Karnataka| ನವೆಂಬರ್ 28 ಕ್ಕೆ ಕರಾವಳಿಗೆ ಪ್ರಧಾನಿ ಮೋದಿ| ಯಾವ ಕ್ಷೇತ್ರಗಳ ಭೇಟಿ ವಿವರ ಇಲ್ಲಿದೆ.
Karnataka| ನವೆಂಬರ್ 28 ಕ್ಕೆ ಕರಾವಳಿಗೆ ಪ್ರಧಾನಿ ಮೋದಿ| ಯಾವ ಕ್ಷೇತ್ರಗಳ ಭೇಟಿ ವಿವರ ಇಲ್ಲಿದೆ.
Karnataka news( 29 october 2025) ಉಡುಪಿ:- ಕರ್ನಾಟಕದ ಕರಾವಳಿ ಭಾಗಕ್ಕೆ ನವಂಬರ್ 28 ರಂದು ಪ್ರಧಾನಿ ನರೇಂದ್ರ ಮೋದಿ ( Prime Minister Narendra Modi) ಆಗಮಿಸಲಿದ್ದು ,ಧಾರ್ಮಿಕ ಕಾರ್ಯದಲ್ಲಿ ಭಾಗಿಯಾಗಲಿದ್ದಾರೆ.
ಹೌದು ನವೆಂಬರ್ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕ ಪ್ರವಾಸ ಕೈಗೊಳ್ಳಲಿದ್ದು ,ಉಡುಪಿಯ ಶ್ರೀ ಕೃಷ್ಣನ ದರ್ಶನ, ಭಗವದ್ಗೀತೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದು ಈ ಬಗ್ಗೆ ಕಾರ್ಯಕ್ರಮಗಳು ನಿಗಧಿಯಾಗಿದೆ.
ಕೃಷ್ಙನ ನಾಡು ಉಡುಪಿಗೆ ಪ್ರಧಾನಿ ನರೇಂದ್ರ ಮೋದಿ ಇದೇ ಮೊದಲಬಾರಿ ಪ್ರಧಾನಿಯಾದ ನಂತರ ಭೇಟಿಯಾಗಿದೆ.
ಉಡುಪಿಯಲ್ಲಿ ಕಡೆಗೋಲು ಶ್ರೀ ಕೃಷ್ಣ ದೇವರ ದರ್ಶನ ಮಾಡಲಿರುವ ಮೋದಿ ಗೀತೋತ್ಸವ ಸಮಾವೇಶದಲ್ಲೂ ಭಾಗಿಯಾಗಲಿದ್ದಾರೆ.
Udupi| ಕಡವೆ ಗೆ ಬೈಕ್ ಡಿಕ್ಕಿ ವಾಹನ ಸವಾರ ಸಾವು ಸಹ ಸವಾರ ಗಂಭೀರ
ಈ ಕುರಿತು ಉಡುಪಿ ಪರ್ಯಾಯ ಪುತ್ತಿಗೆ ಮಠದ ಮೂಲಗಳು ಮಾಹಿತಿ ನೀಡಿದ್ದು,ಪ್ರಧಾನಿ ಕಚೇರಿಯಿಂದ ಅಧಿಕೃತ ಮಾಹಿತಿ ಇನ್ನಷ್ಟೇ ಪ್ರಕಟವಾಗಬೇಕಿದೆ.
16 ವರ್ಷಗಳ ಹಿಂದೆ ಪುತ್ತಿಗೆ ಪರ್ಯಾಯ ಸಂದರ್ಭದಲ್ಲಿ ಉಡುಪಿಗೆ ಭೇಟಿ ನೀಡಿದ್ದ ನರೇಂದ್ರ ಮೋದಿಯವರು ಇದೀಗ ಪ್ರಧಾನಿಯಾದ ಬಳಿಕ
ನ.28 ರಂದು ಉಡುಪಿ ಶ್ರೀಕೃಷ್ಣ ಮಠದಲ್ಲಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಠದ ವ್ಯಾಪ್ತಿಯಲ್ಲಿ ಉಡುಪಿ ಶ್ರೀಕೃಷ್ಣನ ದರ್ಶನ ನಂತರ ಭಕ್ತರು, ಸಾರ್ವಜನಿಕರ ಸಮ್ಮುಖದಲ್ಲಿ ಸಭಾ ಕಾರ್ಯಕ್ರಮ ದಲ್ಲಿ ಭಾಗಿಯಾಗಲಿದ್ದಾರೆ.
Udupi: ತಂದೆಯ ಚಿತೆಯ ಮುಂದೆ ಭೂಗತ ಪಾತಕಿ ಬನ್ನಂಜೆ ರಾಜ
ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರೊಂದಿಗೆ ಮಾತುಕತೆಗೆ ಸಹ ಸಮಯ ನಿಗದಿ ಮಾಡಲಾಗಿದ್ದು ,ಶ್ರೀಕೃಷ್ಣ ಮಠದಲ್ಲಿ ನಡೆಯಲಿರುವ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ ಸಹ ಭಾಗಿಯಾಗುವರು.