Karnataka Railways: ರೈಲು ಪ್ರಯಾಣಿಕರೇ ಗಮನಿಸಿಈ ರೈಲುಗಳು ಈ ದಿನಾಂಕದಂದು ರದ್ದು, ಸಂಖ್ಯೆಯೂ ಬದಲು!
Bangalur 29 november 2024 :-ರೈಲ್ವೆ ಕಾಮಗಾರಿ ನಡೆಯುತ್ತಿರುವುದರಿಂದ ನೈಋತ್ಯ ರೈಲ್ವೆ ಹಲವೆಡೆ ರೈಲು ಸಂಚಾರವನ್ನು ರದ್ದುಗೊಳಿಸಿದೆ.
ಹೊಸ ವರ್ಷಕ್ಕೆ ರೈಲ್ವೆ (Railway) ವ್ಯಾಪ್ತಿಯಲ್ಲಿ ಸಣ್ಣ ಪುಟ್ಟ ಬದಲಾವಣೆಗಳುನ್ನು ಮಾಡಲಾಗುತ್ತಿದೆ.
2025 ರ ಜನವರಿ 1ರಿಂದ ಜಾರಿಗೆ ಬರುವಂತೆ ದಕ್ಷಿಣ ಮಧ್ಯ ರೈಲ್ವೆ ಇಲಾಖೆ ಸಹ 10 ಪ್ಯಾಸೆಂಜರ್ ವಿಶೇಷ ರೈಲುಗಳನ್ನು ಸಾಮಾನ್ಯ ಪ್ಯಾಸೆಂಜರ್ ರೈಲುಗಳಾಗಿ ಮರು ಸಂಖ್ಯೆ ನೀಡಲು ಅಧಿಸೂಚನೆ ಹೊರಡಿಸಲಾಗಿದೆ. ಈ ಬಗ್ಗೆ ಹುಬ್ಬಳ್ಳಿಯ (hubballi) ನೈರುತ್ಯ ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಯಾವೆಲ್ಲಾ ರೈಲುಗಳನ್ನು (train ) ಯಾವ ದಿನಾಂಕದಂದು ರದ್ದುಗೊಳಿಸಲಾಗಿದೆ ಹಾಗೂ ಯಾವ ರೈಲುಗಳನ್ನು ಮಾರ್ಗ,ಸಂಖ್ಯೆ ಬದಲಾಗಿದೆ ವಿವರ ಇಲ್ಲಿದೆ.
ರಾಯದುರ್ಗ ಮತ್ತು ಕದಿರಿದೇವರಪಲ್ಲಿ ನಿಲ್ದಾಣ ಮತ್ತು ಲೋಂಡಾ ಮತ್ತು ಕ್ಯಾಸಲ್ ರಾಕ್ ನಿಲ್ದಾಣಗಳ ನಡುವೆ ಕಾಮಗಾರಿ ನಡೆಯುತ್ತಿದೆ.
ಯಾರ್ಡ್ ಮಾರ್ಪಾಡು ಮತ್ತು ಅಗತ್ಯ ಸುರಕ್ಷತಾ ಸಂಬಂಧಿತ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ.
ಲೋಂಡಾ- ಕ್ಯಾಸಲ್ ರಾಕ್ ನಿಲ್ದಾಣಗಳ ನಡುವೆ ಎಂಜಿನಿಯರಿಂದ ಕಾಮಗಾರಿ ನಡೆದಿದೆ. ಹೀಗಾಗಿ ರೈಲುಗಳ ಮಾರ್ಗವನ್ನು ಬದಲಾವಣೆ ಮಾಡಲಾಗಿದೆ.
ಯಾವ ಮಾರ್ಗ ಬದಲು?

1) ಮೀರಜ್-ಕ್ಯಾಸಲ್ ರಾಕ್ ಎಕ್ಸ್‌ಪ್ರೆಸ್ ರೈಲು ಸಂಚಾರ ಲೋಂಡಾ ಮತ್ತು ಕ್ಯಾಸಲ್ ರಾಕ್ ನಿಲ್ದಾಣಗಳ ನಡುವಿನ ರೈಲು ಸಂಖ್ಯೆ 17333 ಅನ್ನು ಡಿಸೆಂಬರ್ 1 ರಿಂದ 31ರವರೆಗೆ ರದ್ದುಗೊಳಿಸಲಾಗಿದೆ. ಈ ರೈಲು ಲೋಂಡಾವರೆಗೂ ಮಾತ್ರ ಸಾಗುತ್ತದೆ.
2) ಕ್ಯಾಸಲ್ ರಾಕ್- ಮೂರಜ್ ಡೈಲಿ ಕಾಯ್ದಿರಿಸದ ಎಕ್ಸ್‌ಪ್ರೆಸ್ ರೈಲು ಸಂಖ್ಯೆ 17334 ಸಂಚಾರ ಕ್ಯಾಸಲ್ ರಾಕ್ ಮತ್ತು ಲೋಂಡಾ ನಿಲ್ದಾಣಗಳ ನಡುವೆ ಡಿಸೆಂಬರ್ 1 ರಿಂದ 31ರವರೆಗೆ ರದ್ದುಗೊಳಿಸಲಾಗಿದೆ. ಈ ರೈಲು ಲೋಂಡಾ ನಿಲ್ದಾಣದಿಂದ ಹೊರಡಲಿದೆ.
3) ತಿರುಪತಿ-ಕದಿರಿದೇವರಪಲ್ಲಿ ಡೈಲಿ ಪ್ಯಾಸೆಂಜರ್ ವಿಶೇಷ ರೈಲು ಸಂಖ್ಯೆ 07589 ಸಂಚಾರ ಡಿಸೆಂಬರ್ 1 ರಿಂದ 31ರವರೆಗೆ ಗುಂತಕಲ್- ಕದಿರಿದೇವರಪಲ್ಲಿ ನಿಲ್ದಾಣಗಳ ನಡುವೆ ಸಂಚಾರ ರದ್ದಾಗಿದೆ.
4) ಕದಿರಿದೇವರ ದ ತಿರುಪತಿ ಡೈಲಿ ಪ್ಯಾಸೆಂಜರ್ ವಿಶೇಷ ರೈಲು ಸಂಖ್ಯೆ 07590 ಸಂಚಾರ ಡಿಸೆಂಬರ್ 2 ರಿಂದ 1ರವರೆಗೆ ಕದಿರಿದೇವರಪಲ್ಲಿ ಮತ್ತು ಗುಂತಕಲ್ ನಿಲ್ದಾಣಗಳ ನಡುವೆ ರದ್ದಾಗಲಿದೆ. ಇದು ಗುಂತಕಲ್ ನಿಲ್ದಾಣದಿಂದ ಸಂಚಾರ ಮಾಡಲಿದೆ.
5) ರೈಲು ಸಂಖ್ಯೆ 22883 ಪುರಿ-ಯಶವಂತಪುರ ಗರೀಬ ರಥ್ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು ನವೆಂಬರ್ 29ರಂದು ಹೊರಟು ನಂದ್ಯಾಲ್, ಯರಗುಂಟ, ಗೂತ್ತಿ ಫೋರ್ಟ್ ಅನಂತಪುರ ನಿಲ್ದಾಣಗಳ ಮೂಲಕ ಚಲಿಸಲಿದೆ. ಡೋನ್‌ನಲ್ಲಿ ನಿಲುಗಡೆ ಇರುವುದಿಲ್ಲ.
ಇದನ್ನೂ ಓದಿ:-Weather report| ಹವಾಮಾನ ವರದಿ 29 November 2024
6) ರೈಲು ಸಂಖ್ಯೆ 22832 ಯಶವಂತಪುರ-ಹೌರಾ ಸಾಪ್ತಾಹಿಕ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲು ನವೆಂಬರ್ 29ರಂದು ಹೊರಟು ಅನಂತಪುರ, ಗೂತ್ತಿ ಫೋರ್ಟ್ ಯಾಗುಂಟೆ, ನಂದ್ಮಾಲೆ ನಿಲ್ದಾಣಗಳ ಮೂಲಕ ಚಲಿಸಲಿದೆ. ಹೀಗಾಗಿ ಗೂತ್ತಿ ಮತ್ತು ಡೋನ್ ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.
01-01-2025 ರಿಂದ ಈ ವಿಶೇಷ ರೈಲುಗಳ(Train) ಸಂಖ್ಯೆಯಲ್ಲಿ ಬದಲಾವಣೆ
1. ಗುಂತಕಲ್-ಹಿಂದೂಪುರ-ಗುಂತಕಲ್ ರೈಲು ಸಂಖ್ಯೆ 07693/07694 ಇದೀಗ 77213/77214 ಎಂದು ಮರುಸಂಖ್ಯೆ ನೀಡಲಾಗಿದೆ.
2.ತಿರುಪತಿ-ಎಸ್ಎಸ್ಎಸ್ ಹುಬ್ಬಳ್ಳಿ-ತಿರುಪತಿ ರೈಲು ಸಂಖ್ಯೆ 07657/07658 ಇದೀಗ 57401/57402 ಎಂದು ಮರುಸಂಖ್ಯೆ ನೀಡಲಾಗಿದೆ.
3. ತಿರುಪತಿ-ಕದಿದೇವರಪಲ್ಲಿ-ತಿರುಪತಿ ರೈಲು ಸಂಖ್ಯೆ 07589/07590 ಬದಲಾಗಿ57405/57406 ಎಂದು ಮರುಸಂಖ್ಯೆ ನೀಡಲಾಗಿದೆ.
4. ಸಂಖ್ಯೆ 07585/07586 ಹೊಂದಿದ್ದ ಚಿಕ್ಕಜಾಜೂರು-ಗುಂತಕಲ್-ಚಿಕ್ಕಜಾಜೂರು ರೈಲಿಗೆ ಇದೀಗ 57416/57415 ಮರು ಸಂಖ್ಯೆ ನೀಡಲಾಗಿದೆ.
5. ವಿಜಯಪುರ-ರಾಯಚೂರು-ವಿಜಯಪುರ ರೈಲು ಸಂಖ್ಯೆ 07663/07664 ಬದಲಾಗಿ 57662/57661 ಎಂದು ಮರುಸಂಖ್ಯೆ ಕೊಡಲಾಗಿದೆ.