Karnataka|ಶರಾವತಿ ನದಿ ತೀರದಲ್ಲಿ ಬಾಕ್ಸೈಟ್ ಗಣಿಗಾರಿಕೆಗೆ ಸಿದ್ದತೆ| ಜಿಲ್ಲೆಯಲ್ಲಿ ಯೋಜನೆಗೆ ಹೋಗುತ್ತಿರುವ ಅರಣ್ಯವೆಷ್ಟು ಗೊತ್ತಾ?
Karnataka|ಶರಾವತಿ ನದಿ ತೀರದಲ್ಲಿ ಬಾಕ್ಸೈಟ್ ಗಣಿಗಾರಿಕೆಗೆ ಸಿದ್ದತೆ| ಜಿಲ್ಲೆಯಲ್ಲಿ ಯೋಜನೆಗೆ ಹೋಗುತ್ತಿರುವ ಅರಣ್ಯವೆಷ್ಟು ಗೊತ್ತಾ?
ಕಾರವಾರ :- ಉತ್ತರ ಕನ್ನಡ ಜಿಲ್ಲೆಗೆ ರಾಜ್ಯ,ಕೇಂದ್ರಗಳ ಹಲವು ಯೋಜನೆಗಳು ಜಾರಿಯಾಗುತಿದ್ದು ಪಶ್ಚಿಮ ಘಟ್ಟ ಅರಣ್ಯ ,ನದಿಗಳಿಗೆ ಕುತ್ತು ಬರುತ್ತಿದೆ. ಸಹಜವಾಗಿಯೇ ಜನರು ವಿರೋಧ ಮಾಡಿದರೂ , ಸರ್ಕಾರಗಳು ತಮ್ಮ ಹಿತಾಸಕ್ತಿಗೆ ಪಶ್ಚಿಮ ಘಟ್ಟ ಭಾಗದಲ್ಲಿ ಯೋಜನೆಗಳಿಗೆ ಒತ್ತಡ ಹೇರಿ ಅನುಷ್ಟಾನ ಮಾಡುತಿದ್ದಾರೆ.
ಶರಾವತಿ ಪಂಪ್ ಸ್ಟೋರೇಜ್ ಭೂಗತ ಜಲ ವಿದ್ಯುತ್ ಯೋಜನೆ ಜಾರಿಗೆ ಪ್ರಯತ್ನ ನಡೆಯುತ್ತಿರುವ ಬೆನ್ನಲ್ಲೇ ಇದೀಗ ಶರಾವತಿ ನದಿ ತೀರ ಭಾಗದಲ್ಲಿ ಬಾಕ್ಸೈಟ್ ಗಣಿಗಾರಿಕೆಗೆ ಸಿದ್ದತೆ ಮಾಡಿಕೊಳ್ಳಲಾಗುತಿದ್ದು ,ಶರಾವತಿ ನದಿ ಭಾಗದ ಗುಡ್ಡ ಭಾಗದಲ್ಲಿ ಬಾಕ್ಸೈಟ್ ಗಣಿಗಾರಿಕೆ ನಡೆಸುವ ಸಂಬಂಧ ಕೇಂದ್ರ ಸರ್ಕಾರ ಪ್ರಾಥಮಿಕ ಸಂಶೋಧನೆ ನಡೆಸಲು ಅನುಮತಿ ನೀಡಿದೆ.
ಈ ಯೋಜನೆ ಸಂಬಂಧ 440 ಹೆಕ್ಟೇರ್ ಭೂಮಿಯನ್ನು ಹೊನ್ನಾವರ ಭಾಗದ ಶರಾವತಿ ನದಿ ತೀರ ಭಾಗದ ಗುಡ್ಡಭಾಗದಲ್ಲಿ ಗುರುತಿಸಲಾಗಿದೆ.
ರಾಷ್ಟ್ರೀಯ ಖನಿಜ ಸಂಶೋಧನಾ ಟ್ರಸ್ಟ್ ಮೂಲಕ ಈ ಯೋಜನೆಯನ್ನು ಗೈಗೆತ್ತುಕೊಳ್ಳಲಾಗಿದ್ದು, ಖನಿಜ ಸಂಶೋಧನೆ ನಡೆಸಲು ಮಹರಾಷ್ಟ್ರ ಮೂಲದ ಪಿ.ಆರ್.ಬಿ ಇನ್ಫಾ ಪ್ರವೇಟ್ ಲಿಮಿಟೆಡ್ ಕಂಪನಿಗೆ 1.40 ಕೋಟಿ ವೆಚ್ಚದ ಗುತ್ತಿಗೆ ನೀಡಲಾಗಿದೆ.
ಯಾವ ಪ್ರದೇಶದಲ್ಲಿ ಗಣಿಗಾರಿಕೆ?
ಹೊನ್ನಾವರ ತಾಲೂಕಿನ ಅಪ್ಸರಕೊಂಡ,ಕಾಸರಕೋಡು,ಮೇಲಿನ ಇಡಗುಂಜಿ ಭಾಗದ 440 ಹೆಕ್ಟೇರ್ ಪ್ರದೇಶ ಗುರುತಿಸಲಾಗಿದ್ದು ,ಇದೇ ಭಾಗದಲ್ಲಿ ಗಣಿಗಾರಿಕೆ ನಡೆಸಲು ಯೋಜನೆ ರೂಪಿಸಲಾಗಿದೆ.
ಈ ಭಾಗದಲ್ಲಿ ಗಣಿಗಾರಿಕೆ ನಡೆಸುವ ಸಾಧ್ಯತೆ ಬಗ್ಗೆ ಒಂದು ವರ್ಷದಿಂದಲೇ ತಾಂತ್ರಿಕ ಪ್ರಕ್ರಿಯೆ ಪ್ರಾರಂಭವಾಗಿದ್ದು ,ಕೇಂದ್ರ ಸರ್ಕಾರದ ರಾಜ್ಯ ಪತ್ರದಲ್ಲೂ ಇದನ್ನು ಪ್ರಕಟ ಮಾಡಲಾಗಿದೆ.
ಇದೀಗ ಈ ಯೋಜನೆಯ ಭೌಗೋಳಿಕ ವರದಿ ಸಿದ್ದಪಡಿಸಿ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯದ ಅನುಮತಿ ಪಡೆಯಲು ಸಿದ್ದತೆ ನಡೆದಿದೆ.
ಇನ್ನು ಈ ಯೋಜನೆಯ ರೂಪರೇಶವನ್ನು ಪರಿಸರ ಮಂತ್ರಾಲಯ ಪರಿವೇಶ ತಂತ್ರಾಂಶದಲ್ಲಿ ದಾಖಲಿಸಿದೆ.
2026 ರ ಫೆಬ್ರವರಿ 9 ರ ಒಳಗೆ ಈ ಸ್ಥಳದ ಸಂಶೋಧನೆಯ ಪೂರ್ಣ ವರದಿ ನೀಡಲು ನಿಗದಿ ಮಾಡಿದೆ.
ಸಂಶೋಧನೆ ಹೇಗೆ ?
ಇನ್ನು ನಿಗದಿ ಭಾಗದಲ್ಲಿ ಸುಮಾರು 36 ಹೆಕ್ಟೇರ್ ಭಾಗದಲ್ಲಿ ಅಲ್ಲಲ್ಲಿ ಭೂಮಿಯ ಆಳಕ್ಕೆ ಗ್ರಿಲ್ ಮಾಡುವ ಮೂಲಕ ಮಣ್ಣನ್ನು ಸಂಗ್ರಹ ಮಾಡಲಾಗುತ್ತದೆ.
ಈ ಮಣ್ಣಿನಲ್ಲಿ ಅಲ್ಯುಮಿಲಿಯಂ,ಯುರೇನಿಯಮ್ ,ಪೋಡಿಯಂ ,ಟೈಟಾನಿಯಮ್ ಸೇರಿ ಅಪರೂಪದ ಖನಿಜಗಳು ಸೇರಿ ಯಾವ ಖನಿಜಗಳು ಎಷ್ಟಿವೆ ಎಂಬ ಬಗ್ಗೆ ಅಧ್ಯಯನ ಮಾಡಲಾಗುತ್ತದೆ.
ಉತ್ತರ ಕನ್ನಡ ದಲ್ಲಿ ಹಲವು ಯೋಜನೆ- 3.50 ಲಕ್ಷ ಮರಕ್ಕೆ ಕತ್ತರಿ.
ಪಶ್ಚಿಮ ಘಟ್ಟ ಭಾಗವನ್ನು ಹೊಂದಿರು ಉತ್ತರ ಕನ್ನಡ ಜಿಲ್ಲೆಗೆ ಹಲವು ಯೋಜನೆಗಳು ಕಾಲಿಟ್ಟಿವೆ ಈ ಯೋಜನೆಗಳಿಂದ 3.50 ಲಕ್ಷ ಮರಕ್ಕೆ ಕುತ್ತು ಬರುವ ಅಂದಾಜು ಮಾಡಲಾಗಿದೆ.
1) ಶರಾವತಿ ಪಂಪ್ ಸ್ಟೋರೇಜ್ ಯೋಜನೆಗೆ 16 ಸಾವಿರ ಮರಗಳನ್ನು ಕಟಾವು ಮಾಡಲಾಗುತ್ತದೆ. ಒಟ್ಟು 54.155 ಹೆಕ್ಟೇರ್ ಅರಣ್ಯ ಭೂಮಿ.
2) ಗೋವಾ- ತಮ್ನಾರ್ ಯೋಜನೆ - 72 ಸಾವಿರ ಮರಗಳು ಕಡಿತಲೆ ಆಗಲಿದ್ದು ,175 ಹೆಕ್ಟೇರ್ ಅರಣ್ಯ ಭೂಮಿ ಬಳಕೆ ಆಗಲಿದೆ.
3)ಹುಬ್ಬಳ್ಳಿ -ಅಂಕೋಲ ರೈಲು ಯೋಜನೆ - 1.58 ಲಕ್ಷ ಮರಗಳು ಕಟಾವು ಹಾಗೂ 585 ಹೆಕ್ಟೇರ್ ಪ್ರದೇಶ.
4)ಬೇಡ್ತಿ -ವರದಾ ನದಿ ಜೋಡಣೆ ಯೋಜನೆ- ಮರಗಳ ಗುರುತಿಸುವ ಕಾರ್ಯ ಚಾಲ್ತಿಯಲ್ಲಿದ್ದು , ಒಟ್ಟು 243 ಹೆಕ್ಟೇರ್ ಅರಣ್ಯ ಭೂಮಿ ಯೋಜನೆ ವ್ಯಾಪ್ತಿಯಾಗಿದೆ.
5) ಕೇಣಿ ಖಾಸಗಿ ವಾಣಿಜ್ಯ ಬಂದರು ಯೋಜನೆ - 3172 ಮರಗಳು , 457 ಹೆಕ್ಟೇರ್ ಸಮುದ್ರ ತೀರ ಭಾಗ ಉಪಯೋಗ ವಾಗಲಿದೆ.
ಉತ್ತರ ಕನ್ನಡ ಜಿಲ್ಲೆಯ 10.25ಲಕ್ಷ ಹೆಕ್ಟೇರ್ ಭೂ ಪ್ರದೇಶದಲ್ಲಿ 8 ಲಕ್ಷ ಹೆಕ್ಟೇರ್ ಅರಣ್ಯಪ್ರದೇಶವಾಗಿದೆ. ಕಳೆದ ಹಲವು ವರ್ಷಗಳ ಹಿಂದೆ ಕಾಳಿ ಜಲ ವಿದ್ಯುತ್ ಯೋಜನೆ ,ಕೊಂಕಣ ರೈಲ್ವೆ, ಸೀಬರ್ಡ ಯೋಜನೆ,ಅಣು ವಿದ್ಯುತ್ ಯೋಜನೆ ಗಳಿಗೆ ಒಂದು ಲಕ್ಷಕ್ಕೂ ಅಧಿಕ ಹೆಕ್ಟೇರ್ ಅರಣ್ಯವನ್ನು ಯೋಜನೆಗೆ ಬಳಸಿಕೊಳಲಾಗಿದೆ. ಇನ್ನು ಸಾಗರಮಾಲಾ ಯೋಜನೆ, ರಾಷ್ಟ್ರೀಯ ಹೆದ್ದಾರಿ ಚತುಷ್ಪತ ಕಾಮಗಾರಿ ಯೋಜನೆಗಳಿಗೆ ಲಕ್ಷ ಲಕ್ಷ ಮರಗಳನ್ನು ಕಟಾವು ಮಾಡಲಾಗಿದೆ. ಇಡೀ ಜಿಲ್ಲೆಯ ಗುಡ್ಡ ಭಾಗವನ್ನು ಕಡಿದು ತುಂಡರಿಸಿ ವಿರೂಪ ಗೊಳಿಸಲಾಗಿದೆ. ನೀರಿನ ಮೂಲವನ್ನು ಸಹ ತಡೆಹಿಡಿಯಲಾಗಿದೆ.
ಹೀಗಾಗಿ ಕಳೆದ ನಾಲ್ಕು ವರ್ಷದಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ನಿರಂತರ ಜಲ ಪ್ರವಾಹ, ಭೂ ಕುಸಿತಕ್ಕೆ ಕಾರಣವಾಗಿದೆ. ಇನ್ನು ಅರಣ್ಯ ಇಲಾಖೆ ಭೂ ಕುಸಿತ ತಡೆಗೆ ದ್ರೂಣ್ ಮೂಲಕ ಬೀಜ ಬಿತ್ತನೆ ಕಾರ್ಯ ಮಾಡಿತಾದರೂ ಹಣ ಖರ್ಚು ಮಾಡುತೇ ವಿನಹ ಯಾವ ಬಿತ್ತಿದ ಬೀಜಗಳು ಮೊಳಕೆಯೊಡೆದು ಗಿಡವಾಗಲಿಲ್ಲ.
Sharavathi|ಪಂಪ್ ಸ್ಟೋರೇಜ್ ಸ್ಥಳ ಪರಿಶೀಲನೆ ವರದಿಗೆ ವನ್ಯಜೀವಿ ಮಂಡಳಿ ನಿರ್ದೇಶನ|ವಿವರ ನೋಡಿ
ಸಧ್ಯ ಎಲ್ಲಾ ಯೋಜನೆ ಜಾರಿಯಾದರೇ ಉತ್ತರ ಕನ್ನಡ ಜಿಲ್ಲೆಯ ಅರಣ್ಯ 45 % ಗಿಂತಲೂ ಕಡಿಮೆಯಾಗುವ ಸಾಧ್ಯತೆಯನ್ನು ಪರಿಸರವಾದಿಗಳು ಆತಂಕ ವ್ಯಕ್ತಡಿಸಿದ್ದು , ಮುಂದೊಂದು ದಿನ ರಾಜ್ಯದ ಹಲವು ಭಾಗಕ್ಕೆ ಸಹ ಮಳೆಯ ಕೊರತೆ ಹೆಚ್ಚಾಗುವ ಸಾಧ್ಯತೆಗಳಿವೆ. ಈಗಾಲೇ ಉತ್ತರ ಕನ್ನಡ ಜಿಲ್ಲೆ ಪರಿಸರ ಸೂಕ್ಷ್ಮ ವಲಯ ಎಂದು ಗುರುತಿಸಲಾಗಿದೆ. ಜಿಯಾಲಜಿಕಲ್ ಸರ್ವೆ ಆಫ್ ಇಂಡಿಯಾ ದಿಂದ 425 ಕ್ಕೂ ಹೆಚ್ಚು ಭಾಗಗಳು ಅತೀ ಸೂಕ್ಷ್ಮ ಭೂಕುಸಿತ ವಲಯ ಎಂದು ಗುರುತಿಸಿದೆ. ಹೀಗಿದ್ದರೂ ಪರಿಸರ ಮಾರಕ ಯೋಜನೆಗಳು ಇಲ್ಲಿಗೆ ಏಕೆ ಎಂಬ ಪ್ರಶ್ನೆ ಏಳುವಂತೆ ಮಾಡಿದೆ.