Murdeshwar| ಸಮುದ್ರದಲ್ಲಿ ಮುಳುಗಿ ವಿದ್ಯಾರ್ಥಿ ಸಾವು-ಓರ್ವನ ರಕ್ಷಣೆ.
ಮುರುಡೇಶ್ವರ :-ಪ್ರವಾಸಕ್ಕೆಂದು ಬಂದಿದ್ದ ಬೆಂಗಳೂರಿನ (Bangalur )ವಿದ್ಯಾ ಸೌಧ ಕಾಲೇಜು ವಿದ್ಯಾರ್ಥಿ ಸಮುದ್ರದಲ್ಲಿ ಮುಳುಗಿ ಸಾವು ಕಂಡಿದ್ದು ಓರ್ವ ವಿದ್ಯಾರ್ಥಿಯನ್ನು ರಕ್ಷಣೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರ್ಡೇಶ್ವರ ಕಡಲ ತೀರದಲ್ಲಿ ಇಂದು ನಡೆದಿದೆ.
ಬೆಂಗಳೂರಿನ ವಿದ್ಯಾಸೌಧ ಪಿ.ಯು ಕಾಲೇಜು ವಿದ್ಯಾರ್ಥಿ ಗೌತಮ್ (17) ಸಾವು ಕಂಡ ವಿಧ್ಯಾರ್ಥಿಯಾಗುದ್ದು ,
ಬೆಂಗಳೂರಿನ ಧನುಶ್ .ಡಿ. ರಕ್ಷಣೆಗೊಳಗಾದ ವಿದ್ಯಾರ್ಥಿಯಾಗಿದ್ದಾನೆ.
ಬೆಂಗಳೂರಿನಿಂದ ವಿದ್ಯಾ ಸೌಧ ಕಾಲೇಜಿನ 220 ವಿದ್ಯಾರ್ಥಿಗಳು ಪ್ರವಾಸಕ್ಕೆ ಆಗಮಿಸಿದ್ದರು. ಈ ವೇಳೆ
ಇಬ್ಬರು ವಿದ್ಯಾರ್ಥಿಗಳು ಸಮುದ್ರದ ಆಳದಲ್ಲಿ ಈಜಲು ತೆರಳಿದ್ದು ಅಲೆಯ ಹೊಡೆತಕ್ಕೆ ಗೌತಮ್ ನೀರಿನಲ್ಲಿ ಮುಳಿಗಿದ್ದು ಇನ್ನೊಬ್ಬ ವಿದ್ಯಾರ್ಥಿ ಧನುಷ್ ನನ್ನು ನೋಡಿದ ಲೈಫ್ ಗಾರ್ಡ ಹಾಗೂ ಪೊಲೀಸರು ಆತನ ರಕ್ಷಣೆ ಓಷಿಯನ್ ಅಡ್ವೆಂಚರ್ಸ್ ನವರ ಮೂರು ಬೋಟುಗಳನ್ನು ಕೊಂಡೆಯ್ದು ಧನುಷ್ ನನ್ನು ರಕ್ಷಣೆ ಮಾಡಿದ್ದಾರೆ. ಆದರೇ ಗೌತಮ್ ಕೂಡ ಈಜಲು ಬಂದಿರುವ ಬಗ್ಗೆ ಧನುಷ್ ಮಾಹಿತಿ ಹೇಳಲೇ ಇಲ್ಲ .
ಇದನ್ನೂ ಓದಿ :-Mundgodu ವಿದ್ಯುತ್ ಅವಘಡ| 78 ಕುರಿಗಳು ಸಜೀವ ದಹನ.
ವಿದ್ಯಾರ್ಥಿ ಸಂಖ್ಯೆ ಎಣಿಸಿದಾಗ ಗೌತಮ್ ಕೂಡ ಸಮುದ್ರದಲ್ಲಿ ಈಜಲು ಹೋಗಿರುವುದು ಗಮನಕ್ಕೆ ಬಂದು ಮುರುಡೇಶ್ವರ ಎ.ಸ್.ಐ ರುದ್ರೇಶ್,ಲೈಪ್ ಗಾರ್ಡ ಹಾಗೂ ಓಷಿಯನ್ ಅಡ್ವೆಂಚರ್ಸ್ ತಂಡ ದಿಂದ ಶೋಧ ನಡೆಸಿದರೂ ರಕ್ಷಣೆ ಸಾಧ್ಯವಾಗಲಿಲ್ಲ. ಆದರೂ ಈ ತಂಡ ಶವವನ್ನು ಹೊರತೆಗೆದಿದ್ದು ಘಟನೆ ಸಂಬಂಧ ಮುರುಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಕ್ಷಣೆಗೊಳಗಾದ ಧನುಷ್ ಗೆ RNS ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು ಸುರಕ್ಷಿತವಾಗಿದ್ದಾನೆ.