Special train :ಕರ್ನಾಟಕದಿಂದ ಶಬರಿಮಲೆಗೆ ವಿಶೇಷ ರೈಲು ಸಂಚಾರ
Special train :ಶಬರಿಮಲೆಗೆ ಕರ್ನಾಟಕದಿಂದ (Karnataka) ತೆರಳುವ ಭಕ್ತರಿಗಾಗಿ ರೈಲ್ವೆ ಇಲಾಖೆ ಸಿಹಿ ಸುದ್ದಿ ನೀಡಿದೆ.ನವೆಂಬರ್ ಮಧ್ಯದಲ್ಲಿ ಶಬರಿಮಲೆ ಹೋಗುವ ಭಕ್ತರ ಸಂಖ್ಯೆ ಹೆಚ್ಚಾಗುವ ಹಿನ್ನಲೆಯಲ್ಲಿ
ಮೂರೂ ತಿಂಗಳು ಈ ವಿಶೇಷ ರೈಲು ಸಂಚರಿಸುತ್ತವೆ.
ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ (Sir. M. Vishweshwarayya Terminal) ಬೆಂಗಳೂರು ನಿಲ್ದಾಣಗಳ ನಡುವೆ ವಿಶೇಷ ರೈಲುಗಳ ಸೇವೆಯನ್ನು ಕಲ್ಪಿಸಲಾಗಿದೆ ಎಂದು ನೈರುತ್ಯ ರೈಲ್ವೆ ಇಲಾಖೆ ಮಾಹಿತಿ ನೀಡಿದೆ.
ಇಂದಿನಿಂದ (ನವೆಂಬರ್ 12) ಮುಂದಿನ ವರ್ಷ(2025) ಜನವರಿ 28ರವರೆಗೆ ಈ ಕರ್ನಾಟಕ-ಶಬರಿಮಲೈ ವಿಶೇಷ ರೈಲುಗಳು ಸಂಚಾರ ಸೇವೆ ನೀಡಲಿದೆ.
ಈ ವಿಶೇಷ ರೈಲುಗಳು ಕರ್ನಾಟಕದಿಂದ ಕೇರಳ ರಾಜ್ಯದ ಕೊಚುವೆಲ್ಲಿ ರೈಲು ನಿಲ್ದಾಣಕ್ಕೆ ತಲುಪಲಿವೆ. ಪ್ರತಿಯೊಂದು ದಿಕ್ಕಿನಲ್ಲಿ ಒಟ್ಟು 12 ಟ್ರಿಪ್‌ಗಳು ಹೊಗಲಿದ್ದು ವಾರಕ್ಕೆ ಒಮ್ಮೆಯಂತೆ ಮುಂದಿನ ಮೂರು ತಿಂಗಳು 12 ವಾರ ಈ ರೈಲು ಸಂಚರಿಸಲಿವೆ.
ಸಮಯ ಏನು?
- ರೈಲು ಸಂಖ್ಯೆ 06083 ಕೊಚುವೇಲಿ-ಎಸ್ಎಂವಿಟಿ ಬೆಂಗಳೂರು ಸಾಪ್ತಾಹಿಕ ಎಕ್ಸ್ ಪ್ರೆಸ್ ವಿಶೇಷ ರೈಲು ಕೊಚುವೇಲಿ ನಿಲ್ದಾಣದಿಂದ ನವೆಂಬರ್ 12 ರಿಂದ 2024 ಜನವರಿ 28 ವರಗೆ ಪ್ರತಿ ಮಂಗಳವಾರ ಸಂಜೆ 6:05 ಗಂಟೆಗೆ ಹೊರಟು, ಮರುದಿನ ದಿನ 10:55 ಗಂಟೆಗೆ ಎಸ್ಎಂವಿಟಿ ಬೆಂಗಳೂರು ತಲುಪಲಿದೆ.
ಇದನ್ನೂ ಓದಿ:-Boat Trip: ಮೈ ಮೇಲೆ ಬಟ್ಟೆ ಇಲ್ಲದೆ ಪ್ರವಾಸ ಯಾವಾಗ? ಸಂಪೂರ್ಣ ವಿವರ ಇಲ್ಲಿದೆ
- ರೈಲು ಸಂಖ್ಯೆ 06084 ಎಸ್ಎಂವಿಟಿ ಬೆಂಗಳೂರು-ಕೊಚುವೇಲಿ ಸಾಪ್ತಾಹಿಕ ಎಕ್ಸ್ ಪ್ರೆಸ್ ವಿಶೇಷ ರೈಲು ಎಸ್ಎಂವಿಟಿ ಬೆಂಗಳೂರು ನಿಲ್ದಾಣದಿಂದ ನವೆಂಬರ್ 13 ರಿಂದ 2025 ಜನವರಿ 29 ವರಗೆ ಪ್ರತಿ ಬುಧವಾರ ಮಧ್ಯಾಹ್ನ 12:45 ಗಂಟೆಗೆ ಹೊರಟು, ಮರುದಿನ ದಿನ ಬೆಳಿಗ್ಗೆ 6:45 ಗಂಟೆಗೆ ಕೊಚುವೇಲಿ ತಲುಪಲಿದೆ.
ಈ ರೈಲು ಎರಡು ದಿಕ್ಕಿನ ಮಾರ್ಗದಲ್ಲಿ ಕೊಲ್ಲಮ್, ಕಾಯಂಕುಳಂ, ಚೆಂಗನ್ನೂರ್, ಪಾಲಕಾಡ್, ಪೊದನೂರ್, ಈರೋಡ್, ಸೇಲಂ, ಜೋಲಾರ್ ಪೆಟ್ಟಾಯ್ ಜಂಕ್ಷನ್‌ಗಳಲ್ಲಿ ನಿಲುಗಡೆಯಾಗಲಿದೆ. ಇನ್ನು ಶಬರಿಮಲೆಗೆ ತೆರಳುವ ಭಕ್ತರು ಚೆಂಗನ್ನೂರು ಇಳಿದು ಅಲ್ಲಿಂದ ಪಂಪಾಗೆ ಬಸ್ ಮೂಲಕ ಭಕ್ತರು ತೆರಳಬಹುದು.
ಪ್ರಯಾಣಿಕರು ಅಧಿಕೃತ ವೆಬ್ಸೈಟ್-
(www.enquiry.indianrail.gov.in) ಗೆ ಭೇಟಿ ನೀಡಿ, NTES ಅಪ್ಲಿಕೇಶನ್ ಬಳಸಿ ಅಥವಾ 139 ಗೆ ಡಯಲ್ ಮಾಡುವ ಮೂಲಕ ಈ ರೈಲುಗಳ ಸಮಯವನ್ನು ಪರಿಶೀಲಿಸಬಹುದು.
Feed: invalid feed URL