Murdeshwara| ಮುರ್ಡೇಶ್ವರ ಕಡಲ ತೀರದಲ್ಲಿ ಪ್ರವಾಸಿಗರಿಗೆ ಧಿಡೀರ್ ನಿರ್ಬಂಧ!
ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರುಡೇಶ್ವರ ದಲ್ಲಿ ಬೆಂಗಳೂರು ಮೂಲದ ವಿದ್ಯಾರ್ಥಿ ನೀರು ಪಾಲ ಹಿನ್ನಲೆಯಲ್ಲಿ ಪ್ರವಾಸಿಗರ ( tourist )ಹುಚ್ಚಾಟ ತಹಬದಿಗೆ ತರಲುಸಮುದ್ರಕ್ಕಿಳಿಯಲು ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ.
ಇಂದು ಬೆಂಗಳೂರಿನ ವಿದ್ಯಾರ್ಥಿ ಗೌತಮ್ ಈಜಲು ಹೋಗಿ ಮೃತಪಟ್ಟಿದ್ದನು.ಧನುಷ್ ಎಂಬಾತನನ್ನು ರಕ್ಷಣೆ ಮಾಡಲಾಗಿತ್ತು. ಆದರೇ ವೀಕೆಂಡ್ ಆದ್ದರಿಂದ ಹೆಚ್ಚು ಪ್ರವಾಸಿಗರು ಕಡಲ ತೀರಕ್ಕೆ ಆಗಮಿಸಿದ್ದು ಸಮುದ್ರಕ್ಕೆ ಇಳಿಯಲು ಪ್ರವಾಸಿಗರಿಗೆ ಮುರುಡೇಶ್ವರ ಪೊಲೀಸರು ನಿರ್ಬಂಧಿಸಿದ್ದಾರೆ. ಇದರಿಂದಾಗಿ ದಸರ ರಜೆ ವೀಕೆಂಡ್ ಎಂಜಾಯ್ ಮಾಡಲು ಬಂದ ಪ್ರವಾಸಿಗರ ಖುಷಿಗೆ ತಣ್ಣೀರು ಬಿದ್ದಿದ್ದು ಕಡಲ ತೀರ ಕಾಲಿ ಹೊಡೆಯುತ್ತಿದೆ.
ಇದನ್ನೂ ಓದಿ:-Murdeshwar| ಸಮುದ್ರದಲ್ಲಿ ಮುಳುಗಿ ವಿದ್ಯಾರ್ಥಿ ಸಾವು-ಓರ್ವನ ರಕ್ಷಣೆ.
ಪ್ರವಾಸೋದ್ಯಮ ನಂಬಿದವರಿಗೆ ನಷ್ಟ.
ಇನ್ನು ಕಡಲ ತೀರ ಭಾಗದಲ್ಲಿ ಏಕಾ ಏಕಿ ನಿರ್ಬಂಧ ವಿಧಿಸಿದ್ದರಿಂದ ಪ್ರವಾಸೋದ್ಯಮ ಚಟುವಟಿಕೆ ನಂಬಿದವರು ಸಂಕಷ್ಟಕ್ಕೆ ಈಡಾಗುವಂತಾಗಿದೆ.
ಬಹುತೇಕ ವ್ಯಾಪಾರಸ್ತರು ವೀಕೆಂಡ್ ನನ್ನು ನಂಬಿ ವ್ಯಾಪಾರಕ್ಕೆ ಲಕ್ಷಾಂತರ ರುಪಾಯಿ ವ್ಯಯಿಸುತ್ತಾರೆ.ಪ್ರವಾಸೋದ್ಯಮ ಇಲಾಖೆ ಹಾಗೂ ಸ್ಥಳೀಯ ಆಡಳಿತಕ್ಕೂ ತೆರಿಗೆ ಕಟ್ಟುತ್ತಾರೆ. ಹೀಗಿರುವಾಗ ಏಕಾ ಏಕಿ ಬಂದ್ ಮಾಡುದ್ದು ಪ್ರವಾಸೋದ್ಯಮ ನಂಬಿದ ವ್ಯಾಪಾರಸ್ತರು ಸಂಕಷ್ಟಕ್ಕೀಡಾಗುವಂತಾಗಿದೆ.
ಕಡಲ ತೀರದಲ್ಲಿ ಲೈಫ್ ಗಾರ್ಡ ಗಳು ಇದ್ದು ಪೊಲೀಸರು ಸಹ ಇರುತ್ತಾರೆ. ಹೀಗಿದ್ದರೂ ವೀಕೆಂಡ್ ನಲ್ಲಿ ಏಕಾ ಏಕಿ ಬಂದ್ ಮಾಡಿಸಿದ್ದಕ್ಕೆ ಆಕ್ರೋಶಕ್ಕೆ ಕಾರಣವಾಗಿದ್ದು ಪ್ರವಾಸಿಗರು ಸಹ ಬೇಸರ ವ್ಯಕ್ತಪಡಿಸಿದ್ದು ಎತ್ತಿಗೆ ಜ್ವರ ಬಂದರೇ ಎಮ್ಮೆಗೆ ಬರೆ ಎಳೆದಂತಾಗಿದೆ ಎಂದು ಹಿಡಿ ಶಾಪ ಹಾಕುವಂತಾಗಿದೆ.
ಪ್ರವಾವಿ ಜನಪ್ರತಿನಿಧಿಯ ದ್ವೇಶಕ್ಕೆ ಪ್ರವಾಸೋದ್ಯಮ ಚಟುವಟಿಕೆ ಗೆ ಬ್ರೇಕ್ !
ಮುರುಡೇಶ್ವರ ದಲ್ಲಿ ಪ್ರಭಾವಿ ರಾಜಕೀಯ ವ್ಯಕ್ತಿ ಹಾಗೂ ಸ್ಥಳೀಯ ವಾಟರ್ ಸ್ಪೋಟ್ ಮಾಲೀಕನೊಂದಿಗೆ ಸಂಘರ್ಷವಿದ್ದು ,ಈ ಸಂಘರ್ಷ ಪ್ರವಾಸೋದ್ಯಮ ಚಟುವಟಿಕೆ ಮೇಲೆ ಪರಿಣಾಮ ಬೀರುತ್ತಿದೆ.
ತನ್ನ ಸ್ವಾರ್ಥಕ್ಕಾಗಿ ಪ್ರಭಾವಿಯೊಬ್ಬರು ಇಡೀ ಪ್ರವಾಸೋದ್ಯಮದ ಮೇಲೆ ಬರೆ ಎಳೆದಿದ್ದು , ಇದನ್ನು ನಂಬಿರುವ ಸಾವಿರಾರು ಬಡ ಕುಟುಂಬಗಳಿಗೂ ಹೊಡೆತ ಬೀಳುವಂತಾಗಿದೆ.
ಹೀಗಿರುವಾಗ ಪ್ರವಾಸೋದ್ಯಮ ಅಭಿವೃದ್ಧಿ ಎಂದು ನಾಲಿಗೆಯಲ್ಲಿ ಚಟ ಪಟಿಸುವ ಜನರಿಂದ ಏನು ನಿರೀಕ್ಷೆ ಸಾಧ್ಯ ಎಂಬ ಪ್ರಶ್ನೆ ಏಳುವಂತಾಗಿದ್ದು , ಯಾರೀ ಪ್ರಭಾವ ವ್ಯಕ್ತಿ ? ಎಂಬುದು ಸ್ಥಳೀಯ ಜನರಿಗೆ ತಿಳಿಯಬೇಕಿದೆ.