-25ನೇ ಸಾಲಿನಲ್ಲಿ ಯಾವ ಇಲಾಖೆಗೆ ಎಷ್ಟು ಹಣ ಮೀಸಲಿಟ್ಟಿತ್ತು? ಬಿಡುಗಡೆಯಾದ ಹಣವೆಷ್ಟು ಈ ಕುರಿತು ಸರ್ಕಾರವೇ ಬಿಡುಗಡೆ ಮಾಡಿದ ಮಾಹಿತಿ ಇಲ್ಲಿದೆ.
ಕೃಷಿ ಇಲಾಖೆ
ನಿಗದಿಯಾದ ಅನುದಾನ-4,991 ಕೋಟಿ ರೂ.
ಬಿಡುಗಡೆಯಾದ ಅನುದಾನ- 2,351 ಕೋಟಿ ರೂ.
ನಗರಾಭಿವೃದ್ಧಿ ಇಲಾಖೆ
ನಿಗದಿಯಾದ ಅನುದಾನ-14,935 ಕೋಟಿ ರೂ.
ಬಿಡುಗಡೆಯಾದ ಅನುದಾನ-7,372 ಕೋಟಿ ರೂ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ
ನಿಗದಿಯಾದ ಅನುದಾನ- 34,439 ಕೋಟಿ ರೂ.
ಬಿಡುಗಡೆಯಾದ ಅನುದಾನ-18,646 ಕೋಟಿ ರೂ.
ಅರೋಗ್ಯ ಇಲಾಖೆ
ನಿಗದಿಯಾದ ಅನುದಾನ- 10,697 ಕೋಟಿ ರೂ.
ಬಿಡುಗಡೆಯಾದ ಅನುದಾನ-6,299 ಕೋಟಿ ರೂ.
ಆಹಾರ ಇಲಾಖೆ
ನಿಗದಿಯಾದ ಅನುದಾನ- 99,48 ಕೋಟಿ ರೂ.
ಬಿಡುಗಡೆಯಾದ ಅನುದಾನ-4,082 ಕೋಟಿ ರೂ.
ಇಂಧನ ಇಲಾಖೆ
ನಿಗದಿಯಾದ ಅನುದಾನ-23,173 ಕೋಟಿ ರೂ.
ಬಿಡುಗಡೆಯಾದ ಅನುದಾನ-14,892 ಕೋಟಿ ರೂ.
ಜಲಸಂಪನ್ಮೂಲ ಇಲಾಖೆ
ನಿಗದಿಯಾದ ಅನುದಾನ-16,809 ಕೋಟಿ ರೂ.
ಬಿಡುಗಡೆಯಾದ ಅನುದಾನ-7,587 ಕೋಟಿ ರೂ.
ಗ್ರಾಮೀಣಾಭಿವೃದ್ಧಿ ಇಲಾಖೆ
ನಿಗದಿಯಾದ ಅನುದಾನ-21,512 ಕೋಟಿ ರೂ.
ಬಿಡುಗಡೆಯಾದ ಅನುದಾನ-70,95 ಕೋಟಿ ರೂ.
ಲೋಕೋಪಯೋಗಿ ಇಲಾಖೆ
ನಿಗದಿಯಾದ ಅನುದಾನ-10,176 ಕೋಟಿ ರೂ.
ಬಿಡುಗಡೆಯಾದ ಅನುದಾನ-5,684 ಕೋಟಿ ರೂ.
ವಸತಿ ಇಲಾಖೆ
ನಿಗದಿಯಾದ ಅನುದಾನ-3,067 ಕೋಟಿ ರೂ.
ಬಿಡುಗಡೆಯಾದ ಅನುದಾನ-1,606 ಕೋಟಿ ರೂ.
ಶಾಲಾ ಶಿಕ್ಷಣ ಇಲಾಖೆ
ನಿಗದಿಯಾದ ಅನುದಾನ- 37,055 ಕೋಟಿ ರೂ.
ಬಿಡುಗಡೆಯಾದ ಅನುದಾನ-22,932 ಕೋಟಿ ರೂ.
ಸಾರಿಗೆ ಇಲಾಖೆ
ನಿಗದಿಯಾದ ಅನುದಾನ-65,34 ಕೋಟಿ ರೂ.
ಬಿಡುಗಡೆಯಾದ ಅನುದಾನ-4,023 ಕೋಟಿ ರೂ.
ಸಮಾಜ ಕಲ್ಯಾಣ ಇಲಾಖೆ
ನಿಗದಿಯಾದ ಅನುದಾನ-5,095 ಕೋಟಿ ರೂ.
ಬಿಡುಗಡೆಯಾದ ಅನುದಾನ-3,028 ಕೋಟಿ ರೂ.
ಯೋಜನೆ ಇಲಾಖೆ.
ನಿಗದಿಯಾದ ಅನುದಾನ- 3,841 ಕೋಟಿ ರೂ.
ಬಿಡುಗಡೆಯಾದ ಅನುದಾನ-429 ಕೋಟಿ ರೂ.
ವೈದ್ಯಕೀಯ ಶಿಕ್ಷಣ ಇಲಾಖೆ
ನಿಗದಿಯಾದ ಅನುದಾನ-4,331 ಕೋಟಿ ರೂ.
ಬಿಡುಗಡೆಯಾದ ಅನುದಾನ- 3,062 ಕೋಟಿ ರೂ.
ಆರ್ಥಿಕ ಇಲಾಖೆ
ನಿಗದಿಯಾದ ಅನುದಾನ- 34,167 ಕೋಟಿ ರೂ.
ಬಿಡುಗಡೆಯಾದ ಅನುದಾನ-26,340 ಕೋಟಿ ರೂ.
ಕನ್ನಡವಾಣಿ app ಡೌನ್ ಲೋಡ್ ಮಾಡಲು ಕೆಳಗಿನ ಚಿತ್ರದ ಮೇಲೆ ಕ್ಲಿಕ್ ಮಾಡಿ:-