ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Karnataka ಗ್ರಾಮೀಣ ಪತ್ರಕರ್ತರಿಗೆ ಜಿಲ್ಲಾ ಬಸ್ ಪಾಸ್ ಆನ್‌ಲೈನ್ ಅರ್ಜಿ ಸಲ್ಲಿಸೋದು ಹೇಗೆ? ಅರ್ಹರು ಯಾರು? ವಿವರ ನೋಡಿ

ವಿದ್ಯುನ್ಮಾನ ಮತ್ತು ಮುದ್ರಣ ಮಾಧ್ಯಮ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮೀಣ ಪತ್ರಕರ್ತರಿಗೆ (journalist) ವೃತ್ತಿ ಸಂಬಂಧಿತ ಚಟುವಟಿಕೆಗಳಿಗೆ ಜಿಲ್ಲಾ ವ್ಯಾಪ್ತಿಯಲ್ಲಿ ಪ್ರಯಾಣಿಸಲು ಉಚಿತ ಬಸ್ ಪಾಸ್ ಯೋಜನೆಗೆ ಅರ್ಹ ಪತ್ರಕರ್ತರಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
06:25 PM Jan 28, 2025 IST | ಶುಭಸಾಗರ್
Journalist bus pass information

Karnataka ಗ್ರಾಮೀಣ ಪತ್ರಕರ್ತರಿಗೆ ಜಿಲ್ಲಾ ಬಸ್ ಪಾಸ್ ಆನ್‌ಲೈನ್ ಅರ್ಜಿ ಸಲ್ಲಿಸೋದು ಹೇಗೆ? ಅರ್ಹರು ಯಾರು? ವಿವರ ನೋಡಿ

Advertisement

ಪ್ರಕೃತಿ ಮೆಡಿಕಲ್ ,ಕಾರವಾರ.

ವಿದ್ಯುನ್ಮಾನ ಮತ್ತು ಮುದ್ರಣ ಮಾಧ್ಯಮ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮೀಣ ಪತ್ರಕರ್ತರಿಗೆ (journalist) ವೃತ್ತಿ ಸಂಬಂಧಿತ ಚಟುವಟಿಕೆಗಳಿಗೆ ಜಿಲ್ಲಾ ವ್ಯಾಪ್ತಿಯಲ್ಲಿ ಪ್ರಯಾಣಿಸಲು ಉಚಿತ ಬಸ್ ಪಾಸ್ ಯೋಜನೆಗೆ ಅರ್ಹ ಪತ್ರಕರ್ತರಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಮುಖ್ಯಮಂತ್ರಿಗಳು 2024-25 ನೇ ಸಾಲಿನ ಆಯವ್ಯಯದಲ್ಲಿ ಈ ಯೋಜನೆ ಘೋಷಿಸಿದ್ದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ವಿದ್ಯುನ್ಮಾನ ಅಥವಾ ಮುದ್ರಣ ಮಾಧ್ಯಮಗಳಲ್ಲಿ ಪೂರ್ಣಾವಧಿಗೆ ನೇಮಕಗೊಂಡು 4 ವರ್ಷಗಳ ಸೇವಾನುಭವ ಹೊಂದಿರುವ ಪತ್ರಕರ್ತರು ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ:-Karnataka ಮರಣಗಳ ಪರಿಹಾರದಲ್ಲೂ ತಾರತಮ್ಯ ಮಾಡಿದ ಕೇಂದ್ರ,ರಾಜ್ಯ ಸರ್ಕಾರ !

Advertisement

ನೇಮಕಾತಿ ಆದೇಶ/ವೇತನ ಪತ್ರ/ಬ್ಯಾಂಕ್ ಸ್ಟೇಟ್‌ಮೆಂಟ್ ಗಳಲ್ಲಿ ಯಾವುದಾದರೂ ದಾಖಲೆಗಳನ್ನು ಸೇವಾನುಭವಕ್ಕಾಗಿ ಒದಗಿಸಬೇಕು.

ಜಿಲ್ಲಾ ವ್ಯಾಪ್ತಿಯಲ್ಲಿ ಸಂಚರಿಸುವ ಕರ್ನಾಟಕ ಸಾರಿಗೆ (KSRTC) ಸಂಸ್ಥೆ ಬಸ್ಸುಗಳಲ್ಲಿ ಜಿಲ್ಲಾ ವ್ಯಾಪ್ತಿಗೆ ಉಚಿತವಾಗಿ ಸಂಚರಿಸಬಹುದು.ತಹಸೀಲ್ದಾರರಿಂದ ಪಡೆದ ವಾಸಸ್ಥಳ ಪ್ರಮಾಣ ಪತ್ರ ಒದಗಿಸಬೇಕು.

ರಾಜ್ಯ ಮಟ್ಟದ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸುವ ವರದಿಗಾರರಿಗೆ ಪ್ರತಿ ತಾಲ್ಲೂಕಿಗೆ ಸಂಪಾದಕರು ಸೂಚಿಸುವ ಒಬ್ಬರಿಗೆ,ಜಿಲ್ಲಾ ಮಟ್ಟದ ಪತ್ರಿಕೆಗಳು ತಮ್ಮ ಜಿಲ್ಲಾ ವ್ಯಾಪ್ತಿಯಲ್ಲಿ ಒಬ್ಬರಿಗೆ,
ಆರು ಪುಟಗಳಲ್ಲಿ ಪ್ರಕಟವಾಗುವ ಪ್ರಾದೇಶಿಕ ಪತ್ರಿಕೆಗಳು ಓರ್ವ ವರದಿಗಾರರು ಹಾಗೂ ಓರ್ವ ಫೋಟೋಗ್ರಾಫರ್,ಎಂಟು ಅಥವಾ ಹೆಚ್ಚು ಪುಟಗಳಲ್ಲಿ ಪ್ರಕಟವಾಗುವ ಪ್ರಾದೇಶಿಕ ಪತ್ರಿಕೆಗಳು ಇಬ್ಬರು ವರದಿಗಾರರು ಹಾಗೂ ಓರ್ವ ಫೋಟೋಗ್ರಾಫರ್‌ಗೆ ಬಸ್ ಪಾಸ್ ಪಡೆಯಲು ಅವಕಾಶವಿದೆ.

ಉಪಗ್ರಹ ಆಧಾರಿತ ವಿದ್ಯುನ್ಮಾನ ವಾಹಿನಿಗಳ ವರದಿಗಾರರು ತಾಲೂಕು ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದರೆ ಪ್ರತಿ ತಾಲ್ಲೂಕಿಗೆ ಓರ್ವ ಕ್ಯಾಮರಾಮ್ಯಾನ್ ಹಾಗೂ ಓರ್ವ ವರದಿಗಾರರು ಬಸ್ ಪಾಸ್ ಪಡೆಯಬಹುದಾಗಿದೆ.

ದಿನಪತ್ರಿಕೆಗಳು ಹಾಗೂ ಉಪಗ್ರಹ ಸುದ್ದಿ ವಾಹಿನಿಗಳ ಸಂಪಾದಕರು ನೀಡುವ ನೇಮಕಾತಿ ಪತ್ರ ಹಾಗೂ ಶಿಫಾರಸ್ಸು ಆಧರಿಸಿ ಅರ್ಹ ಪತ್ರಕರ್ತರಿಗೆ ಬಸ್ ಪಾಸ್‌ಗಳನ್ನು ನೀಡಲಾಗುವುದು.

ಆಸಕ್ತ ಹಾಗೂ ಅರ್ಹ ಪತ್ರಕರ್ತರು(journalist) ತಮ್ಮ ಸಮೀಪದ ಗ್ರಾಮ ಒನ್,(grama one) ಕರ್ನಾಟಕ ಒನ್ (karnataka one)ಅಥವಾ ಬೆಂಗಳೂರು ಒನ್ ಕೇಂದ್ರಗಳಿಗೆ ತೆರಳಿ ಸೇವಾಸಿಂಧು ಪೋರ್ಟಲ್‌‌ ‌ನಲ್ಲಿ ಆನ್‌ಲೈನ್ ಮೂಲಕ ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ ಅರ್ಜಿ ಸಲ್ಲಿಸಬಹುದು.

ಅಪ್‌ಲೋಡ್ ಮಾಡಿದ ದಾಖಲೆಗಳು ಹಾಗೂ ಆನ್‌ಲೈನ್ ಅರ್ಜಿಯ ಮುದ್ರಿತ ಪ್ರತಿಯನ್ನು ತಮ್ಮ ಜಿಲ್ಲೆಯ ಜಿಲ್ಲಾ ವಾರ್ತಾಧಿಕಾರಿಗಳ ಕಚೇರಿಗೆ ಸ್ವಯಂ ದೃಢೀಕರಿಸಿ ಸಲ್ಲಿಸಬೇಕಾಗುತ್ತದೆ .

ಜಿಲ್ಲಾ ಪತ್ರಕರ್ತರಿಗೆ ಇರುವ ಸವಲತ್ತುಗಳೇನು?

ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದ ಜಿಲ್ಲಾ ವರದಿಗಾರರಿಗೆ ವಾರ್ತಾ ಇಲಾಖೆಯಿಂದ ಅಕ್ರಡೇಶನ್ ಕಾರ್ಡ ನೀಡಲಾಗುತ್ತದೆ. ಕನಿಷ್ಟ ಐದು ವರ್ಷ ಯಾವುದೇ ಮಾಧ್ಯಮದಲ್ಲಿ ಕಾರ್ಯನಿರ್ವಹಿಸಿ ಪ್ರಸ್ತುತ ರಾಜ್ಯ ಮಟ್ಟದ ಪತ್ರಿಕೆ,ಟಿವಿ ಮಾಧ್ಯಮದ ಜಿಲ್ಲಾ ವರದಿಗಾರ, ಕ್ಯಾಮರಾಮನ್,ಫೋಟೋಗ್ರಾಫರ್ ಗಳಿಗೆ ಮಾನ್ಯತೆ ಕಾರ್ಡ ನೀಡಲಾಗುತ್ತದೆ.

ಈ ಕಾರ್ಡ ಇದ್ದವರಿಗೆ ರಾಜ್ಯಾದ್ಯಂತ ಸರ್ಕಾರಿ ಸಾಮ್ಯದ ಯಾವುದೇ ಬಸ್ ಗಳಲ್ಲಿ ಉಚಿತ ಪ್ರಯಾಣ ಮಾಡಬಹುದು.ಸರ್ಕಾರದ ವಸತಿ ನಿಲಯಗಳಲ್ಲಿ ಸರ್ಕಾರ ನಿಗದಿ ಮಾಡಿದ ದರದಲ್ಲಿ ಊಟ ವಸತಿ ಪಡೆಯಬಹುದು. ದೇಶದ ಯಾವುದೇ ಮೂಲೆಗೆ ರೈಲಿನಲ್ಲಿ ಟಿಕೆಟ್ ದರದ ಅರ್ಧ ಭಾಗ ದಲ್ಲಿ ಪ್ರಯಾಣ ಮಾಡಬಹುದು. ಸರ್ಕಾರದ ಅಧಿಕೃತ ಭದ್ರತಾ ಕಚೇರಿಗೆ ಈ ಕಾರ್ಡ ತೋರಿಸಿ ಹೀಗಬಹುದು. ಅಂದರೇ ವಿಧಾನ ಸೌಧ ಸೇರಿದಂತೆ ಸರ್ಕಾರಿ ಕಚೇರಿಗಳು. ಇನ್ನು ದೆಹಲಿ ,ಇತರೆ ಭವನಗಳಲ್ಲಿ ಶಾಸಕರಿಗೆ ನಿಗದಿ ಮಾಡಿದ ದರದಲ್ಲಿ ವಸತಿ ,ಊಟದ ವ್ಯವಸ್ಥೆ ಪಡೆಯಬಹುದಾಗಿದೆ.

ಈ ಕಾರ್ಡುಗಳನ್ನು ಜಿಲ್ಲಾ ವರದಿಗಾರರಿಗೆ ಮಾತ್ರ ಸೀಮಿತವಾಗಿರುತ್ತದೆ. ಈ ಕಾರ್ಡ ಪಡೆಯಲು ಅಕ್ರಡೇಶನ್ ಕಮಿಟಿ ಮಾನ್ಯತೆ ಮುಖ್ಯವಾಗಿರುತ್ತದೆ. ಆದರೇ ಈ ಕಾರ್ಡ ಗಳನ್ನು ತಾಲೂಕು ಪತ್ರಕರ್ತರಿಗೆ ನೀಡುವುದಿಲ್ಲ. ಬದಲಿಗೆ ಆಯಾ ತಾಲೂಕಿನ ಪತ್ರಿಕೆಯ ಸಂಪಾದಕನಿಗೆ ಪಡೆಯಲು ಅವಕಾಶ ಇರುತ್ತದೆ.

 ಗ್ರಾಮೀಣ ಪತ್ರಕರ್ತರು ಸಲ್ಲಿಸುವ ಅರ್ಜಿ  ಪ್ರತಿ ಹೀಗಿದೆ:-

ಸ್ವಯಂ ಘೋಷಣೆ ಪ್ರತಿ:- 

Journalist bus pass forums
Advertisement
Tags :
Bus pass formJournalistjournalist bus pass application formjournalist free bus passKarnatakaKsrtc bus passNews
Advertisement
Next Article
Advertisement