Karwar |ನಿಲ್ಲಿಸಿದ್ದ ಲಾರಿಗೆ ಷಾರ್ಟ ಸರ್ಕ್ಯೂಟ್ ನಿಂದ ಬೆಂಕಿ |ಹಾನಿ
parked 407 lorry caught fire due to a suspected short circuit near London Bridge on NH-66 in Karwar. The vehicle, owned by Santoshi Satish Chipakar from Kodibag, was completely gutted. Firefighters doused the flames, and damage is estimated at over ₹1 lakh.
12:23 PM Nov 08, 2025 IST | ಶುಭಸಾಗರ್
Karwar |ನಿಲ್ಲಿಸಿದ್ದ ಲಾರಿಗೆ ಷಾರ್ಟ ಸರ್ಕ್ಯೂಟ್ ನಿಂದ ಬೆಂಕಿ |ಹಾನಿ
Advertisement
ಕಾರವಾರ :- ನಿಲ್ಲಿಸಿಟ್ಟಿದ್ದ 407 ಲಾರಿಗೆ ಆಕಸ್ಮಿಕ ಬೆಂಕಿ ತಗಲಿ ಸುಟ್ಟುಹೋದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ರಾಷ್ಟ್ರೀಯ ಹೆದ್ದಾರಿ 66 ರ ಲಂಡನ್ ಬ್ರಿಡ್ಜ್ ಬಳಿ ನಡೆದಿದೆ.
ಕಾರವಾರದ(karwar) ಕೋಡಿಬಾಗಿನ ಥಾಮಸ್ಸೆ ವಾಡದ ಸಂತೋಷಿ ಸತೀಶ್ ಚಿಪಕರ್ ಎಂಬುವವರಿಗೆ ಸೇರಿದ ಲಾರಿ ಇದಾಗಿದ್ದು ,ನಿನ್ನೆ ರಾತ್ರಿ ಬ್ರಿಡ್ಜ್ ನ ಕೆಳಭಾಗದಲ್ಲಿ ನಿಲ್ಲಿಸಲಾಗಿತ್ತು.ಇಂದು ಬೆಳಗ್ಗೆ ಇದ್ದಕ್ಕಿದ್ದಂತೆ ಇಂಜಿನ್ ನಲ್ಲಿ ಬೆಂಕಿ ತಗಲಿ ಲಾರಿ ಸುಟ್ಟುಹೋಗಿದ್ದು ,ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿಗಳು ತಕ್ಷಣ ಬೆಂಕಿ ನಂದಿಸಿದ್ದಾರೆ. ಘಟನೆ ಷಾರ್ಟ ಸರ್ಕ್ಯೂಟ್ ನಿಂದ ಆಗಿರುವ ಸಾಧ್ಯತೆ ಎಂದು ಅಂದಾಜಿಸಲಾಗಿದ್ದು ,ಒಂದು ಲಕ್ಷಕ್ಕೂ ಹೆಚ್ಚು ಹಾನಿಯಾಗಿದ್ದು ಘಟನೆ ಸಂಬಂಧ ಕಾರವಾರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Karwar|ವಯಸ್ಸಾದರೂ ವಿವಾಹವಾಗದೇ ಮನನೊಂದ ವ್ಯಕ್ತಿ ಚಾಕು ಇರಿದುಕೊಂಡು ಆತ್ಮಹತ್ಯೆ ಗೆ ಯತ್ನ
Advertisement