ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Karnataka:ಸಿನಿಮಾ ರೂಪದಲ್ಲಿ ಮೂಡಿಬರಲಿದೆ ಶಿರೂರು ದುರಂತ ಘಟನೆ!

ಕಾರವಾರ :- ಉತ್ತರ ಕನ್ನಡ (uttara kannada) ಜಿಲ್ಲೆಯ ಅಂಕೋಲತಾಲೂಕಿನ ಶಿರೂರಿನಲ್ಲಿ ಕಳೆದ ವರ್ಷ ಜುಲೈ 16 ರಂದು ಭೂಕುಸಿತ ಸಂಭವಿಸಿ ಪುಟ್ಟ ಮಕ್ಕಳಾದಿಯಾಗಿ 11 ಜನರು ಸಾವು ಕಂಡರು. ಇದರಲ್ಲಿ ಈವರೆಗೂ ಅಂಕೋಲದ ಜಗನ್ನಾಥ್ ,ಲೋಕೇಶ್ ಶವಗಳು ದೊರೆಯಲಿಲ್ಲ.
06:12 PM Jul 29, 2025 IST | ಶುಭಸಾಗರ್
ಕಾರವಾರ :- ಉತ್ತರ ಕನ್ನಡ (uttara kannada) ಜಿಲ್ಲೆಯ ಅಂಕೋಲತಾಲೂಕಿನ ಶಿರೂರಿನಲ್ಲಿ ಕಳೆದ ವರ್ಷ ಜುಲೈ 16 ರಂದು ಭೂಕುಸಿತ ಸಂಭವಿಸಿ ಪುಟ್ಟ ಮಕ್ಕಳಾದಿಯಾಗಿ 11 ಜನರು ಸಾವು ಕಂಡರು. ಇದರಲ್ಲಿ ಈವರೆಗೂ ಅಂಕೋಲದ ಜಗನ್ನಾಥ್ ,ಲೋಕೇಶ್ ಶವಗಳು ದೊರೆಯಲಿಲ್ಲ.

ಸಿನಿಮಾ ರೂಪದಲ್ಲಿ ಮೂಡಿಬರಲಿದೆ ಶಿರೂರು ದುರಂತ ಘಟನೆ!

ಶಿರೂರು ಭೂಕುಸಿತ ಘಟನೆಯನ್ನು ಯಾರು ಸಿನಿಮಾ ಮಾಡಲಿದ್ದಾರೆ? ವಿಡಿಯೋ ನೋಡಿ:-

Advertisement

ಕಾರವಾರ :- ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ (uttara Kannada) ಅಂಕೋಲತಾಲೂಕಿನ ಶಿರೂರಿನಲ್ಲಿ (shirur) ಕಳೆದ ವರ್ಷ ಜುಲೈ 16 ರಂದು ಭೂಕುಸಿತ ಸಂಭವಿಸಿ ಪುಟ್ಟ ಮಕ್ಕಳಾದಿಯಾಗಿ 11 ಜನರು ಸಾವು ಕಂಡರು. ಇದರಲ್ಲಿ ಈವರೆಗೂ ಅಂಕೋಲದ ಜಗನ್ನಾಥ್ ,ಲೋಕೇಶ್ ಶವಗಳು ದೊರೆಯಲಿಲ್ಲ.

ಮೂರು ತಿಂಗಳ ಅವಿರತ ಶ್ರಮದ ಫಲವಾಗಿ ಕೇರಳದ ಅರ್ಜುನ್ ಮೃತದೇಹವನ್ನು ಸಂಪೂರ್ಣವಾಗಿ ಹೊರತೆಗೆಯಲಾಯಿತು. ಇದಕ್ಕಾಗಿ ಕೇರಳ,ಕರ್ನಾಟಕ ಎರಡು ರಾಜ್ಯದ ಶಾಸಕರು,ಸಚಿವರು ಪ್ರಯತ್ನಪಟ್ಟರು.

Advertisement

ಇದನ್ನೂ ಓದಿ:-Shirur: ಶಿರೂರು ಗುಡ್ಡ ಕುಸಿಯುವ ಹಿನ್ನಲೆ- ನಿಷೇಧಾಜ್ಞೆ ಜಾರಿ

ಒಂದು ವರ್ಷ ಪೂರ್ತಿಯಾದರೂ ಕೇರಳದ ಅರ್ಜುನ್ ನನ್ನು ಕೇರಳದ ಜನರು ಮರೆತಿಲ್ಲ.ಆತ ಬದುಕಿ ಬರಲಿ ಎಂದು ಕೇರಳದ ಜನತೆ ಅಂದು ಮಸೀದಿ,ಚರ್ಚ್ ,ಹಿಂದೂ ದೇವಾಲಯಗಳಲ್ಲಿ ವಿಶೇಷ ಪೂಜೆ ನೆರವೇರಿಸಿ ಪ್ರಾರ್ಥನೆ ಮಾಡಿದ್ದರು. ಆದರೇ ಆತ ಬದುಕಿಬರಲಿಲ್ಲ. ಇನ್ನು ಈತನ ಶವ ಹುಡುಕಾಟಕ್ಕೆ ಕೋಟಿಗಟ್ಟಲೇ ಹಣ ವ್ಯಯಿಸಿದರು.

ನಂತರ ಕೊನೆಗೂ ಗೋವಾದಿಂದ ಡ್ರಜ್ಜಿಂಗ್ ಮಿಷನ್ ತರಿಸಿ ಆತನ ಶವ ಹಾಗೂ ಲಾರಿಯನ್ನು ಹೊರತೆಗೆಯುವಲ್ಲಿ ಕರ್ನಾಟಕ ಸರ್ಕಾರ ಯಶಸ್ಸು ಕಂಡಿತು.

ಇದನ್ನೂ ಓದಿ:-Shirur :ಗುಡ್ಡ ಕುಸಿತದಲ್ಲಿ ಮಾಲೀಕನನ್ನು ಕಳೆದುಕೊಂಡು ಅನಾಥವಾಗಿದ್ದ ಶ್ವಾನ ಮ್ಯಾರಥಾನ್ ನಲ್ಲಿ ಓಟ :ಬೆಳ್ಳಿ ಪದಕ

ಇನ್ನು ಈವರೆಗೂ ಕರ್ನಾಟಕದ (karnataka) ಜಗನ್ನಾಥ ಹಾಗೂ ಲೋಕೇಶ್ ಶವ ಹೊರತೆಗೆಯಲು ರಾಜ್ಯ ಸರ್ಕಾರ ವಿಫಲವಾಗಿತು. ಅಲ್ಪ ಪರಿಹಾರ ನೀಡಿದರೂ ಜಗನ್ನಾಥ್ ಹಾಗೂ ಲೋಕೇಶ್ ಕುಟುಂಬ ತಮ್ಮವರ ಅಸ್ತಿಪಂಜರವನ್ನಾದರೂ ನೀಡುವಂತೆ ಮನವಿ ಮಾಡುತ್ತಲೇ ಇದ್ದಾರೆ.

ಇನ್ನು ಗಂಗಾವಳಿಯಲ್ಲಿ ಬಿದ್ದ ಮಣ್ಣನ್ನು ಈವರೆಗೂ ತೆಗೆಯಲು ಸಾಧ್ಯವಾಗುತ್ತಿಲ್ಲ. ಮತ್ತೆ ಇದೇ ಭಾಗದಲ್ಲಿ ಭೂಕುಸಿತವಾಗುವ ಭೀತಿ ಕಾಡುತ್ತಿದೆ. ಘಟನೆ ನಡೆದು ಒಂದುವರ್ಷವಾದರೂ ಈ ಕಾರ್ಯಾಚರಣೆ ಸಂಪೂರ್ಣ ಮುಗಿಯಲೇ ಇಲ್ಲ. ಹೀಗಾಗಿ ಈ ದುರ್ಘಟನೆ ಎರಡು ರಾಜ್ಯದ ಜನರ ಮನಸ್ಸಿನಲ್ಲಿ ಅಚ್ಚಳಿಯದಂತೆ ಉಳಿದಿದೆ.

ಇದನ್ನೂ ಓದಿ:-Shirur ಭೂ ಕುಸಿತ ದುರಂತ :ಕೈ ಸೇರಿದ DNA ವರದಿ ಜಿಲ್ಲಾಧಿಕಾರಿ ಹೇಳಿದ್ದೇನು?

ಹೀಗಾಗಿ ಕೇರಳದ ಶಾಸಕ ಅಶ್ರಪ್ ರವರು ಈ ಘಟನೆ ಕುರಿತು ಪುಸ್ತಕ ಬರೆಯುತಿದ್ದು ಇದರ ಜೊತೆ ಮಲೆಯಾಳಂ ಚಿತ್ರರಂಗದ ಪ್ರಸಿದ್ಧ ನಿರ್ದೇಶಕರೊಬ್ಬರು ಸಿನಿಮಾ ಮಾಡಲು ಸಿದ್ದವಾಗಿದ್ದು ಶೀಘ್ರದಲ್ಲಿ ಸಟ್ಟೇರಲಿದೆ.

ಚಿತ್ರ- ಶಿರೂರು ಭೂ ಕುಸಿತದ ಬಗ್ಗೆ ಪುತ್ತಕ ಬರೆಯುತ್ತಿರು ಕೇರಳ ಶಾಸಕ ಅಶ್ರಪ್ (ಒಳ ಚಿತ್ರ)

ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಕೇರಳದ ಶಾಸಕ ಅಶ್ರಪ್ ನವರು ,ಕೇರಳ ಜನರ ಮನಸ್ಸಿನಲ್ಲಿ ಅರ್ಜುನ್ ಇನ್ನೂ ಮಾಸಿಲ್ಲ. ಆತನ ನೆನಪು ಈಗಲೂ ಕೇರಳಿಗರ ಮನದಲ್ಲಿ ಕಾಡುತ್ತಿದೆ. ಹೀಗಾಗಿ ನಾನು ಪುಸ್ತಕ ಬರೆಯುತಿದ್ದು ಇದನ್ನು ಅರಿತ ನಿರ್ದೇಶಕರೊಬ್ಬರು ಸಿನಿಮಾ ಮಾಡಲು ಮುಂದೆ ಬಂದಿದ್ದಾರೆ.

ಹೀಗಾಗಿ ಶೀಘ್ರದಲ್ಲಿ ಸಿನಿಮಾ ಚಿತ್ರೀಕರಣ ಪ್ರಾರಂಭವಾಗಲಿದೆ.ಮಲೆಯಾಳಂ ನಲ್ಲಿ ಚಿತ್ರ ಮೂಡಿಬರಲಿದೆ ಎಂದು ಕೇರಳ ಶಾಸಕ ಅಶ್ರಪ್ ತಿಳಿಸಿದ್ದಾರೆ.

 

Advertisement
Tags :
Arjunkarnatak newskeralamalayalam movieShirur landslideUttara Kannadaಕರ್ನಾಟಕಶಿರೂರು
Advertisement
Next Article
Advertisement