GOKARNA: ಕೋಟಿ ತೀರ್ಥದಲ್ಲಿ ಬೆಳಗಿದ ಸಹಸ್ರ ದೀಪ video ನೋಡಿ
ಕಾರವಾರ :- ಕಾರ್ತೀಕ ಮಾಸದ ವಿಶೇಷ ತಿಂಗಳಲ್ಲಿ ಕಾರ್ತೀಕೋತ್ಸವ ಆಚರಣೆ ನಡೆಸಲಾಗುತ್ತದೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಪ್ರಸಿದ್ಧ ಗೋಕರ್ಣ (Gokarna) ಕ್ಷೇತ್ರದ ಕೋಟಿತೀರ್ಥದ ವಿನಾಯಕ ದೇವಾಲಯದ ಕಾರ್ತೀಕ ದೀಪೋತ್ಸವ ಇಂದು ನೆರವೇರಿತು.
GOKARNA: ಕೋಟಿ ತೀರ್ಥದಲ್ಲಿ ಬೆಳಗಿದ ಸಹಸ್ರ ದೀಪ ವಿಡಿಯೋ ನೋಡಿ:-
ಚಂಡೆನಾದ, ವಾದ್ಯ ಘೋಷದ ನಡುವೆ ಸಾಗುವ ಉತ್ಸವ ಇನ್ನೊಂದಡೆ ಹಾಲಕ್ಕು ಒಕ್ಕಲಿಗರ ಗುಮಟೆ ಪಾಂಗ ಜಾನಪದೀಯ ಹಾಡು, ಮೊತ್ತೊಂದೆಡೆ ವಿದ್ಯುತ್ ದೀಪ , ಹಣತೆ ದೀಪದಿಂದ ಕಂಗೊಳಿಸುತ್ತಿರುವ ವಿಶಾಲ ಕೋಟಿತೀರ್ಥ, ಮಂದಿರದಲ್ಲಿ ವಿಶೇಷ ಅಲಂಕಾರ ವಿವಿಧ ದೈಕ ಕಾರ್ಯ , ಸಾವಿರಾರು ಜನರು ಭಾಗಿ , ಇದು ಕೋಟಿತೀರ್ಥ ಕಟ್ಟೆಯಲ್ಲಿರುವ ಪಟ್ಟೆ ವಿನಾಯಕ ದೇವಾಲಯದ ಕಾರ್ತಿಕ ದೀಪೋತ್ಸವ ಝಲಕ್.
ಇದನ್ನೂ ಓದಿ:-Gokarna ಆರೋಗ್ಯ ಕೇಂದ್ರದಲ್ಲಿದ್ದ ಕೋಟಿ ಮೌಲ್ಯದ ಪುರಾತನ ಬುದ್ದನ ಲೋಹ ಶಿಲ್ಪ ಕಾಣೆ!
ಪ್ರತಿ ವರ್ಷದಂತೆ ಕೋಟಿತೀರ್ಥಕಟ್ಟೆಯಲ್ಲಿರುವ ಪಟ್ಟೆವಿನಾಯಕ ಮಂದಿರದ 50 ನೇ ಕಾರ್ತಿಕ ದೀಪೋತ್ಸವ ವಿಜೃಂಭಣೆಯಿಂದ ನಡೆಯಿತು.
ಮುಂಜಾನೆ ವಿವಿಧ ದೈವಿಕ ಕಾರ್ಯಕ್ರಮಗಳ ಜರುಗಿ, ಸಂಜೆ ಶ್ರೀದೇವರ ಉತ್ಸವ ನಾಗಬೀದಿ ಮೂಲಕ ಮಹಾಬಲೇಶ್ವರ ಮಂದಿರಕ್ಕೆ ತೆರಳಿ ರಥಬೀದಿ ಮೂಲಕ ಮಂದಿರಕ್ಕೆ ಮರಳಿತು.
ನಂತರ ಅಷ್ಟಾವಧಾನ ಸೇವೆ ಮಹಾಮಂಗಳಾರತಿ ಪ್ರಸಾದ ವಿತರಣೆ ನಡೆಯಿತು. ಮಂದಿರದ ಅರ್ಚಕ ವೇ.ಚಿಂತಾಮಣ ಶಾಸ್ತಿ ಕೊಡಗಿ ಪೂಜಾ ಕೈಂಕರ್ಯ ನೆರವೇರಿಸಿದರು.
ವೆಂಕಟರಮಣ ಮಂದಿರದಿಂದ ಕೋಟಿತೀರ್ಥಕ್ಕೆ ಬರುವ ಮಾರ್ಗ ಹಾಗೂ ಎಳು ಎಕರೆ ವಿಸ್ತಾರದ ಕೋಟಿತೀರ್ಥ ಕಟ್ಟೆಗೆ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಅಲ್ಲದೇ ಉತ್ಸವ ಬರುವ ವೇಳೆ ಕೋಟಿತೀರ್ಥ ಕಟ್ಟೆಯನ್ನ ಹಣೆತೆಯಿಂದ ಸಹಸ್ರ ದೀಪ ಬೆಳಗಿಸಲಾಯಿತು.
ಕೋಟಿ ತೀರ್ಥ ದಲ್ಲಿ ವಾದ್ಯಘೋಷ, ಚಂಡೆನಾದ ಉತ್ಸವಕ್ಕೆ ಮೆರಗು ತಂದಿತ್ತು. ಉತ್ಸವ ಬರುವ ಮಾರ್ಗದಲ್ಲಿ ರಂಗೋಲಿ ಹಾಕಿ ಮಾವೀನ ತೋರಣದಿಂದ ಶೃಂಗರಿಸಿ ಜನರು ಆರತಿ ನೀಡಿ ವಂದಿಸಿದರು.