For the best experience, open
https://m.kannadavani.news
on your mobile browser.
Advertisement

Karwar| ಟನಲ್ ಬಳಿಯ ಸೇತುವೆ ಬಳಿ ಕುಸಿದ ರಸ್ತೆ| ಒಂದು ಕಿಲೋಮೀಟರ್ ವರೆಗೂ ಇಲ್ಲ ಬೀದಿ ದೀಪ !

Karwar: Road near tunnel bridge collapses on NH66, creating a deep pit. Streetlights remain off for nearly 1 km, raising accident and safety concerns. Locals blame IRB company’s negligence.
11:32 PM Nov 10, 2025 IST | ಶುಭಸಾಗರ್
Karwar: Road near tunnel bridge collapses on NH66, creating a deep pit. Streetlights remain off for nearly 1 km, raising accident and safety concerns. Locals blame IRB company’s negligence.
karwar  ಟನಲ್ ಬಳಿಯ ಸೇತುವೆ ಬಳಿ ಕುಸಿದ ರಸ್ತೆ  ಒಂದು ಕಿಲೋಮೀಟರ್ ವರೆಗೂ ಇಲ್ಲ ಬೀದಿ ದೀಪ

Karwar| ಟನಲ್ ಬಳಿಯ ಸೇತುವೆ ಬಳಿ ಕುಸಿದ ರಸ್ತೆ| ಒಂದು ಕಿಲೋಮೀಟರ್ ವರೆಗೂ ಇಲ್ಲ ಬೀದಿ ದೀಪ !

ಕಾರವಾರ :- ರಾಷ್ಟ್ರೀಯ ಹೆದ್ದಾರಿ 66  ಚತುಷ್ಪತ ಹೆದ್ದಾರಿ ಹಾದು ಹೋಗುವ ಕಾರವಾರದ (karwar) ಲಂಡನ್ ಬ್ರಿಡ್ಜ್ ಬಳಿಯ ಟನಲ್ ಗೆ ತೆರಳುವ ಸರ್ವಿಸ್ ರೋಡಿನ ಸೇತುವೆಯ ಬಳಿಯೇ ಇಂದು ರಾತ್ರಿ ರಸ್ತೆ ಬಿರುಕು ಬಿಟ್ಟು ದೊಡ್ಡ ಹೊಂಡವೇ ನಿರ್ಮಾಣ ಆಗಿದೆ. ಸೇತುವೆ ಸಂಪರ್ಕಿಸುವ ಹಾಗೂ ಹಾಗೂ ಟನಲ್ ಗೆ ಹೋಗುವ ಭಾಗದಲ್ಲಿ ಬಿರುಕು ಬಿಟ್ಟು ಮಣ್ಣು ಕುಸಿದು ಹೊಂಡ ನಿರ್ಮಾಣವಾಗಿದ್ದನ್ನು ಕಂಡ ನೌಕಾದಳದ ಅಗ್ನಿಶಾಮಕ ದಳದ ಸುಭಾಷ್ ರವರು ಬಿದ್ದ ಹೊಂಡಕ್ಕೆ ದೊಡ್ಡ ಕಲ್ಲನ್ನು ಹಾಕಿ ಹೊಂಡವನ್ನು ಮುಚ್ಚಿ ವಾಹನಗಳಿಗೆ ಅವಘಡ ಆಗದಂತೆ ವ್ಯವಸ್ಥೆ ಮಾಡಿದ್ದಾರೆ.

Advertisement

Karwar nh 66 tanal
Karwar| ಟನಲ್ ಬಳಿಯ ಸೇತುವೆ ಬಳಿ ಕುಸಿದ ರಸ್ತೆ| ಒಂದು ಕಿಲೋಮೀಟರ್ ವರೆಗೂ ಇಲ್ಲ ಬೀದಿ ದೀಪ !

ಇನ್ನು ಭಾರವಾದ ಲಾರಿ,ಟಿಪ್ಪರ್ ಗಳು ಇದರ ಮೇಲೆ ಹಾದು ಹೋದರೆ ದೊಡ್ಡ ಅಪಾಯವಿದ್ದು ತಕ್ಷಣ ಕ್ರಮ ಕೈಗೊಳ್ಳದಿದ್ದರೇ ಅನಾಹುತಕ್ಕೆ ದಾರಿ ಮಾಡಿಕೊಡಲಿದೆ.

ಟನಲ್ ನಿಂದ ನೌಕಾ ದಳದ ಭಾಗದ ವರೆಗೆ ಇಲ್ಲ ಬೀದಿ ದೀಪ!

Karwar news nh66 irb road

ಇನ್ನು ಟನಲ್ ನಲ್ಲಿ ಅಒರೂಪಕ್ಜೆ ದೀಪ ಬೆಳಗಿದರೇ ಟನಲ್ ದಾಟಿ ಮುಂದೆ ಸಾಗಿದರೇ ಸುಮಾರು ಒಂದು ಕಿಲೋಮೀಟರ್ ವರೆಗೂ ಬೀದಿ ದೀಪಗಳು ಕಾರ್ಯ ನಿರ್ವಹಿಸುತ್ತಿಲ್ಲ .ಇಡೀ ಹೆದ್ದಾರಿ ಕತ್ತಲೆಯ ಕೂಪವಾಗಿದ್ದು ಕುಟುಕರಿಗೆ , ಅಕ್ರಮ ಕೋರರಿಗೆ ಹೇಳಿ ಮಾಡಿಸಿದ ಜಾಗದಂತಾಗಿದೆ.

Karwar|ಸುಭಾಷ್ ಚಂದ್ರಬೋಸ್ ಪ್ರತಿಮೆ ವಿರೂಪ|ಒಂದುವಾರವಾದ್ರೂ ನಿರ್ಲಕ್ಷ!

IRB ಕಂಪನಿಯ ನಿರ್ಲಕ್ಷ ಈ ಭಾಗದಲ್ಲಿ ಅಪಘಾತಕ್ಕೆ ದಾರಿ ಮಾಡಿಕೊಟ್ಟರೇ ಅಕ್ರಮ ಚಟುವಟಿಕೆ ನಡೆಸುವವರಿಗೆ ಇದು ಸ್ವರ್ಗದಂತೆ ಮಾರ್ಪಟ್ಟಿದೆ.

ಸ್ಥಳೀಯ ಆಡಳಿತ ಎಚ್ಚೆತ್ತು ಕ್ರಮ ಕೈಗೊಳ್ಳದಿದ್ದರೇ ಮುಂದೆ ದೊಡ್ಡ ದುರಂತ ನಡೆಯುವ ಸಾಧ್ಯತೆ ಇದ್ದು ನಿರ್ಲಕ್ಷ ತೋರಿದ IRB ಕಂಪನಿ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ