ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Karwar :ಪತ್ರಕರ್ತ ಸಂದೀಪ್ ಸಾಗರ್ ಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪ್ರಧಾನ

ಬೆಂಗಳೂರು: ಉತ್ತರ ಕನ್ನಡ ನ್ಯೂಸ್ ಫಸ್ಟ್ ಜಿಲ್ಲಾ ವರದಿಗಾರ ಸಂದೀಪ್ ಸಾಗರ್ ಗೆ ಕರ್ನಾಟಕ ಮಾಧ್ಯಮ ಅಕಾಡೆಮಿ ನೀಡುವ 2024ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರಧಾನ ಮಾಡಲಾಯಿತು.
09:41 AM Feb 04, 2025 IST | ಶುಭಸಾಗರ್
Karwar :ಪತ್ರಕರ್ತ ಸಂದೀಪ್ ಸಾಗರ್ ಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪ್ರಧಾನ

Karwar :ಪತ್ರಕರ್ತ ಸಂದೀಪ್ ಸಾಗರ್ ಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪ್ರಧಾನ.

Advertisement

ಪ್ರಕೃತಿ ಮೆಡಿಕಲ್ ,ಕಾರವಾರ.

ಬೆಂಗಳೂರು: ಉತ್ತರ ಕನ್ನಡ ನ್ಯೂಸ್ ಫಸ್ಟ್ ಜಿಲ್ಲಾ ವರದಿಗಾರ ಸಂದೀಪ್ ಸಾಗರ್ ಗೆ ಕರ್ನಾಟಕ ಮಾಧ್ಯಮ ಅಕಾಡೆಮಿ ನೀಡುವ 2024ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ಬೆಂಗಳೂರಿನ ಜೆ.ಎನ್ ಟಾಟಾ ಮೆಮೋರಿಯಲ್ ಹಾಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ವಾರ್ತಾ ಇಲಾಖೆ ಆಯುಕ್ತರಾದ ಹೇಮಂತ್ ನಿಂಬಾಳ್ಕರ್, ಮುಖ್ಯಮಂತ್ರಿ ಮಾಧ್ಯಮ ಕಾರ್ಯದರ್ಶಿ ಕೆ. ಪ್ರಭಾಕರ್, ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೆಷಾ ಖಾನ್ ಪ್ರಶಸ್ತಿ ನೀಡಿ ಗೌರವಿಸಿದರು.

ನ್ಯೂಸ್ ಫಸ್ಟ್ ಉತ್ತರ ಕನ್ನಡ ಜಿಲ್ಲಾ ವರದಿಗಾರ ಹಾಗೂ ನುಡಿಜೇನು ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾಗಿರುವ ಸಂದೀಪ್ ಸಾಗರ್ ಮೂಲತ ಶಿವಮೊಗ್ಗ ಜಿಲ್ಲೆಯವರಾಗಿದ್ದು ಉತ್ತರ ಕನ್ನಡ ಜಿಲ್ಲೆಗೆ ಟಿವಿ9 ಸುದ್ದಿ ಸಂಸ್ಥೆಯ ಜಿಲ್ಲಾ ವರದಿಗಾರರಾಗಿ 2012ಕ್ಕೆ ಬಂದಿದ್ದರು. 2020ರವರೆಗೆ ಟಿವಿ9 ಜಿಲ್ಲಾ ವರದಿಗಾರರಾಗಿ ಸೇವೆ ಸಲ್ಲಿಸಿದ್ದು 2020ರಿಂದ ನ್ಯೂಸ್ ಫಸ್ಟ್ ಜಿಲ್ಲಾ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Advertisement

ಸಂದೀಪ್ ಸಾಗರ್ ಪತ್ನಿ ಲಾವಣ್ಯ ಸಾಗರ್ ಮಾಲಿಕತ್ವದಲ್ಲಿ 2019ರಲ್ಲಿ ನುಡಿಜೇನು ದಿನಪತ್ರಿಕೆಯಾಗಿ ಪ್ರಾರಂಭವಾಗಿದ್ದು ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾಗಿ ಸಂದೀಪ್ ಸಾಗರ್ ಸೇವೆ ಸಲ್ಲಿಸುತ್ತಿದ್ದಾರೆ.

ಉತ್ತರ ಕನ್ನಡ ಜಿಲ್ಲೆ ರಾಜ್ಯಕ್ಕೆ ಅನೇಕ ಉತ್ತಮ ಪತ್ರಕರ್ತರನ್ನ ನೀಡಿದೆ. ಆದರೆ ಜಿಲ್ಲೆಯಲ್ಲಿ ಹುಟ್ಟಿ ಬೆಂಗಳೂರಿನಲ್ಲಿ ಕೆಲಸ ಮಾಡುವವರಿಗೆ ಮಾತ್ರ ಪ್ರಶಸ್ತಿ ಸಿಗುತ್ತಿದ್ದವು.

ಈ ಬಾರಿ ಕಾರವಾರದಂತಹ ಗಡಿಯಲ್ಲಿ ಕೆಲಸ ಮಾಡುವವರನ್ನ ಗುರುತಿಸಿ ಪ್ರಶಸ್ತಿ ನೀಡಿದೆ.‌ ಜನರ ಸೇವೆ ಮಾಡಬೇಕು ಎಂದು ಮಾಧ್ಯಮ ಕ್ಷೇತ್ರಕ್ಕೆ ಬಂದ ನನಗೆ ಈ ಪ್ರಶಸ್ತಿ ಇನ್ನಷ್ಟು ಆತ್ಮಸ್ಥೈರ್ಯ ತುಂಬಿದ್ದು ಇನ್ನು ಹೆಚ್ಚಿನ ಕೆಲಸ ಮಾಡಲು ಸ್ಪೂರ್ತಿ ನೀಡಿದೆ ಎಂದು ಸಂದೀಪ್ ಸಾಗರ್ ಪ್ರಶಸ್ತಿ ಪಡದ ನಂತರ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement
Tags :
Karwar: Journalist Sandeep Sagar Receives Media Academy Award
Advertisement
Next Article
Advertisement