ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Weekly Horoscope in Kannda| ವಾರ ಭವಿಷ್ಯ 

ಮೇಷ ರಾಶಿ:ಈ ವಾರದಲ್ಲಿ ನೀವು ಶುಭ ಅಶುಭಗಳ ಮಿಶ್ರ ಫಲ ಕಾಣುವಿರಿ.ಕೆಲಸದಲ್ಲಿ ನಿರುತ್ಸಾಹವನ್ನೂ ಹೊಂದುತ್ತೀರ ವಾರದ ಕೊನೆಯಲ್ಲಿ ನೆಮ್ಮದಿ‌ ಕಾಣುವಿರಿ. ಆರೋಗ್ಯ ಮಧ್ಯಮ, ವ್ಯಾಪಾರಿಗಳಿಗೆ ಏರಿಳಿತ ಇರಲಿದೆ. ಕುಟುಂಬ ದಲ್ಲಿ ಆಗಾಗ ಮುನಿಸಿ ,ವೈಮನಸ್ಸು
11:49 AM Mar 24, 2025 IST | ಶುಭಸಾಗರ್

Weekly Horoscope in Kannda| ವಾರ ಭವಿಷ್ಯ

Advertisement

ಮೇಷ ರಾಶಿ:ಈ ವಾರದಲ್ಲಿ ನೀವು ಶುಭ ಅಶುಭಗಳ ಮಿಶ್ರ ಫಲ ಕಾಣುವಿರಿ.ಕೆಲಸದಲ್ಲಿ ನಿರುತ್ಸಾಹವನ್ನೂ ಹೊಂದುತ್ತೀರ ವಾರದ ಕೊನೆಯಲ್ಲಿ ನೆಮ್ಮದಿ‌ ಕಾಣುವಿರಿ. ಆರೋಗ್ಯ ಮಧ್ಯಮ, ವ್ಯಾಪಾರಿಗಳಿಗೆ ಏರಿಳಿತ ಇರಲಿದೆ. ಕುಟುಂಬ ದಲ್ಲಿ ಆಗಾಗ ಮುನಿಸಿ ,ವೈಮನಸ್ಸು ಇರಲಿದ್ದು ,ಆರ್ಥಿಕ ಮಧ್ಯಮ ಫಲವಿದೆ.

ವೃಷಭ ರಾಶಿ: ಈ ವಾರವು ನಿಮಗೆ ಏಳು,ಬೀಳುಗಳು ಕಷ್ಟಕರ ದಿನ ಕಳೆಯುವಿರಿ ಹೀಗಾಗಿ ಈ ವಾರ ಅಷ್ಟೊಂದು ಹಿತಕರವಲ್ಲ. ಆರೋಗ್ಯ ಸಮಸ್ಯೆ ಕಾಡುವುದು, ಹಣವ್ಯಯ ಹೆಚ್ಚಿದೆ, ಅನಗತ್ಯ ಒತ್ತಡವು ಕಾರ್ಯದಲ್ಲಿ ಹಿನ್ನಡೆ ತರಬಹುದು. ವ್ಯವಹಾರದಲ್ಲಿ ಲೋಪ ,ಉದ್ಯಮವು ನಿರೀಕ್ಷಿತ ಲಾಭವನ್ನು ಪಡೆಯದೇ ಇರಬಹುದು.ಕ್ರಿಯಾಶೀಲತೆ ಇಲ್ಲದೇ ಸೋಲು ಕಾಣುವಿರಿ. ವಿರೋಧಗಳು ಹೆಚ್ಚಿರುವುದು.ಆರ್ಥಿಕ ಲಾಭ ನಿರೀಕ್ಷೆ ನಿಧಾನ ಗತಿಯಲ್ಲಿದ್ದು ವಕೀಲರಿಗೆ ಮಧ್ಯಮ ಫಲ ಇದ್ದು ಹೋಟೆಲ್‌ ವೃತ್ತಿಯವರಿಗೆ ,ಕೃಷಿಕರಿಗೆ ಲಾಭ ಹೆಚ್ಚಿರದು ಆದರೇ ನಷ್ಟ ಆಗದು.

ಇದನ್ನೂ ಓದಿ:-Karnataka ದೇಶದ ಏಳನೇ ಅತೀ ದೊಡ್ಡ ಸಿಗಂದೂರು ಸೇತುವೆ ಕಾಮಗಾರಿ ಪೂರ್ಣ ಹಂತಕ್ಕೆ 

Advertisement

ಮಿಥುನ ರಾಶಿ: ಈ ವಾರ ನಿಮಗೆ ಏರಿಳಿತದ ವಾರವಾಗಿದೆ.ಉದ್ಯೋಗಿಗಳಿಗೆ ತೊಂದರೆ, ಕೃಷಿಕರಿಗೆ ಲಾಭ ಇರದು, ವ್ಯಾಪಾರಿಗಳಿಗೆ ಏರಿಳಿತ ವಿರುವುದು. ವಾರದ ಮಧ್ಯ ಭಾಗದಲ್ಲಿ ಶಾಂತಿ ಇರುವುದು, ಹಿತಶತ್ರುಗಳ ಕಾಟ ,ಮಹಿಳೆಯರಿಗೆ ಕಲಹ ,ದೇಹಾಯಾಸ ಹೆಚ್ಚು. ಹೊಸ ಕೆಲಸದಲ್ಲಿ ಶುಭ, ವಾರದ ಮಧ್ಯಭಾಗ ನೆಮ್ಮದಿ,ಹಣದ ಕರ್ಚು ಇರುವುದು,ಮೀನುಗಾರಿಕಾ ,ಚಿನ್ನ ಬೆಳ್ಳಿ ವ್ಯಾಪಾರಿಗಳಿಗೆ ಕೆಲಸ ಹೆಚ್ಚಿರದು. ಲಾಭ ಮಧ್ಯಮ ಇದ್ದು ಹೂಡಿಕೆಯಲ್ಲಿ ಲಾಭ ನಿರೀಕ್ಷಿಸಬಹುದು.

ಕರ್ಕಾಟಕ ರಾಶಿ: ಮಧ್ಯಮ ಶುಭ ,ವೈದ್ಯ , ವ್ಯಾಪಾರಿ ವೃತ್ತಿಯವರಿಗೆ ಲಾಭ , ನಿಮ್ಮ ಮೇಲೆ ಯಾರಾದರೂ ಪ್ರಭಾವ ಬೀರುವ ಸಾಧ್ಯತೆ ಇದೆ. ಆತುರದ ನಿರ್ಧಾರ ದಿಂದ ಹಿನ್ನಡೆ. ಮಕ್ಕಳ ಬಗ್ಗೆ ಜಾಗೃತದಿಂದಿದಿರಿ,ಕೆಲಸ ಕಾರ್ಯದಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಡಿ. ತಂದೆಯ ಜೊತೆ ಕಲಹವಾಗುವ ಸಾಧ್ಯತೆ ಇದೆ. ಹಿತ ಶತ್ರು ಕಾಟ ,ಅಧಿಕ ಕರ್ಚು ಇದ್ದು ಹಣ ನಷ್ಟವಾಗುವ ಆತಂಕವಿಹುದು‌ .

ಪ್ರಕೃತಿ ಮೆಡಿಕಲ್ ,ಕಾರವಾರ.

ಸಿಂಹ ರಾಶಿ: ಈವಾರ ನಿಮಗೆ ಮಿಶ್ರಫಲವು ಇರಲಿದೆ. ನಿಮಗೆ ದಿಡೀರ್ ಎಂದು ಅವಕಾಶ ದೊರೆಯುವುದು,ಕುಟುಂಬ ಕಲಹ ಮನಶಾಂತಿ ಗೆ ತೊಂದರೆ,ವ್ಯಾಪಾರಿಗಳಿಗೆ ಲಾಭ,ರಾಜಕಾರಣಿಗಳಿಗೆ ಮಿಶ್ರ ಫಲ, ವ್ಯಾಪಾರದಲ್ಲಿ ತಿರುಗಾಟ,ಕರ್ಚು , ಮಹಿಳೆಯರಿಗೆ ಮಿಶ್ರ ಫಲಗಳಿವೆ, ಚಿನ್ನ ಬೆಳ್ಳಿ ವ್ಯಾಪಾರಿಗಳಿಗೆ ಲಾಭ ಇರದು, ಕೃಷಿಕರಿಗೆ ಅಲ್ಪ ಲಾಭ,ಮಧ್ಯಮ ಶುಭ ಫಲ ಕಾಣುವಿರಿ.

ಕನ್ಯಾ ರಾಶಿ: ಈ ವಾರ ಕಷ್ಟಗಳು ಹೆಚ್ಚಾಗಲಿದೆ,ನಿಮ್ಮ ಆರೋಗ್ಯದಲ್ಲಿ ಏರಿಳಿತ ಇರಲಿದೆ.ಭೂ ವಿವಾದದಿಂದ ಸಮಸ್ಯೆ,ಸಾಲ ಪಡೆದ ವ್ಯಕ್ತಿಗಳು ಅವುಗಳನ್ನು ಮರುಪಾವತಿಸಲು ತೊಂದರೆಗಳನ್ನು ಎದುರಿಸಬಹುದು.ಆರ್ಥಿಕ ಏರಿಳಿತ ಇರುವುದು , ಪ್ರಭಾವಿ ವ್ಯಕ್ತಿಗಳ ಜೊತೆಗೆ ಸಂಪರ್ಕ ಸಾಧಿಸುವ ಅವಕಾಶವನ್ನು ಒಳ್ಳೆಯ ರೀತಿಯಲ್ಲಿ ಬಳಸಿಕೊಳ್ಳಿ. ಈ ವಾರ ದೀರ್ಘಾವಧಿಯ ಯೋಜನೆಯ ಸಿದ್ಧತೆ ಮಾಡಿಕೊಳ್ಳಿರಿ. ಕೃಷಿಕರಿಗೆ ಲಾಭ, ಉದ್ಯೋಗಿಗಳಿಗೆ ಮಧ್ಯಮ ಹಾಗೂ ವ್ಯಾಪಾರಿಗಳಿಗೆ ಉತ್ತಮ ಲಾಭ ಈ ವಾರ ಪಡೆಯಬಹುದಾಗಿದೆ.

 ತುಲಾ ರಾಶಿ: ರಾಶಿ ಚಕ್ರದ ಏಳನೇ ರಾಶಿಯವರಿಗೆ ಮಿಶ್ರಫಲ. ವ್ಯಾಪಾರ ವ್ಯವಹಾರ ಲಾಭ ಇರುವುದು.ಕುಟುಂಬ ಸೌಖ್ಯ . ಯಾವುದಾದರೂ ಘಟನೆಯು ಸ್ವಾಭಿಮಾನಕ್ಕೆ ತೊಂದರೆ ಕೊಟ್ಟೀತು. ಯಾವುದೇ ಸಾಲ ನೀಡಿದರೂ ಅದು ಮರಳಿ ಬರಲಿದೆ. ನಿಮ್ಮ ನಿರ್ಧಾರಗಳು ನೌಕರರ‌ ಮೇಲೆ‌ ವಿಪರೀತ ಪರಿಣಾಮವನ್ನು ಬೀರುವುದು. ಈ ವಾರದಲ್ಲಿ ಮಾತಿಗೆ ತಪ್ಪುವ ಅವಕಾಶಗಳು ಹೆಚ್ಚು ಕಾಣಿಸುವುದು.ಆರ್ಥಿಕ ವಾಗಿ ಶುಭವಿದೆ ,ಹೋಟಲ್ ಉದ್ಯಮದವರಿಗೆ ಲಾಭ ಇರುವುದು.

ವೃಶ್ಚಿಕ ರಾಶಿ; ಆಗಸ್ಟ್ ತಿಂಗಳ ಮೂರನೇ ವಾರ ನಿಮಗೆ ಶುಭ. ಎಲ್ಲದರಲ್ಲಿಯೂ ಅಂತರ ಕಾಯ್ದುಕೊಂಡು ನಿಮ್ಮ ಕಾರ್ಯವನ್ನು ಪೂರ್ಣ ಮಾಡಿಕೊಳ್ಳುವಿರಿ. ಕೆಲಸವಿದ್ದಾಗ ಮಾತ್ರ ನಿಮ್ಮ ಸ್ಥಾನವನ್ನು ಬಿಡುವುದು ಸೂಕ್ತ. ಈ ವಾರದಲ್ಲಿ ಯಾರಾದರೂ ನಿಮಗೆ ಆಗಬಾರದ ಮಾತುಗಳನ್ನು ಆಡುವರು. ಮನೋರಂಜನೆಗೆ ಅವಕಾಶವನ್ನು ಮಾಡಿಕೊಳ್ಳುವಿರಿ. ಮಕ್ಕಳಿಗಾಗಿ ಓಡಾಟ ಮಾಡಬೇಕಾದೀತು. ಜಾಗರೂಕತೆಯಿಂದ ವ್ಯವಹಾರ ಮಾಡುವುದು ಅನಿವಾರ್ಯವಾಗಲಿದೆ. ಸುಮಂಗಲಿಯರಿಗೆ ಭೋಜನ‌ ಮಾಡಿಸಿ.

ಧನು ರಾಶಿ: ಈ ರಾಶಿಯವರಿಗೆ ಈ ವಾರ ಅಶುಭ ಫಲ ಹೆಚ್ಚು , ಕಬ್ಬಿಣ ಕಾದಾಗಲೇ ಅದಕ್ಕೆ ಕೊಡಬೇಕಾದ ರೂಪವನ್ನು ಕೊಡುವುದು ಉತ್ತಮ. ಯುಕ್ತಿಯಿಂದ ಸಾಧಿಸಲು ಸಾಧ್ಯವಾಗುವುದನ್ನು ಶಕ್ತಿಯಿಂದ ಮಾಡುವುದು ಬೇಡ. ನಿಮಗೆ ನಂಬಿಕೆ ಕಡಿಮೆ. ಎಲ್ಲವನ್ನೂ ಅನುಕರಣೆ ಮಾಡುವಿರಿ ಅಷ್ಟೇ. ನೇರ ಮಾತುಗಳನ್ನು ಆಡಿದ ಮಾತ್ರ ನಡೆಯೂ ನೇರವಾಗಿರಬೇಕೆಂದಿಲ್ಲ. ನಿಮ್ಮ ಕರ್ತವ್ಯವನ್ನು ಲೋಪ ಮಾಡದೇ ನಿರ್ವಹಿಸಿ. ಅನಗತ್ಯ ಸಲಹೆಗಳನ್ನು ನೀವು ಕೇಳಿ ಚಿಂತೆಗೊಳ್ಳುವಿರಿ.ಮಾನಸಿಕ ನೆಮ್ಮದಿಗೆ ಕ್ಷೇತ್ರ ಪ್ರಯಾಣ ಹಿತಕರ ಅನುಭವ ನೀಡುವುದು. ಉದ್ಯಮಿಗಳಿಗೆ ನಷ್ಟ,ವ್ಯಾಪಾರಿಗಳಿಗೆ ಮಧ್ಯಮ ಲಾಭ ಇರುವುದು.

 ಮಕರ ರಾಶಿ: ಈ ರಾಶಿಯವರಿಗೆ ಈ ವಾರ ಶುಭ ಕಾಣಬಹುದು, ವ್ಯಾಪಾರ ವೃದ್ಧಿ,ಉದ್ಯೋಗಿಗಳಿಗೆ ಲಾಭ, ಯತ್ನ ಕಾರ್ಯ ಅಡಚಣೆ ಇದ್ದರೂ ಯಶಸ್ಸು ಪಡೆಯಬಹುದಾಗಿದೆ.ಸ್ನೇಹಿತರಿಂದ ಲಾಭವಾಗಲಿದೆ. ಕುಟುಂಬದಲ್ಲಿ ಮಧ್ಯಮ ನೆಮ್ಮದಿ ಇರುವುದು ಆದರೂ ಆಗಾಗ ಮಾನಸಿಕ ವೇದನೆ ಕಾಡುವುದು. ಕೃಷಿಕರಿಗೆ ಲಾಭ ನಿರೀಕ್ಷೆ ಇರದು.

 ಕುಂಭ ರಾಶಿ: ಈ ವಾರ ಶುಭ. ನಿಮ್ಮ ಉದಾರ ಮನೋಭಾವವು ಯಾವುದೋ ರೀತಿಯಲ್ಲಿ ಕಾರ್ಯವನ್ನು ಮಾಡುತ್ತದೆ. ಈ ವಾರ ಸಾಮಾಜಿಕ ಕಾರ್ಯಗಳಿಗೆ ಹೆಚ್ಚು ಒತ್ತು ನೀಡುವಿರಿ. ಇತರರ ಬಗ್ಗೆ ಆಲೋಚಿಸಲೂ ನಿಮಗೆ ಸಮಯ ಸಿಗದು. ಸಂಗಾತಿಯ ದುಃಖವನ್ನು ನಿವಾರಿಸುವ ಪ್ರಯತ್ನದಲ್ಲಿ ಯಶಸ್ವಿಯಾಗುವಿರಿ. ಕಪ್ಪು ತಿಲವನ್ನು ಸಂಕಲ್ಪ ಪೂರ್ವಕವಾಗಿ ದಾನ‌ ಮಾಡಿ.

 ಮೀನ ರಾಶಿ: ಈ ವಾರ ಮಿಶ್ರ ಫಲ. ಈ ವಾರದಲ್ಲಿ ಸ್ನೇಹಿತರ ಜೊತೆ ಸುಂದರ ಸಮಯವನ್ನು ಕಳೆಯುವರು. ಹಣಕಾಸಿನ ಕೊರತೆ ಕಂಡುಬಂದರೂ ಅನಂತರ ಅದು ಅನಿರೀಕ್ಷಿತವಾಗಿ ಸರಿಯಾಗುವುದು. ಒಳ್ಳೆಯವರಿಗೆ ಒಳ್ಳೆಯ ಮನಸ್ಸಿನಿಂದ ದಾನ ಮಾಡುವಿರಿ. ಹೊಸಬರ ಭೇಟಿಯು ನಿಮಗೆ ಆಹ್ಲಾದವನ್ನೂ ಉತ್ಸಾವನ್ನೂ ಕೊಡುವುದು. ನಿಮ್ಮ ಯೋಜನೆಗಳು ಪೂರತಪ್ಪಿಹೋಗ ಬಲದಿಂದ ಕಾಣುವುದು. ಗೋಪೂಜೆಯಿಂದ ಮನಸ್ಸಿಗೆ ನೆಮ್ಮದಿ ಇದೆ

Advertisement
Tags :
AatrologyKannda newsKarnatakaNewsWeekly Horoscopeರಾಶಿಫಲವಾರ ಭವಿಷ್ಯ
Advertisement
Next Article
Advertisement