For the best experience, open
https://m.kannadavani.news
on your mobile browser.
Advertisement

Dharmasthala ಶವಶೋಧಕ್ಕೆ ಪ್ರತಿದಿನ ಖರ್ಚು ಎಷ್ಟು ಗೊತ್ತಾ

10:46 PM Aug 05, 2025 IST | ಶುಭಸಾಗರ್
dharmasthala ಶವಶೋಧಕ್ಕೆ ಪ್ರತಿದಿನ ಖರ್ಚು ಎಷ್ಟು ಗೊತ್ತಾ
ಪ್ರಕೃತಿ ಮೆಡಿಕಲ್ ,ಕಾರವಾರ.

Dharmasthala ಶವಶೋಧಕ್ಕೆ ಪ್ರತಿದಿನ ಖರ್ಚು ಎಷ್ಟು ಗೊತ್ತಾ?

Advertisement

ಮಂಗಳೂರು: ಧರ್ಮಸ್ಥಳದ ಹೂತು ಹೋದ ಶವಗಳ ರಹಸ್ಯ (Dharmasthala Mass Burial Case) ಕೆದಕುವ ಕೆಲಸ ಕಳೆದ 7 ದಿನಗಳಿಂದ ನಡೆಯುತ್ತಿದ್ದು  ಇದೀಗ ತನಿಖೆಗೆ ಲಕ್ಷ ಗಟ್ಟಲೇ ಖರ್ಚಾಗುತ್ತಿದೆ.ಅಂದಾಜು ಪ್ರತಿ ದಿನ ಸರ್ಕಾರಕ್ಕೆ 2 ಲಕ್ಷ ರೂ. ಖರ್ಚಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ:-Karnataka:ಸಾರಿಗೆ ನೌಕರರ ಮುಷ್ಕರಕ್ಕೆ ಉತ್ತರ ಕನ್ನಡ ,ಶಿವಮೊಗ್ಗ ಜಿಲ್ಲೆಯಲ್ಲಿ ಹೇಗಿತ್ತು ಪ್ರತಿಕ್ರಿಯೆ ?

ವಿಶೇಷ ತನಿಖಾ ತಂಡ (SIT) ನಡೆಸುತ್ತಿರುವ ತನಿಖೆಗೆ 260 ಅಧಿಕಾರಿ, ಸಿಬ್ಬಂದಿ ಬಳಕೆ ಆಗುತ್ತಿದೆ. ಎಸ್‌ಐಟಿ ತಂಡದಲ್ಲಿ 26 ಇದ್ದರೆ, 5 ಮಂದಿ ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರು, 15 ಪೌರ ಕಾರ್ಮಿಕರು, ಭದ್ರತೆಗಾಗಿ 200 ಪೊಲೀಸ್‌(police) ಸಿಬ್ಬಂದಿ ಇದ್ದಾರೆ.

ಇದನ್ನೂ ಓದಿ:-Karwar:ಮನೆಯಲ್ಲಿ ದೇವರಿಗೆ ಹಚ್ಚಿಟ್ಟಿದ್ದ ದೀಪದಿಂದ ಧಗ -ಧಹಿಸಿದ ಮನೆ -ಸಂಪೂರ್ಣ ನಾಶ

ಒಬ್ಬರು ಸಹಾಯಕ ಆಯುಕ್ತ (ಎಸಿ), ಒಬ್ಬರು ತಹಶೀಲ್ದಾರ್‌, 5 ಮಂದಿ ಸ್ಥಳೀಯಾಡಳಿತ ಅಧಿಕಾರಿಗಳು ನಿಯೋಜನೆಗೊಂಡಿದ್ದಾರೆ. ಇವರೆಲ್ಲರ ಸಂಬಳ ಸೇರಿ ನಿತ್ಯ ಅಂದಾಜು 2 ಲಕ್ಷ ರೂ. ಖರ್ಚಾಗಬಹುದು ಎಂದು ಅಂದಾಜಿಸಲಾಗಿದೆ

ನಿತ್ಯ 2 ಲಕ್ಷ ಖರ್ಚು?

ಅಧಿಕಾರಿಗಳು,ಪೋಲಿಸರು,ಕಾರ್ಮಿಕರ ಊಟ, ತಿಂಡಿಗೆ ದಿನಕ್ಕೆ 35 ಸಾವಿರ ರೂ., ಅಧಿಕಾರಿಗಳ ವಿಶ್ರಾಂತಿಗಾಗಿ ಲಡ್ಜ್‌ಗೆ ದಿನಕ್ಕೆ 25 ಸಾವಿರ ರೂ., ಗುಂಡಿ ಅಗೆಯುವ ಕಾರ್ಮಿಕರಿಗೆ ದಿನಕ್ಕೆ 2 ಸಾವಿರ ರೂ.ಯಂತೆ 15 ಜನ ಕಾರ್ಮಿಕರಿಗೆ ದಿನಕ್ಕೆ 30 ಸಾವಿರ ರೂ. ಆಗಲಿದೆ.

ಪೊಲೀಸ್, ವೈದ್ಯರ ಓಡಾಟಕ್ಕೆ ವಾಹನ, ಪೆಟ್ರೋಲ್ ಬಳಕೆಗೆ ದಿನಕ್ಕೆ 20 ಸಾವಿರ ರೂ., ವಿಧಿ ವಿಜ್ಞಾನ ತಂಡದ ವಿಶೇಷ ಉಪಕರಣಗಳ ಬಳಕೆ ದಿನಕ್ಕೆ 3 ರಿಂದ 4 ಸಾವಿರ ರೂ. ಗುಂಡಿ ಸಿಕ್ಕ ಕಡೆ ತಾತ್ಕಾಲಿಕ ಟೆಂಟ್ ನಿರ್ಮಾಣಕ್ಕೆ ದಿನಕ್ಕೆ 3-4 ಸಾವಿರ ರೂ. ಖರ್ಚಾಗಲಿದೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ