KDCC Bank election| ಸಚಿವ ಮಂಕಾಳು ವೈದ್ಯರ ಬಲದ ಮುಂದೆ ಗೆದ್ದು ಬೀಗಿದ ಹೆಬ್ಬಾರ್ !
KDCC Bank election| ಸಚಿವ ಮಂಕಾಳು ವೈದ್ಯರ ಬಲದ ಮುಂದೆ ಗೆದ್ದು ಬೀಗಿದ ಹೆಬ್ಬಾರ್ !
ಕಾರವಾರ (24 october 2025) :- ಉತ್ತರ ಕನ್ನಡ ಜಿಲ್ಲೆಯ ಕೆಡಿಸಿಸಿ ಬ್ಯಾಂಕ್ (KDCC Bank) ಚುನಾವಣೆ ಈ ಭಾರಿ ಸಚಿವ ಮಂಕಾಳು ವೈದ್ಯ ಹಾಗೂ ಮಾಜಿ ಸಚಿವ ಶಿವರಾಮ್ ಹೆಬ್ಬಾರ್ ಅಕಾಡದಲ್ಲಿ ರಂಗು ಪಡೆದಿದ್ದು ಕೊನೆಗೂ ಶಕ್ತಿ ಪ್ರದರ್ಶನದಲ್ಲಿ ಮಾಜಿ ಸಚಿವ ಯಲ್ಲಾಪುರ ಶಾಸಕ ಹೆಬ್ಬಾರ್ ಮುಂದೆ ಸಾಗಿದ್ದಾರೆ.
ಪ್ರತಿಷ್ಠಿತ ಉತ್ತರ ಕನ್ನಡ ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ( ಕೆಡಿಸಿಸಿ ) ಆಡಳಿತ ಮಂಡಳಿ ಚುನಾವಣೆಯಲ್ಲಿ ಪ್ರಕಟಗೊಂಡ ಹಾಗೂ ಮುಂಚೂಣಿಯ ಫಲಿತಾಂಶಗಳ ಪ್ರಕಾರ ಹಾಲಿ ಅಧ್ಯಕ್ಷ ಹಾಗೂ ಶಾಸಕ ಶಿವರಾಮ್ ಹೆಬ್ಬಾರ್ ನೇತೃತ್ವದ ಬಣ ಮುನ್ನಡೆ ಸಾಧಿಸಿದೆ. 16 ಕ್ಷೇತ್ರಗಳಲ್ಲಿ ಕೇವಲ 7 ಕ್ಷೇತ್ರಗಳ ಫಲಿತಾಂಶ ಅಧಿಕೃತವಾಗಿ ಪ್ರಕಟಗೊಂಡಿದೆ.
KDCC Bank | ರಂಗೇರಿದ ಚುನಾವಣೆ 44 ನಾಮಪತ್ರ ಅಂಗೀಕಾರ| ಹಾಲಿ ಮಾಜಿ ಸಚಿವರ ಕುಸ್ತಿ ಅಕಾಡಕ್ಕೆ ಇಂದು ಕೊನೇ ದಿನ !
ಮುಂದಿನ ಐದು ವರ್ಷಗಳ ಆಡಳಿತ ಮಂಡಳಿ ಚುನಾವಣೆಗೆ ಶನಿವಾರ 13 ಕ್ಷೇತ್ರಗಳಿಗೆ ಮತದಾನ ಪ್ರಕ್ರಿಯೆ ನಡೆಯಿತು.
ಕಳೆದ ಎರಡು ತಿಂಗಳಿನಿಂದ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಶಾಸಕ ಹಾಗೂ ಹಾಲಿ ಅಧ್ಯಕ್ಷ ಶಿವರಾಮ್ ಹೆಬ್ಬಾರ್ ಮತ್ತು ಉಸ್ತುವಾರಿ ಸಚಿವ ಮಂಕಾಳ ವೈದ್ಯ ಬಣಗಳ ನಡುವೆ ತೀವ್ರ ಪೈಪೋಟಿ ಎದುರಾಗಿತ್ತು. ಚುನಾವಣೆಗೂ ಮೊದಲು ಸಚಿವರ ಬಣದಿಂದ 2 ಹಾಗೂ ಹೆಬ್ಬಾರ್ ಬಣದಿಂದ ಒಬ್ಬರು ಅವಿರೋಧವಾಗಿ ಆಯ್ಕೆಯಾಗಿದ್ದರು. ಉಳಿದ 13 ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು. ಇದರಲ್ಲಿ ಮುಂಡಗೋಡ, ಹಳಿಯಾಳ, ಜೋಯಿಡಾ, ಕುಮಟಾ ಕ್ಷೇತ್ರಗಳ ಫಲಿತಾಂಶ ಪ್ರಕಟವಾದಲ್ಲಿ, ಸಿದ್ದಾಪುರದ ಫಲಿತಾಂಶವನ್ನು ನ್ಯಾಯಾಲಯ ಸೂಚನಯೆಂತೆ ಮುಂದೂಡಲಾಗಿದೆ.
9 ಕ್ಷೇತ್ರಗಳ ಮತದಾನ ಎಣಿಕೆ ನಡೆದ್ದು, ಫಲಿತಾಂಶ ನ್ಯಾಯಾಲಯದ ಆದೇಶದ ಬಳಿಕ ಪ್ರಕಟವಾಗಬೇಕಿದೆ.

ಪ್ರಕಟಗೊಂಡ ಫಲಿತಾಂಶಗಳ ಪ್ರಕಾರ ಹಾಲಿ ಅಧ್ಯಕ್ಷ ಶಿವರಾಮ ಹೆಬ್ಬಾರ್ ಬಣದಿಂದ ಕುಮಟಾದಲ್ಲಿ ಬಣದ ರಾಜಗೋಪಾಲ ಅಡಿ 9 ಮತಗಳನ್ನು ಪಡೆದು ಗೆಲುವು ಸಾಧಿಸಿದರು. ಇವರ ವಿರುದ್ಧ ಗಜಾನನ ಪೈ ೦ ಹಾಗೂ ಶ್ರೀಧರ ಭಾಗ್ವತ್ 6 ಮತಗಳನ್ನು ಪಡೆದರು. ಅದೇ ರೀತಿ ಹಳಿಯಾಳದಲ್ಲಿ ಎಸ್.ಎಲ್.ಘೋಟ್ನೇಕರ್ 9 ಮತಗಳನ್ನು ಪಡೆದು ವಿಜೇತರಾದರೇ, ಪ್ರತಿಸ್ಪರ್ಧಿ ಸುಭಾಸ್ ಕೊರ್ವೇಕರ್ 4 ಮತ ಪಡೆದರು. ಜೋಯಿಡಾದಿಂದ ಕೃಷ್ಣ ದೇಸಾಯಿ 5 ಮತ ಪಡೆದು ಗೆದ್ದಲ್ಲಿ, ಪುರುಷೋತ್ತಮ ಕಾಮತ್ 4 ಮತ ಪಡೆದು ಸೋಲು ಕಂಡರು. ಮುಂಡಗೋಡದಿಂದ ಎಷ್.ಎಮ್.ನಾಯ್ಕ 8 ಮತ ಪಡೆದಲ್ಲಿ, ಎಲ್.ಟಿ.ಪಾಟೀಲ್ 5 ಮತ ಪಡೆದು ಪರಾಭವಗೊಂಡರು.
Karnataka| ಮುಖ್ಯಮಂತ್ರಿ ಬದಲಾವಣೆ- ಡಿಕೆ ಶಿವಕುಮಾರ್ ಶಾಕಿಂಗ್ ಹೇಳಿಕೆ !
ಚುನಾವಣಾ ಪ್ರಕ್ರಿಯೆಯಲ್ಲಿ ಹೆಬ್ಬಾರ್ ಬಣದಿಂದ ಕಾರವಾರದಿಂದ ಪ್ರಕಾಶ ಗುನಗಿ, ಯಲ್ಲಾಪುರದಿಂದ ಶಿವರಾಮ ಹೆಬ್ಬಾರ್, ಮಾರ್ಕೆಟಿಂಗ್ ನಿಂದ ಶಿರಸಿ ಟಿಎಮ್ಎಸ್ ರವಿ ಹೆಗಡೆ ಹುಳಗೋಳ ಹಾಗೂ ಮಂಕಾಳ ಬಣದಿಂದ ಔದ್ಯೋಗಿಕದಿಂದ ವಿಶ್ವನಾಥ ಭಟ್ ಕರ್ವ ಮುಂಚೂಣಿಯಲ್ಲಿದ್ದು, ನ್ಯಾಯಾಲಯದ ಆದೇಶದ ಬಳಿಕವೂ ಸಹ ಇವರೆಲ್ಲರ ಗೆಲುವು ಖಚಿತವಾಗಿದೆ. ಹೆಬ್ಬಾರ್ ಬಣದಿಂದ ಮೂವರು ಮುಂಚೂಣಿಯಲ್ಲಿದ್ದರೇ, ವೈದ್ಯ ಬಣದಿಂದ ಒಬ್ಬರು ಮುಂದಿದ್ದಾರೆ.
ಇವೆಲ್ಲದರ ಫಲಿತಾಂಶ ಬಂದರೂ ಹೆಬ್ಬಾರ್ ಬಣವೇ ಅಧಿಕಾರದ ಚುಕ್ಕಾಣಿ ಹಿಡಿಯುವ ಸಾಧ್ಯತೆಗಳಿವೆ.