For the best experience, open
https://m.kannadavani.news
on your mobile browser.
Advertisement

Rain News: ಮಲೆನಾಡಿನಲ್ಲಿ ಅಬ್ಬರಿಸಿದ ಮಳೆ ಶಿರಸಿಯಲ್ಲಿ ಸೇತುವೆ ಜಲಾವೃತ

Rain News 21 October 2024:- ರಾಜ್ಯದಲ್ಲಿ ಮಳೆಯ(Rain) ಅಬ್ಬರ ಸೋಮವಾರ ಸಹ ಮುಂದುವರೆದಿದೆ.
08:22 PM Oct 21, 2024 IST | ಶುಭಸಾಗರ್
rain news  ಮಲೆನಾಡಿನಲ್ಲಿ ಅಬ್ಬರಿಸಿದ ಮಳೆ ಶಿರಸಿಯಲ್ಲಿ ಸೇತುವೆ ಜಲಾವೃತ
Rain News 21 October 2024:- ರಾಜ್ಯದಲ್ಲಿ ಮಳೆಯ(Rain) ಅಬ್ಬರ ಸೋಮವಾರ ಸಹ ಮುಂದುವರೆದಿದೆ.

ವರದಿ :-ಪರಮಾನಂದ ಹೆಗಡೆ.ಶಿರಸಿ.

Advertisement

Rain News: ಮಲೆನಾಡಿನಲ್ಲಿ ಅಬ್ಬರಿಸಿದ ಮಳೆ ಶಿರಸಿಯಲ್ಲಿ ಸೇತುವೆ ಜಲಾವೃತ

Rain News 21 October 2024:- ರಾಜ್ಯದಲ್ಲಿ ಮಳೆಯ(Rain) ಅಬ್ಬರ ಸೋಮವಾರ ಸಹ ಮುಂದುವರೆದಿದೆ.

ಉತ್ತರ ಕನ್ನಡ ಶಿರಸಿ,ಸಿದ್ದಾಪುರ, ಮುಂಡಗೋಡು, ಹಳಿಯಾಳ,ಯಲ್ಲಾಪುರ ,ಜೋಯಿಡಾ, ದಾಂಡೇಲಿ ಭಾಗದಲ್ಲಿ ಮಳೆ ಹೆಚ್ಚಿನ ಪ್ರಮಾಣದಲ್ಲಿ ಸುರಿದಿದೆ.

ಮುಳುಗಿದ ಸೇತುವೆ ಮನೆಗಳಿಗೆ ನೀರು.

ಶಿರಸಿಯಲ್ಲಿ ವರುಣನ ಅಬ್ಬರ ಹೆಚ್ಚಾಗಿದ್ದು ಮಳೆಯ ಅಬ್ಬರಕ್ಕೆ ಮನೆಗಳು ,ಸೇತುವೆ ಜಲಾವೃತವಾಗಿದೆ.

ಶಿರಸಿಯಲ್ಲಿ (sirsi)ಸಂಜೆ ಸುರಿಯುತ್ತಿರುವ ಮಳೆಯಿಂದ ತಾಲೂಕಿನ ಲಂಡಕನಹಳ್ಳಿ, ನರೇಬೈಲಿನಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.

ನರೇಬೈಲಿನ ಕಿರು ಸೇತುವೆ ಮುಳುಗಡೆಯಾಗಿದ್ದು ,ರಸ್ತೆ ಸಂಚಾರ ಬಂದ್ ಆಗಿದೆ. ಈ ಭಾಗದ ನಾಲ್ಕಕ್ಕೂ ಹೆಚ್ಚು ಮನೆಗಳಿಗೆ ನೀರು (water )ನುಗ್ಗಿ ಅನಾಹುತ ಸೃಷ್ಟಿಯಾಗಿದೆ.

ಇದನ್ನೂ ಓದಿ:-Sirsi-ಹಾವೇರಿ KSRTC ಬಸ್ಸ್ ಚಲಿಸೋದು ಒಂದುಕಡೆ ಹೋಗೋದು ಇನ್ನೊಂದು ಕಟೆ! Video ನೋಡಿ

ಶಿವಮೊಗ್ಗ ದಲ್ಲಿ ಪ್ರವಾಹ ಸೃಷ್ಟಿ.

ಇನ್ನು ಉತ್ತರ ಕನ್ನಡ ಜಿಲ್ಲೆಯ ನೆರೆಯ ಜಿಲ್ಲೆ ಶಿವಮೊಗ್ಗ (shivamogga) ದಲ್ಲಿ ಸಹ ಮಳೆ ಅಬ್ಬರಿಸಿದ್ದಾನೆ. ಸಾಗರ,ತೀರ್ಥಹಳ್ಳಿ, ಭದ್ರಾವತಿ ,ಹೊಸನಗರ ಸೇರಿದಂತೆ ಹಲವು ಭಾಗಗಳಲ್ಲಿ ವರುಣ ಆರ್ಭಟಿಸಿದ್ದಾನೆ.

ಕಳೆದ ಎರಡು ದಿನದಿಂದ ಸುರಿಯುತ್ತಿರುವ ಭಾರಿ ಮಳೆಗೆ ಕೊಂಡಜ್ಜಿ ಹಳ್ಳ ತುಂಬಿ ಸೇತುವೆ (Bridge) ಮೇಲೆ ನೀರು ಹರಿಯುತ್ತಿದೆ.

ಹಾಗಾಗಿ ಯಡವಾಲ – ಹಿಟ್ಟೂರು ರಸ್ತೆ ಸಂಚಾರ ಬಂದ್‌ ಮಾಡಲಾಗಿದೆ. 10 ದಿನದ ಹಿಂದೆ ಇದೇ ಸೇತುವೆ ದಾಟುವಾಗ ವ್ಯಕ್ತಿಯೊಬ್ಬ ಕೊಚ್ಚಿ ಹೋಗಿದ್ದರು.

ಇನ್ನೊಂದೆಡೆ ಇಲ್ಲಿನ ಹಾರುವಿನ ಕೆರೆ ಕೋಡಿ ಬಿದ್ದಿದೆ. ಬಹಳ ಸಮಯದ ಬಳಿಕ ಕೆರೆ ತುಂಬಿ ನೀರು ಹೊರಗೆ ಹರಿಯುತ್ತಿದೆ. ನದಿಗಳಿಗೆ ಹೆಚ್ಚಿನ ಪ್ರಮಾಣದ ನೀರು ಹರಿದು ಬರುತಿದ್ದು ನದಿ ಪಾತ್ರದ ಪ್ರದೇಶಗಳಲ್ಲಿ ಅಪಾಯ ಎದುರಾಗಿದ್ದು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ