Karwar | ಹಣ ಕೊಡದೇ ಪೀಡಿಸಿದ ಮಾಜಿ ಸಚಿವ ಆನಂದ್ ಅಸ್ನೋಟಿಕರ್ | ಹೋಟಲ್ ನ ಬೋರ್ಡ ಕಿತ್ತಿಟ್ಟುಕೊಂಡು ಬಂದ್ರೂ ಸಿಗುತ್ತಿಲ್ಲ ಮಾಡಿದ ಕೆಲಸಕ್ಕೆ ಹಣ!
Karwar | ಹಣ ಕೊಡದೇ ಪೀಡಿಸಿದ ಮಾಜಿ ಸಚಿವ ಆನಂದ್ ಅಸ್ನೋಟಿಕರ್ | ಹೋಟಲ್ ನ ಬೋರ್ಡ ಕಿತ್ತಿಟ್ಟುಕೊಂಡು ಬಂದ್ರೂ ಸಿಗುತ್ತಿಲ್ಲ ಮಾಡಿದ ಕೆಲಸಕ್ಕೆ ಹಣ!
ಕಾರವಾರ(31 October 2025) :- ಕಾರವಾರದ(Karwar) ಮಾಜಿ ಸಚಿವ ಆನಂದ್ ಆಸ್ನೋಟಿಕರ್ ಮೇಲೆ ಕೆಲಸ ಮಾಡಿಸಿಕೊಂಡು ಹಣ ಕೊಡದೇ ವಂಚಿಸಿದ ಆರೋಪ ಕೇಳಿ ಬಂದಿದ್ದು ಕೆಸಲ ಮಾಡಿ ಉಳಿದ ಪೇಮೆಂಟ್ ಸಿಗದೇ ಕಂಪನಿಯೊಂದು ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಲು ಸಿದ್ದವಾಗಿದೆ.
ಏನಿದು ಘಟನೆ ?
ಮಾಜಿ ಸಚಿವ ಆನಂದ್ ಆಸ್ನೋಟಿಕರ್ ಗೆ ಸೇರಿದ ಕಾರವಾರದ ಸದಾಶಿವಗಡ ದ ರಾಷ್ಟ್ರೀಯ ಹೆದ್ದಾರಿ 66 ರ ಪಕ್ಕದಲ್ಲಿ ಇರುವ ಲೋಟಸ್ ಬಾರ್ &ರೆಸ್ಟೋರೆಂಟ್ ನಲ್ಲಿ 2023 ರಲ್ಲಿ ಹುಬ್ಬಳ್ಳಿ ಮೂಲದ singenext digital India Private Limited ಕಂಪನಿಯು ಎಲ್.ಇಡಿ ಸೈನ್ ಬೋರ್ಡ ನನ್ನು ಹಾಕಿಕೊಟ್ಟಿತ್ತು. ಇದರ ಮೊತ್ತ ₹408,883 ಆಗಿದ್ದು ಮುಂಗಡ ಹಣ ಅಂದಾಜು ಎರಡು ಲಕ್ಷ ನೀಡಿದ್ದರು. ಕೆಲಸ ಮುಗಿದ ಮೇಲೆ 1.50 ಲಕ್ಷ ಹಣ ನೀಡಬೇಕಿದೆ.
Karwar | ಪ್ರಸಿದ್ಧ ರಾಧಾಕೃಷ್ಣ ದೇವಾಲಯದಲ್ಲಿ ಕಳ್ಳತನ | ಲಕ್ಷಾಂತರ ರುಪಾಯಿ ಮೌಲ್ಯದ ಆಭರಣ ಕಳವು
ಆದರೇ ಈ ಹಣವನ್ನು ಎರಡು ವರ್ಷವಾದರೂ ನೀಡಲಿಲ್ಲ. ಇನ್ನು ಅವರ ಆಪ್ತ ಕಾರ್ಯದರ್ಶಿ ವಿವೇಕ್ ಬಾಂದೇಕರ್ ರವರಿಗೆ ಕರೆ ಮಾಡಿ ವಿನಂತಿಸಿಕೊಂಡಿದ್ದಾರೆ.ಆದರೇ ಉದ್ಧಟತನ ತೋರಿದ ಅವರು ಉಳಿದ ಹಣ ನೀಡಲು ಮುಂದಾಗಲಿಲ್ಲ. ಇನ್ನು ಸಂಸ್ಥೆಯ ಮಾಲೀಕ ಸಂತೋಷ್ ತಂಬದ್ ರವರು ಕುದ್ದು ಮಾಜಿ ಸಚಿವ ಆಸ್ನೋಟಿಕರ್ ಗೆ ಕರೆ ಮಾಡಿದ್ದಾರೆ. ಆಗ ಅವರು ತಮ್ಮ ಪಿ.ಎ ವಿವೇಕ್ ಗೆ ಮಾತನಾಡುವಂತೆ ಹೇಳಿದ್ದಾರೆ.ಆದರೇ ಅವರು ಫೋನ್ ಎತ್ತದೇ ಸತಾಯಿಸಿದ್ದಾರೆ. ಇನ್ನು ಮೆರಳಿ ಮಾಜಿ ಸಚಿವರಿಗೆ ಕರೆ ಮಾಡಿದರೆ ನಂತರ ಕಂಪನಿ ಮಾಲೀಕ ಸಂತೋಷ್ ತಂಬದ್ ರವರ ನಂಬರ್ ನನ್ನು ಬ್ಲಾಕ್ ಮಾಡಿದ್ದಾರೆ. ಇನ್ನು ಹಣ ಬರದದ್ದು ನೋಡಿ ಹೋಟಲ್ ಗೆ ಅಳವಡಿಸಿದ್ದ ಬೋರ್ಡ ನ ಕೆಲವು ಅಕ್ಷರಗಳನ್ನು ಕಿತ್ತು ತಂದಿದ್ದರು.
ನಂತರ ಕರೆ ಮಾಡಿ ಪೂರ್ಣ ಹಣ ನೀಡುವುದಾಗಿ ಹೇಳಿ ಕರೆಸಿ 50 ಸಾವಿರ ಮಾತ್ರ ನೀಡಿದ್ದರು. ಇದಾದ ನಂತರ ಈವರೆಗೂ ಹಣ ನೀಡಲಿಲ್ಲ ಎಂಬುದು ಮಾಲೀಕರ ಆರೋಪ. ಹೀಗಾಗಿ ಮಾಜಿ ಸಚಿವರ ಮೇಲೆ ಚಿತ್ತಾಕುಲ ಠಾಣೆಯಲ್ಲಿ ದೂರು ದಾಖಲಿಸಲು ಸಂತೋಷ್ ಮುಂದಾಗಿಹೇಳಿದ್ದಾರೆ
ಕಷ್ಟಪಟ್ಟು ಕೆಲಸ ಮಾಡುತ್ತೇವೆ ,ಮಾಜಿ ಸಚಿವರೇ ಹೀಗೆ ಹಣ ಕೊಡದೇ ವಂಚಿಸಿದರೇ ಹೇಗೆ ? ನಾವು ಮಾಡಿದ ಕೆಲಸಕ್ಕಾದರೂ ಹಣ ನೀಡುವಂತೆ ಅವರು ತಮಗಾದ ನೋವು ತೋಡಿಕೊಂಡಿದ್ದಾರೆ.
ಇನ್ನು ಸಚಿವರಾಗಿ ತಮ್ಮದೇ ಕ್ಷೇತ್ರದಲ್ಲಿ ಹೆಸರು ಮಾಡಿದ್ದ ಆಸ್ನೋಟಿಕರ್ , ಹಲವರಿಗೆ ಸಹಾಯ ಮಾಡಿದವರು, ಕಾರವಾರ ಕ್ಷೇತ್ರದಲ್ಲಿ ಒಳ್ಳೆ ಹೆಸರಿದ್ದ ಅವರು ಹಲವು ಬಾರಿ ಚುನಾವಣೆ ಸೋತರೂ ಅವರ ಅಭಿಮಾನಿಗಳ ಸಂಖ್ಯೆ ಕಡಿಮೆ ಆಗಿಲ್ಲ. ಆದರೇ ಈ ರೀತಿಯ ಘಟನೆಗಳು ಮಾಜಿ ಸಚಿವ ಅಸ್ನೋಟಿಕರ್ ರವರ ಘನತೆಗೆ ಚ್ಯುತಿ ತರುವಂತದ್ದು, ಕಷ್ಟ ಪಟ್ಟು ಕೆಲಸ ಮಾಡುವ ಜನರ ಹೊಟ್ಟೆಮೇಲೆ ಹೊಡೆಯುವ ಮಟ್ಟಿಗೆ ಆನಂದ್ ಆಸ್ನೋಟಿಕರ್ ಹೋಗುತ್ತಾರೆಯೇ ? ಎಂಬುದು ಜನರಲ್ಲಿ ಏಳುವ ಪ್ರಶ್ನೆ ಆಗಿದ್ದು ಮಾಜಿ ಸಚಿವರು ಈ ಬಗ್ಗೆ ಏನು ಕ್ರಮ ಕೈಗೊಳ್ಳುತ್ತಾರೆ, ಅವರ ಕೆಲಸದ ಹಣ ನೀಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.