Shirur ದುರಂತ | ಕಾರ್ಯಾಚರಣೆ ಸಂಪೂರ್ಣ ಸ್ಥಗಿತ DNA ವರದಿಗೂ ಸಂಕಷ್ಟ!
Shirur ದುರಂತ | ಕಾರ್ಯಾಚರಣೆ ಸಂಪೂರ್ಣ ಸ್ಥಗಿತ DNA ವರದಿಗೂ ಸಂಕಷ್ಟ!
ಕಾರವಾರ:- ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಶಿರೂರಿನಲ್ಲಿ ಜುಲೈ 16 ರಂದು ಭೂ ಕುಸಿತವಾಗಿ 11 ಜನ ಮೃತಪಟ್ಟಿದ್ದಾರೆ.
ಇದರಲ್ಲಿ ಈವರೆಗೆ 9 ಮೃತದೇಹಗಳನ್ನು ಪತ್ತೆ ಮಾಡಲಾಗಿತ್ತು. ಆದರೇ ಶಿರೂರಿನ ಜಗನ್ನಾಥ್ ,ಗಂಗೆಕೊಳ್ಳದ ಲೋಕೇಶ್ ಮೃತದೇಹ ಪತ್ತೆ ಕಾರ್ಯಕ್ಕೆ ಮೂರನೇ ಹಂತದ ಕಾರ್ಯಾಚರಣೆಯಲ್ಲಿ ಯಶಸ್ಸು ಸಿಗಲು ಹಲವು ವಿಘ್ನಗಳು ಎದುರಾಗಿವೆ.
ಮೂರನೇ ಹಂತದ ಕಾರ್ಯಾಚರಣೆ: 13 ದಿನದಲ್ಲಿ 90 ಲಕ್ಷ ಕ್ಕೂ ಅಧಿಕ ಕರ್ಚು.
ಮೂರನೇ ಹಂತದ ಕಾರ್ಯಾಚರಣೆಯಲ್ಲಿ 13 ದಿನದಲ್ಲಿ 90 ಲಕ್ಷಕ್ಕೂ ಅಧಿಕ ಕರ್ಚು ಮಾಡಲಾಗಿದೆ. ಈ ಕಾರ್ಯಾಚರಣೆಯಲ್ಲಿ ಕೇರಳ ಮೂಲದ ಅರ್ಜುನ್ ಮೃತದೇಹ ಹೊರತೆಗೆಯಲಾಯಿತು.
ಇದನ್ನೂ ಓದಿ:-
- Dandeli| ಗ್ರಾಹಕರ ಸೋಗಿನಲ್ಲಿ ಬರ್ತಾರೆ ಈ ಕಳ್ಳಿಯರು! ವಿಡಿಯೋ ನೋಡಿ appeared first on ಕನ್ನಡವಾಣಿ.ನ್ಯೂಸ್.">Dandeli| ಗ್ರಾಹಕರ ಸೋಗಿನಲ್ಲಿ ಬರ್ತಾರೆ ಈ ಕಳ್ಳಿಯರು! ವಿಡಿಯೋ ನೋಡಿ
- Uttra kannda | ಫಟಾ ಫಟ್ ಸುದ್ದಿ 18 October 2024 appeared first on ಕನ್ನಡವಾಣಿ.ನ್ಯೂಸ್.">Uttra kannda | ಫಟಾ ಫಟ್ ಸುದ್ದಿ 18 October 2024
- Arecanut price| ಅಡಿಕೆ ಧಾರಣೆ 18 october 2024 appeared first on ಕನ್ನಡವಾಣಿ.ನ್ಯೂಸ್.">Arecanut price| ಅಡಿಕೆ ಧಾರಣೆ 18 october 2024
ಆದರೇ ಇನ್ನಿಬ್ಬರ ಮೃತದೇಹಕ್ಕಾಗಿ ಹುಡುಕಾಟ ಮಾಡಲು ಗೋವಾ ದಿಂದ ತರಿಸಿದ ಡ್ರಜ್ಜಿಂಗ್ ಬಾರ್ಜ್ ದುಬಾರಿಯಾಗುತ್ತು. ಆದರೂ ಸ್ಥಳೀಯ ಶಾಸಕ ಸತೀಶ್ ಸೈಲ್ ಮನವಿಯಂತೆ 10 ದಿನದ ಕಾರ್ಯಾಚರಣೆ 13 ದಿನ ನಡೆಸಲಾಯಿತು.
ಈ ಸಂದರ್ಭದಲ್ಲಿ ಮನುಷ್ಯನ ದೇಹದ ಮೂಳೆ ದೊರೆತಿದ್ದು FSL ವರದಿಗಾಗಿ ಹುಬ್ಬಳ್ಳಿ ಕಿಮ್ಸ್ ಗೆ ಮೂಳೆಗಳನ್ನು ರವಾನೆ ಮಾಡುವಾಗ ರಸಾಯನಿಕ ಹೆಚ್ಚಾದ್ದರಿಂದ DNA ವರದಿ ವಿಳಂಬವಾಗಿದ್ದು, DNA ನೆಗಟೀವ್ ಬಂದಿದೆ.
ಹೀಗಾಗಿ DNA ವರದಿ ಬರಲು ಇನ್ನೂ ಹತ್ತು ದಿನಗಳು ಬೇಕಾಗಬಹುದು ಎನ್ನಲಾಗುತ್ತಿದೆ.
ಕಾರ್ಯಾಚರಣೆ ಸ್ಥಗಿತ.
ಸದ್ಯ ಅಂಕೋಲದ ಶಿರೂರಿನಲ್ಲಿ ಕಾರ್ಯಾಚರಣೆ ಸ್ಥಗಿತ ಮಾಡಲಾಗಿದೆ. ಇನ್ನು ಈ ಕುರಿತು ಜಿಲ್ಲಾಧಿಕಾರಿ ಸಹ ಅಗತ್ಯ ಬಿದ್ದರೇ ಕಾರ್ಯಾಚರಣೆ ಮಾಡುವುದಾಗಿ ಹೇಳಿದ್ದರು.
ಕೇರಳದ ಅರ್ಜುನ್ ಗಾಗಿ ಇಡೀ ಕೇರಳ ಜನತೆ ಕರ್ನಾಟಕ ಸರ್ಕಾರಕ್ಕೆ ಒತ್ತಡ ತಂದು ಕೊನೆಗೂ ಅರ್ಜುನ್ ದೇಹ ಪಡೆಯುವಲ್ಲಿ ಸಫಲವಾಯಿತು. ಆದರೇ ಉತ್ತರ ಕನ್ನಡ ಜಿಲ್ಲೆಯಲ್ಲಿ ಇಬ್ಬರ ದೇಹ ಹುಡುಕಾಟ ನಡೆಸುವಂತೆ ಯಾವುದೇ ಒತ್ತಡ ಬಾರದ ಹಿನ್ನೆಲೆಯಲ್ಲಿ ಸರ್ಕಾರ ಸಹ ಸುಮ್ಮನಾಗಿದ್ದು ಕಾರ್ಯಾಚರಣೆ ನಿಲ್ಲಿಸಿದೆ.
ಉಳುವೆರೆ ಜನರಿಗೆ ಸಿಗದ ಮನೆ ಭಾಗ್ಯ.
ಶಿರೂರು ದುರಂತದಲ್ಲಿ ಗಂಗಾವಳಿ ನದಿ ಭಾಗದ ಇನ್ನೊಂದು ಭಾಗದಲ್ಲಿ ಇರುವ 21 ಮನೆಗಳು ಹಾನಿಯಾಗಿದ್ದರೇ ನಾಲ್ಕಕ್ಕೂ ಹೆಚ್ಚು ಮನೆಗಳು ಸಂಪೂರ್ಣ ನಾಶವಾಗಿತ್ತು.
ಆದರೇ NDRF ನಡಿ ಅಲ್ಪ ಹಣ ಬಂದಿದ್ದು ಬಿಟ್ಟರೇ ಮನೆ ಜಾಗ ನೀಡುವ ಭರವಸೆ ಹುಸಿಯಾಗಿದೆ.
ದ್ವನಿ ಎತ್ತಿದವರ ವಿರುದ್ಧ ಪ್ರಕರಣ
ಇನ್ನು IRB ಕಂಪನಿ ಅವೈಜ್ಞಾನಿಕ ಕಾಮಗಾರಿಯಿಂದಾಗಿ ನಡೆದ ಘಟನೆಗೆ ಹೊನ್ನಾವರದಲ್ಲಿ ಪ್ರತಿಭಟನೆ ನಡೆಸಲಾಗಿತ್ತು.ಆ ಪ್ರತಿಭಟನೆಯಲ್ಲಿ ಭಾಗಿಯಾದ ಹಲವು ಜನರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಇದರ ನಂತರ ಜಿಲ್ಲೆಯಲ್ಲಿ ಶಿರೂರು ಪರ ದ್ವನಿ ಅಡಗಿಹೋಗಿದೆ.