Karwar |1,14,700 ಮೌಲ್ಯದ ಗೋವಾ ಮದ್ಯ ಜೊತೆ ವಾಹನ ವಶಕ್ಕೆ -ಆರೋಪಿ ಪರಾರಿ
Karwar excise officials seized a vehicle along with Goa liquor worth Rs 1,14,700 during a raid in forest area. The accused fled from the spot.
11:20 PM Dec 08, 2025 IST | ಶುಭಸಾಗರ್
Karwar |1,14,700 ಮೌಲ್ಯದ ಗೋವಾ ಮದ್ಯ ಜೊತೆ ವಾಹನ ವಶಕ್ಕೆ -ಆರೋಪಿ ಪರಾರಿ.
Advertisement
ಕಾರವಾರ :- ಗೋವಾ (goa)ದಿಂದ ಕರ್ನಾಟಕದತ್ತ ಅರಣ್ಯ ಪ್ರದೇಶದಿಂದ ಸಾಗಿಸುತ್ತಿದ್ದ ಭಾರಿ ಮೊತ್ತದ ಮದ್ಯ ವಶಪಡಿಸಿಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ (karwar) ನಡೆದಿದೆ.

ಕಾರವಾರ ಅಬಕಾರಿ ಇಲಾಖೆ ಸಿಬ್ಬಂದಿಯ ಕಾರ್ಯಾಚರಣೆ ನಡೆಸಿ ಮುಡಗೇರಿ ಅರಣ್ಯ ಪ್ರದೇಶದಿಂದ ಸಾಗಿಸುತ್ತಿದ್ದ ಸುಮಾರು 1,14,700 ರೂ ಮೊತ್ತದ ವಾಹನ ಸಮೇತ ಮದ್ಯ ವಶಕ್ಕೆ ಪಡೆಯಲಾಗಿದೆ.
Karwar | ಕಾರವಾರದಲ್ಲಿ ಜೈಲು ಸಿಬ್ಬಂದಿ ಮೇಲೆ ಕೈದಿಗಳ ಹಲ್ಲೆ | ಮಾದಕ ವಸ್ತುಗಾಗಿ ಬೇಡಿಕೆ

ಕಾರ್ಯಾಚರಣೆಯಲ್ಲಿ ಅಬಕಾರಿ ಉಪ ಆಯುಕ್ತ ಅಮನವುಲ್ಲಾ ನೇತೃತ್ವದಲ್ಲಿ ದಾಳಿ ನಡೆದಿದ್ದು ,ಸಮವಸ್ತದಲ್ಲಿದ್ದ ಸಿಬ್ಬಂದಿಯನ್ನ ಕಂಡು ವಾಹನ ಬಿಟ್ಟು ಆರೋಪಿ ಪರಾರಿಯಾಗಿದ್ದಾನೆ.ಘಟನೆ ಸಂಬಂಧ ಉತ್ತರ ಕನ್ನಡ ಅಬಕಾರಿ ನಿರಿಕ್ಷಕರಿಂದ ಪ್ರಕರಣ ದಾಖಲಾಗಿದೆ.
Advertisement