Karwar |ಜೈಲಿನ ಮೇಲೆ ಪೊಲೀಸರ ದಾಳಿ | ಮೊಬೈಲ್ ಸೇರಿದಂತೆ ಹಲವು ವಸ್ತುಗಳು ವಶಕ್ಕೆ
Karwar |ಜೈಲಿನ ಮೇಲೆ ಪೊಲೀಸರ ದಾಳಿ | ಮೊಬೈಲ್ ಸೇರಿದಂತೆ ಹಲವು ವಸ್ತುಗಳು ವಶಕ್ಕೆ
Karwar , November19 :- ಉತ್ತರ ಕನ್ನಡ ಜಿಲ್ಲೆಯ ಕಾರವಾರದ (karwar)ಜಿಲ್ಲಾ ಕಾರಾಗೃಹಕ್ಕೆ ಎ.ಎಸ್.ಪಿ ಕೃಷ್ಣಮೂರ್ತಿ ನೇತ್ರತ್ವದ ತಂಡ ದಿಡೀರ್ ದಾಳಿ ನಡೆಸಿ ಮೊಬೈಲ್ ಹಾಗೂ ಹಲವು ವಸ್ತುಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.
ಜೈಲಿನಲ್ಲಿ ಅಕ್ರಮ ಚಟುವಟಿಕೆ ಬಗ್ಗೆ ಮಾಹಿತಿ ಪಡೆದಿದ್ದ ಪೊಲೀಸರು ದಿಡೀರ್ ದಾಳಿ ನಡೆಸಿದ್ದಾರೆ. ಜೈಲಿನಲ್ಲಿ ಪರಿಶೀಲನೆಯ ವೇಳೆ ಕೈದಿ ಮೊಹಮ್ಮದ್ ನೌಫಲ್ ಎಂಬವನ ಬಳಿ ಕಾರ್ಬನ್ ಕಂಪನಿಯ ಮೊಬೈಲ್ ಫೋನ್ ಪತ್ತೆಯಾಗಿದೆ. ಇದಲ್ಲದೆ ಇದೇ ಬ್ಯಾರಕ್‌ನ 9ನೇ ಸೆಲ್‌ನಲ್ಲಿದ್ದ ಪ್ಲಾಸ್ಟಿಕ್ ಬ್ಯಾಗ್‌ನಿಂದ ಬೀಡಿ ಪ್ಯಾಕ್, ಬೆಂಕಿಪಟ್ಟಣ, ಪಟ್ಟಣದಲ್ಲಿ ಇದ್ದ ಮಾದಕ ವಸ್ತು ಹೋಲುವ ಪುಡಿಯ ಪ್ಯಾಕೆಟ್‌ಗಳು ಹಾಗೂ ಲೈಟರ್ ವಶಪಡಿಸಿಕೊಳ್ಳಲಾಗಿದೆ.
Karwar| ಜಿಲ್ಲಾಧಿಕಾರಿ ಕಚೇರಿಗೆ ದಾಳಿ ಇಟ್ಟ ಉಡ! ವಿಡಿಯೋ ನೋಡಿ
ಕಾರಾಗೃಹದೊಳಗೆ ನಿಷೇಧಿತ ವಸ್ತುಗಳು ಹೇಗೆ ಸೇರಿವೆ ಎಂಬುದರ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದು, ಕರ್ನಾಟಕ ಕಾರಾಗೃಹ ತಿದ್ದುಪಡಿ ಅಧಿನಿಯಮದಡಿ ಕಾರವಾರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಎಸ್.ವಿ. ಗಿರೀಶ್ ಅವರು ಕಾರವಾರ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಇದಲ್ಲದೇ ಸಿಕ್ಕ ಮಾದಕ ಪದಾರ್ಥ ರೀತಿ ಉದ್ದ ಪೌಡರ್ ನನ್ನು ಪ್ರಯೋಗಾಲಯಕ್ಕೆ ರವಾನಿಸಿದ್ದಾರೆ.
