Karwar| ಕಾರವಾರದಲ್ಲಿ ಮರವೇರಿ ಕುಳಿತ ಚಿರತೆ!
Leopard spotted sitting on a tree near a house in Binaga village, Karwar. Locals alarmed as the big cat has been lifting pets for a week. Forest department alerted.
11:23 PM Sep 20, 2025 IST | ಶುಭಸಾಗರ್
Karwar| ಕಾರವಾರದಲ್ಲಿ ಮರವೇರಿ ಕುಳಿತ ಚಿರತೆ!
Advertisement
ಕಾರವಾರ:- ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾಡುಪ್ರಾಣಿಗಳ ಸಂಖ್ಯೆ ಹೆಚ್ಚಾಗುತಿದ್ದು ಆಹಾರ ಅರಸಿ ಕಾಡಿನಿಂದ ನಾಡಿನತ್ತ ಚಿರತೆಗಳು ಬರತೊಡಗಿದೆ.ಈವರೆಗೂ ಮನುಷ್ಯನ ಮೇಲೆ ಎರಗಿದ ಪ್ರಕರಣಗಳು ಕಡಿಮೆ ಇದ್ದರೂ ಇದೀಗ ಚಿರತೆ ಸೇರಿದಂತೆ ಹಲವು ಕಾಡುಪ್ರಾಣಿಗಳು ಗ್ರಾಮದತ್ತ ಮುಖ ಮಾಡುತ್ತಿರುವುದು ಆತಂಕ ತಂದೊಡ್ಡಿದೆ.
Karwar |ಪತ್ನಿಗೆ ವಿಷವಿಟ್ಟು ಅಣಶಿ ಘಟ್ಟದ ಅರಣ್ಯದಲ್ಲಿ ಶವ ಎಸೆದುಹೋದ ಪತಿ!
ಇಂದು ರಾತ್ರಿ ಕಾರವಾರ ತಾಲೂಕಿನ ಬಿಣಗಾ ಗ್ರಾಮದ ರಾಮನಗರ ದ ಮನೆಯೊಂದರ ಪಕ್ಕದ ಮರದ ಮೇಲೆ ಚಿರುತೆ ಕುಳಿತು ಆತಂಕ ತಂದೊಡ್ಡಿದೆ. ಕಳೆದ ಒಂದು ವಾರದಿಂದ ಈಭಾಗದಲ್ಲಿ ಚಿರತೆ ಕಾಣಿಸಿಕೊಳ್ಳುತಿದ್ದು ಸಾಕುಪ್ರಾಣಿಗಳನ್ನು ಕದ್ದೊಯ್ಯುತ್ತಿದೆ.
ಈಗಾಗಲೇ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು ಚಿರತೆ ಹಿಡಿದು ಬೇರೆಡೆ ಬಿಡುವಂತೆ ಮನವಿ ಮಾಡಿದ್ದಾರೆ.
Advertisement