Karwar | ರಾತ್ರೋ ರಾತ್ರಿ ಮತ್ತೆ ಜೈಲಿನಲ್ಲಿ ದಾಂಧಲೆ ಮಾಡಿದ ಕೈದಿಗಳು!
Karwr | ರಾತ್ರೋ ರಾತ್ರಿ ಮತ್ತೆ ಜೈಲಿನಲ್ಲಿ ದಾಂಧಲೆ ಮಾಡಿದ ಕೈದಿಗಳು!
ಕಾರವಾರ :- ಕಾರವಾರ ಜಿಲ್ಲಾ ಕಾರಾಗೃಹದಲ್ಲಿ ಮತ್ತೆ ಮಾರಾಮಾರಿಯಾಗಿದ್ದು ಜೈಲಿನಲ್ಲಿ ಮಂಗಳೂರಿನ ಆರು ಜನ ಆರೋಪಿಗಳಲ್ಲಿ ನಾಲ್ಕು ಜನ ಆರೋಪಿಗಳು ಜೈಲಿನಲ್ಲಿ ಗಲಾಟೆ ಮಾಡಿರುವುದಾಗಿ ಮೂಲಗಳಿಂದ ತಿಳಿದು ಬಂದಿದೆ.
ಜೈಲಿನಲ್ಲಿದ್ದ ಟಿ.ವಿ ಸೇರಿದಂತೆ ಹಲವು ವಸ್ತುಗಳನ್ನು ನಾಶ ಮಾಡಿದ ಜೈಲಿನಲ್ಲಿರುವ ಮಂಗಳೂರು ಮೂಲದ ನಾಲ್ಕು ಜನ ಆರೋಪಿಗಳು ದಾಂದಲೆ ಮಾಡಿದ್ದಾರೆ.
ಜೈಲಿಗೆ ದೌಡಾಯಿಸಿದ ಕಾರವಾರ ನಗರ ಠಾಣೆ ಪೊಲೀಸರ ತಂಡ ಗಲಾಟೆಯನ್ನು ತಹಬದಿಗೆ ತಂದಿದೆ.
ಮೊನ್ನೆ ದಿನ ಮಾದಕ ವಸ್ತುಗಳ ಜೈಲಿನಲ್ಲಿ ಬಿಡದೆ ಬಿಗಿ ಹಾಕಿದ ಹಿನ್ನೆಲೆಯಲ್ಲಿ ಜೈಲರ್ ಸೇರಿದಂತೆ ಮೂವರು ಸಿಬ್ಬಂದಿಗಳ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿತ್ತು .

ಮಂಗಳೂರು ಮೂಲದ ಮೊಹ್ಮದ್ ಅಬ್ದುಲ್ ಫಯಾನ್, ಕೌಶಿಕ ನಿಹಾಲ್ ಹಲ್ಲೆ ಮಾಡಿದ್ದರು
ಜೈಲರ್ ಕಲ್ಲಪ್ಪ ಗಸ್ತಿ ಸೇರಿದಂತೆ ಮೂವರು ಸಿಬ್ಬಂದಿ ಮೇಲೆ ಹಲ್ಲೆ ಮಾಡಲಾಗಿತ್ತು .
Karwar | ಕಾರವಾರದಲ್ಲಿ ಜೈಲು ಸಿಬ್ಬಂದಿ ಮೇಲೆ ಕೈದಿಗಳ ಹಲ್ಲೆ | ಮಾದಕ ವಸ್ತುಗಾಗಿ ಬೇಡಿಕೆ
ಡಕಾಯತಿ ಸೇರಿದಂತೆ 12ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಆರೋಪಿಗಳಾಗಿರುವ ಆರು ರೌಡಿಗಳು,ಮಂಗಳೂರು ಜೈಲಿನಲ್ಲಿ ಹೆಚ್ಚುವರಿಯಾಗಿದ್ದ ಆರು ಆರೋಪಿಗಳನ್ನ ಕಾರವಾರ ಕ್ಕೆ ಶಿಫ್ಟ್ ಮಾಡಲಾಗಿತ್ತು.
ಮೊನ್ನೆ ಹಲ್ಲೆ ಘಟನೆ ಬೆನ್ನಲ್ಲೇ ಇಂದು ಉಳಿದ ಸಹಚರರಿಂದ ಜೈಲಿನಲ್ಲಿ ದಾಂಧಲೆಮಾಡಿದ್ದಾರೆ.
ಕಾರವಾರ ಡಿ.ವೈ.ಎಸ್.ಪಿ ಗಿರೀಶ್ ಜೈಲಿಗೆ ತೆರಳಿಗಲಾಟೆ ತಹಬದಿಗೆ ತಂದಿದ್ದಾರೆ.
ಘಟನೆ ಸಂಬಂಧ ಕಾರವಾರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.