Karnataka:ಸಿದ್ದರಾಮಯ್ಯ ಸಂಪುಟದಿಂದ ಕೆ.ಎನ್ ರಾಜಣ್ಣ ಕಿಕ್‌ಔಟ್ ! ದಿಡೀರ್ ಬೆಳವಣಿಗೆ ಏನಾಯ್ತು?
Karnataka:ಸಿದ್ದರಾಮಯ್ಯ ಸಂಪುಟದಿಂದ ಕೆ.ಎನ್ ರಾಜಣ್ಣ ಕಿಕ್‌ಔಟ್ ! ದಿಡೀರ್ ಬೆಳವಣಿಗೆ ಏನಾಯ್ತು?

ಬೆಂಗಳೂರು:- ರಾಜ್ಯ ಸಚಿವ ಸಂಪಯಟದಿಂದ ಸಹಕಾರ ಮಂತ್ರಿ ಕೆಎನ್ ರಾಜಣ್ಣ (KN Rajanna)ರನ್ನು ಕಿಕ್ ಔಟ್ ಮಾಡಲಾಗಿದೆ. ಹೈಕಮಾಂಡ್ ಸೂಚನೆಯಂತೆ ಸಿದ್ದರಾಮಯ್ಯನವರು ಈ ನಿರ್ಧಾರ ಮಾಡುದ್ದು , ಸಂಪುಟ ಸಚಿವ ಸ್ಥಾನದಿಂದ ವಜಾಮಾಡಲಾಗಿದೆ.
ವಿವಾಧಿತ ಹೇಳಿಕೆ ಮೂಲಕವೇ ಸದ್ದು ಮಾಡುತಿದ್ದ ಸಚಿವ ರಾಜಣ್ಣ ಸಿದ್ದರಾಮಯ್ಯನವರ ಅತ್ಯಾಪ್ತರು.ರಾಹುಲ್ ಗಾಂಧಿ ಮತ ಅಕ್ರಮದ ಬಗ್ಗೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತಿದ್ದರು.ಆದರೇ ರಾಜಣ್ಣ ವ್ಯತಿರಿಕ್ತ ಹೇಳಿಕೆ ಹೈಕಮಾಂಡ್ ಗೆ ದೊಡ್ಡ ಹೊಡೆತ ನೀಡಿತ್ತು. ಇದಲ್ಲದೇ ರಾಹುಲ್ ಗಾಂಧಿ ಸುಳ್ಳು ಹೇಳುತಿದ್ದಾರೆಯೇ ಎಂಬ ಬಗ್ಗೆ ಅನುಮಾನ ಮೂಡುವಂತೆ ಮಾಡಿತ್ತು.
ಇದನ್ನೂ ಓದಿ:-Karnataka:ಅಪ್ಸರಕೊಂಡ-ಮುಗಳಿ ಸಾಗರ ವನ್ಯಜೀವಿಧಾಮ ಸೆಪ್ಟೆಂಬರ್ ನಲ್ಲಿ ಲೋಕಾರ್ಪಣೆ.
ವಜಾಗೊಳಿಸುವ ಮುಜುಗರವನ್ನು ತಪ್ಪಿಸಲು ರಾಜಣ್ಣ ಅವರು ತಮ್ಮ ಪುತ್ರ, ಪರಿಷತ್ ಸದಸ್ಯ ರಾಜೇಂದ್ರ ಮೂಲಕ ಸಿಎಂಗೆ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದರು. ಆದರೆ ಹೈಕಮಾಂಡ್ ಖಡಕ್ ಸೂಚನೆಯ ಹಿನ್ನೆಲೆಯಲ್ಲಿ ಸಿಎಂ ರಾಜೀನಾಮೆ ಪತ್ರವನ್ನು ಅಂಗೀಕರಿಸದೇ ಸಂಪುಟದಿಂದಲೇ ವಜಾಗೊಳಿಸುವಂತೆ ರಾಜ್ಯಪಾಲರಿಗೆ ಶಿಫಾರಸು ಮಾಡಿದ್ದರು.
ಸಿಎಂ ಶಿಫಾರಸಿನಂತೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ರಾಜಣ್ಣ ಅವರನ್ನು ವಜಾಗೊಳಿಸುವ ಗೆಜೆಟ್ ಅಧಿಸೂಚನೆಗೆ ಸಹಿ ಹಾಕಿದ್ದಾರೆ.
ವಜಾ ಗೊಳಿಸಿದ ಆದೇಶ ಪತ್ರ.
