Karnataka|ಎರಡು ದಶಕದ ನಕ್ಸಲ್ ಹೋರಾಟಕ್ಕೆ ತೆರೆ ಆರು Naxals ಮುಖ್ಯಮಂತ್ರಿ ಮುಂದೆ ಶರಣಾಗತಿ.
ಪಶ್ಚಿಮ ಘಟ್ಟದಲ್ಲಿ ತಲೆಮರೆಸಿಕೊಂಡಿದ್ದ 6 ನಕ್ಸಲರು ಶಸ್ತ್ರಾಸ್ತ್ರ ತೊರೆದು ನಾಗರಿಕ ಸಮಿತಿ, ಶರಣಾಗತಿ ಸಮಿತಿ ಮಾತುಕತೆ ಬಳಿಕ ಇಂದು ನಕ್ಸಲರು( naxals) ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiha) , ಡಿ.ಕೆ ಶಿವಕುಮಾರ್ ರವರ ಮುಂದೆ ಮುಖ್ಯಮಂತ್ರಿ ರವರ ಗೃಹ ಕಚೇರಿ ಕೃಷ್ಣ ದಲ್ಲಿ ಶಸ್ತ್ರ ತ್ಯಜಿಸುವ ಮೂಲಕ ಶರಣಾದರು.
ಆರು ನಕ್ಸಲರಾದ ಶೃಂಗೇರಿ (shrungeri)ತಾಲೂಕಿನ ಮುಂಡುಗಾರು ಗ್ರಾಮದ ಲತಾ, ಕಳಸ ತಾಲೂಕಿನ ಬಾಳೆಹೊಳೆ ಗ್ರಾಮದ ವನಜಾಕ್ಷಿ, ದಕ್ಷಿಣ ಕನ್ನಡ ಜಿಲ್ಲೆ ಕುಂತಲೂರು ಮೂಲಕದ ಸುಂದರಿ, ರಾಯಚೂರು ಮೂಲದ ಮಾರಪ್ಪ ಅರೋಳಿ, ವಸಂತ, ಎನ್.ಜೀಶಾ ಶರಣಾಗತಿಯಾದ ನಕ್ಸಲರು.
ಶರಣಾಗತರಾದ ಆರು ನಕ್ಸಲರು ಯಾರು? ಎಷ್ಟು ಪ್ರಕರಣವಿದೆ.?
ವಿಕ್ರಂಗೌಡ (Vikram Gowda) ಎನ್‌ಕೌಂಟರ್ ಪ್ರಕರಣದ ಬೆನ್ನಲ್ಲೇ ಕರ್ನಾಟಕದ (Karnataka) ಮುಂಡಗಾರು ಲತಾ, ಸುಂದರಿ ಕುತ್ಲೂರು, ವನಜಾಕ್ಷಿ ಬಾಳೆಹೊಳೆ, ಮಾರಪ್ಪ ಅರೋಲಿ, ತಮಿಳುನಾಡಿನ ಕೆ ವಸಂತ ಮತ್ತು ಕೇರಳದ ಟಿಎನ್ ಜೀಶಾ ಶಸ್ತ್ರಾಸ್ತ್ರ ತೊರೆದು ಮುಖ್ಯವಾಹಿನಿಗೆ ಬಂದಿದ್ದಾರೆ. ಇವರ ಸಂಕಷ್ಟದ ಹೋರಾಟದ ಹಲವು ಇತಿಹಾಸಗಳಿವೆ.
ಮುಂಡಗಾರು ಲತಾ (Mundagaru Latha) ವಿರುದ್ಧ 59 ಪ್ರಕರಣಗಳು ದಾಖಲಾಗಿವೆ. ಸುಂದರಿ (Sundari) ವಿರುದ್ಧ ಉಡುಪಿ, ದ.ಕನ್ನಡದಲ್ಲಿ 3 ಕೇಸ್‌ಗಳು, ಜಯಣ್ಣ ಮೇಲೆ ಉಡುಪಿ, ಮಂಗಳೂರಿನಲ್ಲಿ 3 ಪ್ರಕರಣಗಳಿವೆ, ವನಜಾಕ್ಷಿ ವಿರುದ್ಧ15 ಕೇಸ್ ದಾಖಲಾಗಿವೆ. ಕೆ.ವಸಂತ ಮತ್ತು ಟಿ.ಎನ್. ಜೀಶಾ ವಿರುದ್ಧ ಹಲವು ಕೇಸ್‌ಗಳಿವೆ.
ಇದನ್ನೂ ಓದಿ:-Karnataka Weather ಯಾವ ಭಾಗದಲ್ಲಿ ಚಳಿಯ ವಾತಾವರಣ ಹೆಚ್ಚಲಿದೆ ಇಲ್ಲಿದೆ ಮಾಹಿತಿ.
ಮುಂಡಗಾರು ಲತಾ.
ಶೃಂಗೇರಿ ತಾಲೂಕಿನ ಲತಾ ಮಂಡಗಾರು ಬಡ ಆದಿವಾಸಿ ದಂಪತಿಯ ದೊಡ್ಡ ಕುಟುಂಬದ ಹೆಣ್ಣುಮಗಳು .ಮುಂಡಗಾರು ಲತಾ ಶೃಂಗೇರಿಯ ಜೆ.ಸಿ.ಬಿ.ಎಂ. ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ ಬಳಿಕ ಪಿಯುಸಿ ವ್ಯಾಸಂಗ ಅರ್ಧಕ್ಕೆ ಮೊಟಕುಗೂಳಿಸಿದ್ದಾರೆ.
ಕುದುರೆಮುಖ ವಿಮೋಚನಾ ಚಳುವಳಿ ಮುಖಾಂತರ ನಕ್ಸಲ್ ಹೋರಾಟದಲ್ಲಿ ಸಕ್ರಿಯರಾಗಿದ್ದರು. ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಉಳಿಸಿ ವಿರೋಧಿ ಹೋರಾಟ ಸಮಿತಿಯ ನಾಯಕಿಯಾಗಿದ್ದರು.
ನೂರಾರು ಆದಿವಾಸಿ ಕುಟುಂಬಗಳಂತೆಯೇ ಈ ಕುಟುಂಬವು ಸಹ ಕುದುರೆಮುಖ ರಾಷ್ಟ್ರೀಯ ಉದ್ಯಾನ ಯೋಜನೆಯಡಿ ಮನೆ ಕಳೆದುಕೊಳ್ಳುವ ಪರಿಸ್ಥಿತಿ ಬಂದಾಗ ಅದರ ವಿರುದ್ಧದ ಹೋರಾಟ ನಡೆಸುತ್ತಿದ್ದ ಚಳವಳಿಯ ಭಾಗವಾದರು.
ಪ್ರಜಾಸತ್ತಾತ್ಮಕ ಹೋರಾಟಗಳಿಗೆ ಬೆಲೆ ನೀಡದ ಸರ್ಕಾರದ ಧೋರಣೆಗೆ ಬೇಸತ್ತು 2000ರಲ್ಲಿ 18ನೇ ವಯಸ್ಸಿನಲ್ಲಿ ಸಶಸ್ತ್ರ ಹೋರಾಟಕ್ಕೆ ಧುಮುಕಿ ಅಂದಿನಿಂದ ಕರ್ನಾಟಕ ಹಾಗೂ ಕೇರಳಗಳಲ್ಲಿ ಸಂಚರಿಸುವ ದಳದ ಭಾಗವಾಗಿದ್ದರು.ನಕ್ಸಲ್ ತಂಡದ ನಾಯಕಿ ಸ್ಥಾನ ಹೊಂದಿದ್ದರು.
ಕಾಮ್ರೆಡ್ ಸುಂದರಿ@ಗೀತಾ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಕುತ್ಲೂರಿನ ನಿವಾಸಿಯಾಗಿದ್ದ ಸುಂದರಿ ಸಹೋದರ ವಸಂತ ಅಲಿಯಾಸ್ ಆನಂದ್ ಕೂಡ ನಕ್ಸಲ್ ಆಗಿದ್ದನು. ಸಹೋದರನ ಹಿಂದೆಯೇ ಸುಂದರಿ ಕೂಡ ನಕ್ಸಲ್ ಚಟುವಟಿಕೆಗೆ ಎಂಟ್ರಿಯಾಗಿದ್ದರು. 2010ರ ಎನ್‌ಕೌಂಟರ್‌ನಲ್ಲಿ ಆನಂದ್ ಹತ್ಯೆಯಾಗಿದ್ದನು
ಸುಂದರಿಯೂ ಸಹ ಲತಾ ರೀತಿಯಲ್ಲಿ ಆದಿವಾಸಿ ಮಹಿಳೆ. ಐದು ಜನರು ಮಕ್ಕಳಲ್ಲಿ ಆರನೆಯವರು ಬಡತನ ಹಾಗೂ ಶಾಲೆ ದೂರವಿದ್ದುದರಿಂದ ಮೂರನೆಯ ತರಗತಿಯ ನಂತರ ಶಾಲೆ ತೊರೆದರು. ಇವರ ಕುಟುಂಬವೂ ಸಹ ಕುದುರೆಮುಖ ರಾಷ್ಟ್ರೀಯ ಉದ್ಯಾನ ಯೋಜನೆಯಿಂದಾಗಿ ತನ್ನ ಎಲ್ಲವನ್ನು ಕಳೆದುಕೊಳ್ಳುವ ಅಪಾಯವನ್ನು ಎದುರಿಸುತ್ತಿದ್ದರು. ಪ್ರಜಾಸತ್ತಾತ್ಮಕ ಚಳವಳಿ ಫಲ ನೀಡದೆಂದು ಕಂಡಾಗ ಆಗಿನ ಹಲವರು ಯುವಜನರಂತೆ ಸುಂದರಿಯೂ ಸಹ ಆಯುಧವನ್ನು ಕೈಗೆತ್ತಿಕೊಂಡರು.
ತನ್ನ 19ನೆಯ ವಯಸ್ಸಿನಲ್ಲಿ 2004ರಲ್ಲಿ ಮಾವೋವಾದಿ ಪಕ್ಷದ ಸದಸ್ಯರಾಗಿದ್ದು, ಅಂದಿನಿಂದ ಕೇರಳ ಹಾಗೂ ಕರ್ನಾಟಕದಲ್ಲಿ ಸಂಚರಿಸುತ್ತಿರುವ ದಳದ ಭಾಗವಾಗಿದ್ದರು. ಸದ್ಯ ಕುದುರೆಮುಖ ಅರಣ್ಯ ಪ್ರದೇಶದಲ್ಲಿ ನಕ್ಸಲ್ ನಾಯಕಿ ಸುಂದರಿ ಇದ್ದಾರೆ.
ವನಜಾಕ್ಷಿ.
ವನಜಾಕ್ಷಿ ಎಸ್ ಎಸ್ ಎಲ್ ಸಿ ವರೆಗೂ ಓದಿರುವ ಇವರು ಈ ತಂಡದ ಅತಿ ಹಿರಿಯ ಸದಸ್ಯೆ. 1985 ರಲ್ಲಿ ಓದು ನಿಲ್ಲಿಸಿದ ಈ ಆದಿವಾಸಿ ಮಹಿಳೆ ತನ್ನ ಗ್ರಾಮದಲ್ಲಿ ಸಾರ್ವಜನಿಕ ಜೀವನದ ಭಾಗವಾಗಿ 1992 ಮತ್ತು 1997ರಲ್ಲಿ ಗ್ರಾಮ ಪಂಚಾಯಿತಿ ಸದಸ್ಯಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಎಂಟು ಜನ ಮಕ್ಕಳ ದೊಡ್ಡ ಕುಟುಂಬದ ಹೆಣ್ಣು ಮಗಳಾಗಿ ಟೈಪ ರೈಟಿಂಗ್ ಕಲಿತು ಹೊಲಿಗೆಯನ್ನು ಮಾಡಿಕೊಂಡು ಜೀವನ ನಡೆಸುತಿದ್ದರು. ಪೊಲೀಸರ ದೌರ್ಜನ್ಯ ,ಭೂ ಮಾಲೀಕರ ಕಿರುಕುಳ ವಿರುದ್ಧ ಹೋರಾಟಕ್ಕೆ ಧುಮುಕಿದರು.
ಮಾರೆಪ್ಪ ಅರೋಳಿ ಜಯಣ್ಣ.
ಜಯಣ್ಣ ಆರೋಲಿ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಅರೋಲಿ ಗ್ರಾಮದವರು. ಜಯಣ್ಣ ಬಿ.ಎ ವರೆಗೂ ಓದಿರುವ ದಲಿತ ಯುವಕ. ಕಾಲೇಜಿನಲ್ಲಿ ಇರುವಾಗಲೇ ಆ ಸಮಯದಲ್ಲಿ ಆ ಭಾಗದಲ್ಲಿ ನಡೆಯುತ್ತಿದ್ದ ಮಾವೋವಾದಿ ಚಳವಳಿಯ ಕಡೆ ಆಕರ್ಷಿತರಾದರು ಆಸಕ್ತಿಯಿಂದ ಚಳುವಳಿಯನ್ನು ಗಮನಿಸುತ್ತಿದ್ದ ಅವರಿಗೆ ಭಾಸ್ಕರ್ ಅವರ ಎನ್ಕೌಂಟರ್ ಹತ್ಯೆ ಆಘಾತವನ್ನುಂಟು ಮಾಡಿತು.ಜೊತೆಗೆ ಶ್ರೀಮಂತರ ದಬ್ಬಾಳಿಕೆ ವಿರೋಧಿಸಿ 2000 ದಲ್ಲಿ ತನ್ನ 24ನೇ ವಯಸ್ಸಿನಲ್ಲಿ ನಕ್ಸಲ್ ದಳದ ಭಾಗವಾದರು.
ಕೆ.ವಸಂತ.
ತಮಿಳುನಾಡಿನ ವೆಲ್ಲೂರಿನ ವಸಂತ್ ಬಿ. ಟೆಕ್ ಪದವೀಧರ ವೆಲ್ಲೂರು ಜಿಲ್ಲೆಯ ಆರ್ಕಾಟ್ ಇವರ ಊರು .ಸಮಾಜಮುಖಿ ಚಿಂತನೆಗಳಿಂದ ಪ್ರಭಾವಿತರಾದ ಇವರು ಹೋರಾಟಗಳನ್ನು ಗಮನಿಸುತ್ತಿ ಬೆಳೆದವರು.ಕುದರೆ ಮುಖ ರಾಷ್ಟ್ರೀಯ ಉದ್ಯಾನ ಹೋರಾಟ ದಲ್ಲಿ ಸಹ ಸಕ್ರಿಯರಾಗಿದ್ದರು.
2010ರಲ್ಲಿ ಪದವಿ ಮುಗಿಸಿದ ತಕ್ಷಣವೇ ಶಶಸ್ತ್ರ ಹೋರಾಟದ ಭಾಗವಾಗಿ ಅಂದಿನಿಂದಲೂ ಕೇರಳ ಕರ್ನಾಟಕಗಳಲ್ಲಿರುವ ದಳದ ಸದಸ್ಯರಾಗಿದ್ದರು.
ಟಿ.ಎನ್. ಜೀಶಾ.
ಕೇರಳದ ಜೀಶ ವಯನಾಡ್ ಜಿಲ್ಲೆಯ ಮಕ್ಕಿಮಲದ ಆದಿವಾಸಿ ಮಹಿಳೆ .ಎಂಟನೇ ತರಗತಿಯವರೆಗೂ ವಿದ್ಯಾಭ್ಯಾಸ ಮಾಡಿದ್ದಾರೆ. 2018ರಲ್ಲಿ ಕೇರಳದಲ್ಲಿ ಸಶಸ್ತ್ರ ಹೋರಾಟದ ಭಾಗವಾಗಿದ್ದು 2023ರಲ್ಲಿ ತಂಡದ ಇತರೆ ಸದಸ್ಯರೊಂದಿಗೆ ಕೇರಳದಿಂದ ಕರ್ನಾಟಕಕ್ಕೆ ಬಂದವರು.ಕರ್ನಾಟಕದ ಕರಾವಳಿ ಭಾಗದ ಹೋರಾಟದಲ್ಲೂ ಸಕ್ರಿಯರಾಗಿದ್ದರು. ಈಕೆ ಎಲ್ಲಾ ನಕ್ಸಲ್ ನಾಯಕರ ವಯಸ್ಸಿಗಿಂತ ಚಿಕ್ಕವಯಸ್ಸಿನವರಾಗಿದ್ದಾರೆ.