Karwar| ಅಬಕಾರಿ ದಾಳಿ ಆರು ಲಕ್ಷ ಮೌಲ್ಯದ ಮದ್ಯ ವಶ
Karwar| ಅಬಕಾರಿ ದಾಳಿ ಆರು ಲಕ್ಷ ಮೌಲ್ಯದ ಮದ್ಯ ವಶ
ಕಾರವಾರ: ಅಬಕಾರಿ ಇಲಾಖೆ ಅಧಿಕಾರಿಗಳು ಕಾರವಾರ ವ್ಯಾಪ್ತಿಯಲ್ಲಿ ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ ಬೃಹತ್ ಪ್ರಮಾಣದ ಅಕ್ರಮ ಗೋವಾ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.
Goa| ಗೋವಾ -ಮಾಜಾಳಿ ಗಡಿಯಲ್ಲಿ ತಪಾಸಣೆ ವೇಳೆ ಸಿಕ್ಕಿಬಿತ್ತು ಕೋಟಿ ಹಣ ! ಇಬ್ಬರು ಪೊಲೀಸರ ವಶಕ್ಕೆ!
ಟಾಟಾ ಇಂಡಿಕಾ ಕಾರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 133.560 ಲೀಟರ್ ವಿವಿಧ ನಮೂನೆಯ ಮದ್ಯವನ್ನು ಜಪ್ತಿ ಮಾಡಲಾಗಿದ್ದು, ಇದರ ಒಟ್ಟು ಮೌಲ್ಯ 6 ಲಕ್ಷ ರೂಪಾಯಿಗಳಿಗೂ ಅಧಿಕ ಎಂದು ಅಂದಾಜಿಸಲಾಗಿದೆ.
ಅಬಕಾರಿ ಜಂಟಿ ಆಯುಕ್ತರು, ಮಂಗಳೂರು ವಿಭಾಗ ಹಾಗೂ ಅಬಕಾರಿ ಉಪ ಆಯುಕ್ತರು, ಉತ್ತರ ಕನ್ನಡ ಜಿಲ್ಲೆ ಕಾರವಾರ ರವರ ನಿರ್ದೇಶನದ ಮೇರೆಗೆ ಕಾರವಾರ ಉಪ ವಿಭಾಗ ಮತ್ತು ಕಾರವಾರ ವಲಯದ ಅಧಿಕಾರಿಗಳು ಮತ್ತು ಸಿಬ್ಬಂದಿ ತಂಡವು ನವೆಂಬರ್ 19ರ ಬೆಳಗಿನ ಜಾವ 2 ಗಂಟೆ ವ್ಯಾಪ್ತಿಯಲ್ಲಿ ಗಸ್ತು ನಡೆಸುತ್ತಿತ್ತು.
Karwar |ಜೈಲಿನ ಮೇಲೆ ಪೊಲೀಸರ ದಾಳಿ | ಮೊಬೈಲ್ ಸೇರಿದಂತೆ ಹಲವು ವಸ್ತುಗಳು ವಶಕ್ಕೆ
ಈ ಸಂದರ್ಭದಲ್ಲಿ ಬಂದ ಖಚಿತ ಮಾಹಿತಿ ಆಧರಿಸಿ, ಅಧಿಕಾರಿಗಳು ಗಾಂವಗೇರಿ ಕ್ರಾಸ್ ಹತ್ತಿರ ಟಾಟಾ ಇಂಡಿಕಾ ಕಾರು (ನಂ: KA-30 M 4412) ಅನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸಿದರು.
ಪರಿಶೀಲನೆಯ ವೇಳೆ ಕಾರಿನಲ್ಲಿ 133.560 ಲೀಟರ್‌ನಷ್ಟು ಗೋವಾ ಮದ್ಯವನ್ನು ಅಕ್ರಮವಾಗಿ ಸಾಗಿಸಲಾಗುತ್ತಿರುವುದು ಪತ್ತೆಯಾಯಿತು. ವಶಪಡಿಸಿಕೊಂಡ ಇಂಡಿಕಾ ಕಾರು ಮತ್ತು ಮದ್ಯದ ಅಂದಾಜು ಒಟ್ಟು ಮೌಲ್ಯ 6,14,400/- ರೂಪಾಯಿ ಆಗಿರುತ್ತದೆ.
ಆದರೆ, ಅಧಿಕಾರಿಗಳು ದಾಳಿ ನಡೆಸುತ್ತಿರುವ ಸಂದರ್ಭದಲ್ಲಿ ವಾಹನ ಚಾಲಕನು ಕತ್ತಲಿನಲ್ಲಿ ಓಡಿ ಪರಾರಿಯಾಗಿದ್ದಾನೆ. ಈ ಸಂಬಂಧ ಕಾರವಾರ ಉಪ ವಿಭಾಗದ ವತಿಯಿಂದ ಪ್ರಕರಣ ದಾಖಲಿಸಲಾಗಿದೆ. ಪರಾರಿಯಾದ ಆರೋಪಿಯನ್ನು ಮುಂದಿನ ದಿನಗಳಲ್ಲಿ ಪತ್ತೆ ಹಚ್ಚಿ ಬಂಧಿಸಲಾಗುವುದು ಎಂದು ಅಬಕಾರಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.