For the best experience, open
https://m.kannadavani.news
on your mobile browser.
Advertisement

ಯಡಿಯೂರಪ್ಪ ವಿರುದ್ಧ ವಾರೆಂಟ್| ಸಂಸದ ರಾಘವೇಂದ್ರ,ವಿಶ್ವೇಶ್ವರ ಹೆಗಡೆ ಕಾಗೇರಿ FIRST REACTION

11:11 PM Jun 13, 2024 IST | ಶುಭಸಾಗರ್
ಯಡಿಯೂರಪ್ಪ ವಿರುದ್ಧ ವಾರೆಂಟ್  ಸಂಸದ ರಾಘವೇಂದ್ರ ವಿಶ್ವೇಶ್ವರ ಹೆಗಡೆ ಕಾಗೇರಿ first reaction
Bangalur/shivamogga/karwar :- ಪೋಕ್ಸೊ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ (BS YADIYURAPPA) ಬಂಧನಕ್ಕೆ ಜಾಮೀನು ರಹಿತ ವಾರೆಂಟ್‌ ಜಾರಿಗೊಳಿಸಲಾಗಿದೆ.

Bangalur/shivamogga/karwar :- ಪೋಕ್ಸೊ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ (BS YADIYURAPPA) ಬಂಧನಕ್ಕೆ ಜಾಮೀನು ರಹಿತ ವಾರೆಂಟ್‌ ಜಾರಿಗೊಳಿಸಲಾಗಿದೆ.

Advertisement

ಪೋಕ್ಸೊ 1ನೇ ಫಾಸ್ಟ್‌ ಟ್ರ್ಯಾಕ್‌ ಕೋರ್ಟ್‌ನ ನ್ಯಾಯಾಧೀಶರಾದ ರಮೇಶ್‌ ಅವರು ಯಡಿಯೂರಪ್ಪ ವಿರುದ್ಧ ವಾರೆಂಟ್‌ (Warrant) ಜಾರಿಗೊಳಿಸಿದ್ದಾರೆ.

ಈ ಕುರಿತು ಶಿವಮೊಗ್ಗ ದಲ್ಲಿ ಸಂಸದ ರಾಘವೇಂದ್ರ ಹಾಗೂ ಕಾರವಾರದಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರತಿಕ್ರಿಯೆ ನೀಡಿದ್ದಾರೆ.

ತಮಗೆ ಅನ್ಯಾಯವಾಗಿದೆ ಎಂದು ಸಂತ್ರಸ್ತೆ ನಮ್ಮ ತಂದೆಯ ಮೂಲಕ ಪೊಲೀಸ್‌ (police) ಕಮಿಷನರ್‌ಗೆ ಕರೆ ಮಾಡಿಸಿದ್ದರು. ಆ ನಂತರ ಈ ಮಹಿಳೆ 40 ರಿಂದ 50 ಐಎಎಸ್‌, ಐಪಿಎಸ್‌ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲು ಮಾಡಿರುವುದು ಗೊತ್ತಾಗಿತ್ತು. ಕಳೆದ ಮೂರ್ನಾಲ್ಕು ತಿಂಗಳಲ್ಲಿ ಪ್ರಕರಣ ಸಂಬಂಧ ಸಿಐಡಿ ತನಿಖೆಯಾಗಿದೆ, ಯಡಿಯೂರಪ್ಪ ಅವರ ಹೇಳಿಕೆ ಪಡೆಯಲಾಗಿದೆ. ಬಿ ರಿಪೋರ್ಟ್‌ ಹಾಕುವಂತಹ ಪ್ರಕರಣ ಇದು ಎಂದರು.

ಈಗ ಏಕಾಏಕಿ ಪ್ರಕರಣವನ್ನು ಮುನ್ನೆಲೆಗೆ ತರಲಾಗಿದೆ. ಬಿಜೆಪಿ ವಿರುದ್ಧ ಸುಳ್ಳು ಆರೋಪ ಪ್ರಕರಣದಲ್ಲಿ ರಾಹುಲ್‌ ಗಾಂಧಿ, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಅವರು ನ್ಯಾಯಾಲಯಕ್ಕೆ ಹಾಜರಾಗಿದ್ದರು. ನಿಗಮ ಮಂಡಳಿ ಹಣ ದುರುಪಯೋಗ ವಿಚಾರಗಳನ್ನೆಲ್ಲ ಮರೆಮಾಚಲು ಈ ಪ್ರಕರಣವನ್ನು ಮುನ್ನಲೆಗೆ ತರಲಾಗಿರುವ ಸಾಧ್ಯತೆ ಇದೆ. ಈ ಹಿಂದೆಯು ನಮ್ಮ ಕುಟುಂಬವನ್ನು ವಾಲಿಬಾಲ್‌, ಫುಟ್‌ ಬಾಲ್‌ ಮಾಡಿಕೊಂಡಿದ್ದರು. ಎಲ್ಲದರಲ್ಲು ನ್ಯಾಯಾಲಯದಲ್ಲಿ ನ್ಯಾಯ ಸಿಕ್ಕಿತ್ತು. ಈಗಲೂ ನ್ಯಾಯಾಲಯದಲ್ಲಿ ನ್ಯಾಯ ಸಿಗುವ ವಿಶ್ವಾಸವಿದೆ ಎಂದಿದ್ದಾರೆ.

Karwar ದ ಪತ್ರಿಕಾ ಭವನದಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಇದೊಂದು ರಾಜಕೀಯ ಪ್ರೇರಿತ ಷಡ್ಯಂತ್ರದ ಭಾಗ ಯಡಿಯೂರಪ್ಪ ಅವರ ಮೇಲೆ ವಿಶ್ವಾಸವನ್ನಿಟ್ಟು ಈ ಹೇಳಿಕೆ ನೀಡುತ್ತಿದ್ದೇನೆ.ನಾನು ಬಹಳ ಸ್ಪಷ್ಟವಾಗಿ ಆರೋಪಿಸುತ್ತಿದ್ದೇನೆ,ಆರೋಪ ಮಾಡಿದ್ದ ಮಹಿಳೆ ಪ್ರತಿನಿತ್ಯ ದೂರು ಕೊಡುತ್ತಿದ್ದವಳು ಎಂದು ಎಲ್ಲರಿಗೂ ಗೊತ್ತಿದೆ.

ಯಡಿಯೂರಪ್ಪನವರಂಥ ಹಿರಿಯ ನಾಯಕರಿಗೆ ಕಪ್ಪು ಚುಕ್ಕೆ ತರುವ ಪ್ರಯತ್ನ ಇದು.ಈಗ ಪ್ರಕರಣ ನ್ಯಾಯಾಲಯದಲ್ಲಿ ತನಿಖೆಯ ಹಂತದಲ್ಲಿದೆ.ನಾನು ಇನ್ನೇನು ಹೆಚ್ಚು ಹೇಳಲು ಬಯಸುವುದಿಲ್ಲ, ಯಡಿಯೂರಪ್ಪನವರು ಸ್ಪಷ್ಟವಾಗಿ ಆರೋಪದಿಂದ ಮುಕ್ತರಾಗಿ ಹೊರಬರುವ ವಿಶ್ವಾಸವಿದೆ ಎಂದರು.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಪುತ್ರಿ ವಿರುದ್ಧ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ಬೆಂಗಳೂರಿನ ಸದಾಶಿವನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಮಾರ್ಚ್‌ 14ರಂದು ಪ್ರಕರಣ ದಾಖಲಾಗಿತ್ತು. ಏ.12ರಂದು ಯಡಿಯೂರಪ್ಪ ಅವರು ತನಿಖಾಧಿಕಾರಿ ಮುಂದೆ ಹಾಜರಾಗಿದ್ದರು. ಈಚೆಗೆ ದೂರುದಾರ ಮಹಿಳೆ ಮೃತಪಟ್ಟಿದ್ದಾರೆ. ಈ ಮಧ್ಯೆ ಮಹಿಳೆಯ ಪುತ್ರ, ಮೂರು ತಿಂಗಳಾದರೂ ಪ್ರಕರಣದ ತನಿಖೆ ಪ್ರಗತಿಯಾಗಿಲ್ಲ ಎಂದು ಆರೋಪಿಸಿ ಹೈಕೋರ್ಟ್‌ ಮೊರೆ ಹೋಗಿದ್ದಾರೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ