For the best experience, open
https://m.kannadavani.news
on your mobile browser.
Advertisement

OFFICER ವರ್ಗಾವಣೆ ರಾಜಕೀಯ ಆರ್.ವಿ ದೇಶಪಾಂಡೆ ವಿರುದ್ಧ ಶಾಸಕ ಸೈಲ್ ಅಸಮಧಾನ

ಕಾರವಾರ :-  ತಮ್ಮ ಅನುಮತಿ ಇಲ್ಲದೇ ಅಧಿಕಾರಿಯನ್ನು ವರ್ಗಾವಣೆ ಮಾಡಿರುವುದಕ್ಕೆ ಕಾರವಾರದ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ (sathish sail)  ಅಧಿಕಾರಿಗಳ ವಿರುದ್ಧ ಗರಂ ಆಗಿದ್ದು ತಮ್ಮ ಪಕ್ಷದ ನಾಯಕರ ವಿರುದ್ಧವೇ ಅಸಮಧಾನ ತೋಡಿಕೊಂಡ ಘಟನೆ ಕಾರವಾರದ ತಾಲೂಕು ಪಂಚಾಯತ್ ಕೆಡಿಪಿ ಸಭೆಯಲ್ಲಿ ನಡೆದಿದೆ.
08:28 PM Jan 28, 2025 IST | ಶುಭಸಾಗರ್
officer ವರ್ಗಾವಣೆ ರಾಜಕೀಯ ಆರ್ ವಿ ದೇಶಪಾಂಡೆ ವಿರುದ್ಧ ಶಾಸಕ ಸೈಲ್ ಅಸಮಧಾನ
OFFICER ವರ್ಗಾವಣೆ ರಾಜಕೀಯ ಆರ್.ವಿ ದೇಶಪಾಂಡೆ ವಿರುದ್ಧ ಶಾಸಕ ಸೈಲ್ ಅಸಮಧಾನ

-ಹೆಸರು ಹೇಳದೇ ಶಾಸಕರಿಂದ ಹಿರಿಯ ನಾಯಕರ ವರ್ತನೆ ಬಗ್ಗೆ ಅಸಮಧಾನ.

Advertisement

ಪ್ರಕೃತಿ ಮೆಡಿಕಲ್ ,ಕಾರವಾರ.

-OFFICERS ವರ್ಗಾವಣೆ ರಾಜಕೀಯ ಆರ್.ವಿ ದೇಶಪಾಂಡೆ ವಿರುದ್ಧ ಶಾಸಕ ಸೈಲ್ ಅಸಮಧಾನ

ಕಾರವಾರ :-  ತಮ್ಮ ಅನುಮತಿ ಇಲ್ಲದೇ ಅಧಿಕಾರಿಯನ್ನು ವರ್ಗಾವಣೆ ಮಾಡಿರುವುದಕ್ಕೆ ಕಾರವಾರದ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ (sathish sail)  ಅಧಿಕಾರಿಗಳ ವಿರುದ್ಧ ಗರಂ ಆಗಿದ್ದು ತಮ್ಮ ಪಕ್ಷದ ನಾಯಕರ ವಿರುದ್ಧವೇ ಅಸಮಧಾನ ತೋಡಿಕೊಂಡ ಘಟನೆ ಕಾರವಾರದ ತಾಲೂಕು ಪಂಚಾಯತ್ ಕೆಡಿಪಿ ಸಭೆಯಲ್ಲಿ ನಡೆದಿದೆ.

ಇದನ್ನೂ ಓದಿ:-Karwar ಅರಬ್ಬಿ ಸಮುದ್ರದಲ್ಲಿ ಮುಳುಗಿದ ಬೋಟ್ ಎಂಟು ಜನ ಮೀನುಗಾರರ ರಕ್ಷಣೆ.

 ಕಾರವಾರದ  (karwar) ಶಾಸಕ ಸತೀಶ್ ಸೈಲ್ ಹೆಸ್ಕಾಂ ಇಂಜಿನಿಯರ್  ವೀರಣ್ಣ ಶಬಣ್ಣನವರ್ ವರ್ಗಾವಣೆ ಗೆ ತಾಲೂಕು ಮಟ್ಟದ ಕೆಡಿಪಿ ಸಭೆಯಲ್ಲಿ ಹೆಸ್ಕಾಂ (Hescom) ಇಇ ರೋಶನಿಗೆ ಕ್ಲಾಸ್ ತೆಗೆದುಕೊಂಡಿದ್ದು ಸಭೆಯಲ್ಲೇ ಹೆಸ್ಕಾಂ ಎ.ಡಿಗೆ ಕರೆಮಾಡಿ ತರಾಟೆ ತೆಗೆದುಕೊಂಡಿದ್ದಾರೆ.

ತಮಗೆ ಮಾಹಿತಿ ಇಲ್ಲದೇ ಹೇಗೆ ಟ್ರಾನ್ಫರ್ ಮಾಡಿದಿರಿ,ಇಲ್ಲಿ ಸಾಕಷ್ಟು ಕೆಲಸಗಳಿವೆ,ಜನ ನನಗೆ ಬಯ್ಯುತ್ತಾರೆ, ಬದಲಿ ಅಧಿಕಾರಿ ನೇಮಕ ಮಾಡಿಲ್ಲ,

ಹಳಿಯಾಳದಿಂದ ಒತ್ತಡ ಬಂತು ಅಂತ ವರ್ಗಾವಣೆ ಮಾಡಿದ್ಧಿರಾ ? ನಾನು ಹಳಿಯಾಳ ಕ್ಷೇತ್ರಕ್ಕೆ ಕೈ ಹಾಕ್ತೀನಾ ಎಂದು ಹಳಿಯಾಳ ಮಾಜಿ ಸಚಿವ ಆರ್.ವಿ ದೇಶಪಾಂಡೆ ಹೆಸರು ತೆಗೆದುಕೊಳ್ಳದೇ ತರಾಟೆ ತೆಗೆದುಕೊಂಡರು‌.

ಇದನ್ನೂ ಓದಿ:-Karwar| ಹೆದ್ದಾರಿ ನುಂಗಿದ ಬೀದಿ ಅಂಗಡಿ,ಆಟೋಗಳು! ಜನರ ಜೀವಕ್ಕೆ ಇಲ್ಲಿ ಇಲ್ಲ ಗ್ಯಾರಂಟಿ.

 ಇನ್ನು ವರ್ಗಾವಣೆಯಾದ ಕಾರವಾರದ ಎ.ಇ.ಇ ವೀರಣ್ಣ ಶಬ್ಬಣ್ಣನವರ್ ಬಾರಿ ಬ್ರಷ್ಟಾಚಾರ ಮಾಡುತಿದ್ದಾರೆ ಎಂದು ಸ್ಥಳೀಯ ಗುತ್ತಿಗೆದಾರರು ಹಳಿಯಾಳ ಶಾಸಕ  ಆರ್.ವಿ ದೇಶಪಾಂಡೆಗೆ ದೂರು ನೀಡಿದ್ದರು.ಈ ದೂರಕೊಟ್ಟ ಕೆಲವು ದಿನದ ನಂತರ ಕಾರವಾರದಿಂದ ಹುಬ್ಬಳ್ಳಿಗೆ ಆತನನ್ನು ವರ್ಗಾವಣೆ ಮಾಡಲಾಗಿತ್ತು. ಈತ ಶಾಸಕರಿಗೆ ಹೆಚ್ಚು ಆಪ್ತರಾಗಿದ್ದರು.

ಕಾರವಾರದಲ್ಲಿ ಶಾಸಕ ಸತೀಶ್ ಸೈಲ್ ಹೇಳಿಕೆದ್ದಿಷ್ಟು:-

ಯಾರೋ ಗುತ್ತಿಗೆದಾರರ ಇಲ್ಲಿನ ಎಇಇ ಬಗ್ಗೆ ದೂರು ಕೊಟ್ಟಿದ್ದಾರೆ,ಅವರ ದೂರಿನ ಮೇರೆಗೆ ಆತನನ್ನು ವರ್ಗಾವಣೆ ಮಾಡಲಾಗಿದೆ ಅಂತಿದ್ದಾರೆ.
ಆತ ಏನ್ ತಪ್ಪು ಮಾಡಿದ್ದ ಎಂಬುವುದರ ಬಗ್ಗೆ ನಂಗೆ ಗೊತ್ತಿಲ್ಲ,ಎಇಇ ವಿರಣ್ಣ ಶಿಬಣ್ಣವರ್ ನನ್ನು ಬೇಕಂತಲೆ ವರ್ಗಾವಣೆ ಮಾಡಲಾಗಿದೆ.ವರ್ಗಾವಣೆ ಮಾಡಿದ ಬಳಿಕ ಆತನ ಸ್ಥಾನಕ್ಕೆ ಬೇರೆಯವರಿಗೆ ಹಾಕಬೇಕಿತ್ತು,
ಕೆಲವರ ಒತ್ತಡದಿಂದಲೆ ಶಿಬಣ್ಣವರ ವರ್ಗಾವಣೆ ಆಗಿರಬಹುದು,ಕೆಲವರಿಗೆ ಜಿಲ್ಲೆಯಲ್ಲಿನ ಜನ ಸತ್ರು ಪರವಾಗಿಲ್ಲ ,ತನ್ನ ವರ್ಚಸ್ಸು ಘನತೆಯನ್ನ ಜನರಿಗೆ ತೊರಿಸಬೇಕಿದೆ. ಬೇರೆಯವರು ನನ್ನ ಕ್ಷೇತ್ರದಲ್ಲಿ ಮೂಗು ತೂರಿಸುತ್ತಿಲ್ಲ,ಜನ ಸತ್ರು ಪರವಾಗಿಲ್ಲ ತನ್ನ ಕ್ಯಾಪ್ಯಾಸಿಟಿ, ಘನತೆ ತೋರಿಸಬೇಕಿದೆ,ಮನಸ್ಸು ಮಾಡಿದ್ರೆ ನಾವು ಮೂಗು ತೂರಿಸಬಹುದು,ಆದ್ರೆ ಈ ರೀತಿ ಮಾಡುವುದು ತಪ್ಪು, ಅದನ್ನ ಮಾಡಬಾರದು ಅಂತಾ ಹೇಳುತ್ತಿದ್ದೇನೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ