Karwar ಶಾಸಕ ಸತೀಶ್ ಸೈಲ್ ಪರ ನಿಂತ ಮಾಜಿ ಸಚಿವ ಅಸ್ನೋಟಿಕರ್ ಹೇಳಿದ್ದೇನು ವಿಡಿಯೋ ನೋಡಿ.
Karwar News 28 October 2024 :- ಕಾರವಾರ ಶಾಸಕ ಸತೀಶ್ ಸೈಲ್ ಗೆ ಅದಿರು ನಾಪತ್ತೆ ಪ್ರಕರಣದಲ್ಲಿ ಕೋರ್ಟ ಏಳು ವರ್ಷ ಶಿಕ್ಷೆ ತೀರ್ಪು ನೀಡಿದ ಬೆನ್ನಲ್ಲೇ ಶಾಸಕತ್ವ ಅನರ್ಹವಾಗುವ ಸಾಧ್ಯತೆಯಲ್ಲಿ ಕಾರವಾರದಲ್ಲಿ ರಾಜಕೀಯ ಗದಿಗೆದರಿದ್ದು ಚುನಾವಣೆ ಘೋಷಣೆ ಆದರೇ ಯಾರು ನಿಲ್ಲಬೇಕು ಎಂಬ ಚರ್ಚೆ ಜೋರಾಗಿದೆ.
ಆಸ್ನೋಟಿಕರ್ ಏನಂದ್ರು ವಿಡಿಯೋ ಇಲ್ಲಿದೆ:-
ಈ ಹಿಂದೆ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಗೆಲುವಿಗೆ ಬೆಂಬಲಿಸಿ ಕಾರಣರಾಗಿದ್ದ ಜೆಡಿಎಸ್ ನ ಮಾಜಿ ಸಚಿವ ಆಸ್ನೋಟಿಕರ್ ಗೆ ಕಾಂಗ್ರೆಸ್ ,ಜೆಡಿಎಸ್,ಬಿಜೆಪಿಯ ನಾಯರು ಸಂಪರ್ಕಿಸಿ ಚುನಾವಣೆ ನಡೆದರೆ ಸ್ಪರ್ಧಿಸುವಂತೆ ಕೋರಿಕೊಂಡಿದ್ದಾರೆ. ಹೀಗಾಗಿ ಕುದ್ದು ಮಾಜಿ ಸಚಿವ ಆನಂದ್ ಆಸ್ನೋಟಿಕರ್ ಮಂಗಳೂರಿನಿಂದ ವಿಡಿಯೋ ಮಾಡಿ ಅಭಿಮಾನಿಗಳಿಗೆ ಶೇರ್ ಮಾಡಿದ್ದಾರೆ.
ಇದನ್ನೂ ಓದಿ:-Karwar:ಅರಣ್ಯ ಇಲಾಖೆ ನಿರ್ಲಕ್ಷ ದಿಕ್ಕು ಕಳೆದುಕೊಂಡ ಕಾಂಡ್ಲಾ ನಡಿಗೆ ಪಥ!
ಶಾಸಕ ಸೈಲ್ ನನ್ನ ಅಣ್ಣ ಅವರನ್ನು ಈ ಹಿಂದೆ ನಾನು ಬೆಂಬಲಿಸಿ ಗೆಲ್ಲಿಸಿದ್ದೇನೆ.ಮೈನಿಂಗ ಪ್ರಕರಣದಲ್ಲಿ ಶಿಕ್ಷೆ ಆಗಿದೆ ಅವರು ಯಾವತ್ತೂ ನಮ್ಮ ಕುಟುಂಬದ ಪರವಾಗಿ ಇದ್ದರು.
ಶಿಕ್ಷೆ ಪ್ರಕಟವಾದಮೇಲೆ ಚುನಾವಣೆಗೆ ಸ್ಪರ್ಧಿಸುವಂತೆ ನನಗೆ ಹಲವು ನಾಯಕರು ಕರೆಮಾಡುತಿದ್ದಾರೆ.ಇನ್ನೂ ಕಾನೂನು ಹೋರಾಟವಿದೆ ,ಮುಂದೆ ಅವರಿಗೆ ಕಾನೂನಿನ ಜಯ ಸಿಗಲಿ ಎಂದು ಕೇಳಿಕೊಳ್ಳುತ್ತೇನೆ.
ಚುನಾವಣೆ ,ನಾನೇ MLA ಎಂದು ಕೆಲವು ನಾಯಕರು ಹೇಳುತಿದ್ದಾರೆ ,ದೆಯವಿಟ್ಟು ಚುನಾವಣೆ ವಿಷಯ ಮಾತನಾಡೋದು ಬೇಡ.ಸ್ಪಲ್ಪ ತಾಳ್ಮೆ ಬೇಕು. ಎಲ್ಲರಿಗೂ ಎಮ್.ಎಲ್.ಎ ಆಗಬೇಕು ಎಂದು ಆಸೆಯಿದೆ ,ದೇವರ ,ಜನರ ಆಶಿರ್ವಾದ ಬೇಕು.ನಾವು ಸತೀಶ್ ಸೈಲ್ ರನ್ನು ಬೆಂಬಲಿಸಿ ಗೆಲ್ಲಿಸಿ ತಂದಿದ್ದೇವೆ ಅವರಿಗೆ ದೇವರು ಆಶಿರ್ವಧಿಸಿ ಅವರಿಗೇ ಶಾಸಕ ಸ್ಥಾನ ಮುಂದುವರೆಯಲಿ ಎಂದು ಹೇಳುವ ಮೂಲಕ ಸತೀಶ್ ಸೈಲ್ ಗೆ ಬೆಂಬಲ ನೀಡಿದ್ದಾರೆ.
- Uttara kannda ಜಾತಿ ,ಅಧಿಕಾರ ಅಡ್ಡಿ 32 ಮಕ್ಕಳನ್ನು ಶಾಲೆ ಬಿಡಿಸಿ ಮನೆಯಲ್ಲಿರಿಸಿದ ಪೋಷಕರು! ಮುಂದಾಗಿದ್ದೇನು?
- ಕುಮಟಾ-ಶಿರಸಿ ರಸ್ತೆ ಬಂದ್ ಆದ್ರೂ ಸಂಚಾರಕ್ಕೆ ಅವಕಾಶ ಜಿಲ್ಲಾಧಿಕಾರಿ ಏನಂದ್ರು ವಿವರ ನೋಡಿ.
- Arecanut price: ಅಡಿಕೆ ಧಾರಣೆ 27 November 2024
- KUMTA- SIRSI ರಾಷ್ಟ್ರೀಯ ಹೆದ್ದಾರಿ 766 ಡಿಸೆಂಬರ್ 2 ರಿಂದ ಬಂದ್
- Uttara kannda ಲಾರಿಯಲ್ಲಿ ಗುಪ್ತ ಕಂಪಾರ್ಟಮೆಂಟ್ ಹೊರತೆಗೆದಾಗ ಸಿಕ್ತು ಗೋವಾ ಮದ್ಯ!