Karnataka:ಅಪ್ಸರಕೊಂಡ-ಮುಗಳಿ ಸಾಗರ ವನ್ಯಜೀವಿಧಾಮ ಸೆಪ್ಟೆಂಬರ್ ನಲ್ಲಿ ಲೋಕಾರ್ಪಣೆ.
Karnataka:ಅಪ್ಸರಕೊಂಡ-ಮುಗಳಿ ಸಾಗರ ವನ್ಯಜೀವಿಧಾಮ ಸೆಪ್ಟೆಂಬರ್ ನಲ್ಲಿ ಲೋಕಾರ್ಪಣೆ.

ಬೆಂಗಳೂರು:- ಉತ್ತರ ಕನ್ನಡ ಜಿಲ್ಲೆಯ ರಮಣೀಯ ತಾಣವಾದ ಅಪ್ಸರಕೊಂಡ -ಮುಗಳಿ ಪ್ರದೇಶವನ್ನು ರಾಜ್ಯದ ಪ್ರಥಮ ಸಾಗರ ವನ್ಯಜೀವಿ ಧಾಮ ಎಂದು ಘೋಷಿಸಲಾಗಿದ್ದು, ಸೆಪ್ಟೆಂಬರ್ ನಲ್ಲಿ ವಿಧ್ಯುಕ್ತವಾಗಿ ಲೋಕಾರ್ಪಣೆ ಮಾಡುವುದಾಗಿ ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಇದನ್ನೂ ಓದಿ:-Honnavar : ಮಹಿಳೆ ಸ್ನಾನ ಮಾಡುವಾಗ ಇಣುಕಿದ ಕಾಮುಕ ಪೊಲೀಸರ ವಶಕ್ಕೆ
ರಾಜ್ಯ ವನ್ಯಜೀವಿ ಮಂಡಳಿಯ 3ನೇ ಸ್ಥಾಯಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಹಿಂದಿನ ಸಭೆಯಲ್ಲಿ ಅಂಗೀಕಾರ ನೀಡಲಾಗಿದ್ದ ಈ ಧಾಮಕ್ಕೆ ಸಚಿವ ಸಂಪುಟವೂ ಅನುಮೋದನೆ ನೀಡಿದ್ದು, ಅಧಿಕೃತ ಕಾರ್ಯಕ್ರಮ ಆಯೋಜಿಸಿ ಪ್ರಕಟಿಸುವುದಾಗಿ ತಿಳಿಸಿದರು.
ಉತ್ತರ ಕನ್ನಡದ ಮಂಕಿಯಿಂದ ಕಾಸರಕೋಡಿನವರೆಗಿನ 7.5 ಕಿ.ಮೀ. ಉದ್ದದ ವ್ಯಾಪ್ತಿಯಲ್ಲಿ ಕಡಲತೀರ ಹಾಗೂ ಸುತ್ತಮುತ್ತಲಿನ 835.02 ಹೆಕ್ಟೇರ್ ಅರಣ್ಯಪ್ರದೇಶ ಹಾಗೂ ಅರಬ್ಬೀ ಸಮುದ್ರದ 6 ಕಿ.ಮೀ. ಜಲ ಪ್ರದೇಶದಲ್ಲಿನ 5124.302 ಹೆಕ್ಟೇರ್ ಪ್ರದೇಶ ಈ ಧಾಮದ ವ್ಯಾಪ್ತಿಗೆ ಒಳಪಡಲಿದ್ದು, ಈ ಘೋಷಣೆಯಿಂದ ಸಮುದ್ರ ಸೌತೆ, ಡಾಲ್ಫಿನ್ ಸೇರಿದಂತೆ ಅಪರೂಪದ ಜಲಚರಗಳ ಸಂರಕ್ಷಣೆ ಮತ್ತು ಸಂವರ್ಧನೆ ಆಗಲಿದೆ ಎಂದು ತಿಳಿಸಿದರು.
ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅವರಿಂದು ಕರ್ನಾಟಕ ವನ್ಯಜೀವಿ ಮಂಡಳಿಯ 3ನೆ ಸ್ಥಾಯಿಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.