KJ George| ಶರಾವತಿ ಪಂಪ್ ಸ್ಟೋರೇಜ್ ಶಾಕ್ ನೀಡಿದ ಸಚಿವರ ಹೇಳಿಕೆ! ವಿಡಿಯೋ ನೋಡಿ
KJ George| ಶರಾವತಿ ಪಂಪ್ ಸ್ಟೋರೇಜ್ ಶಾಕ್ ನೀಡಿದ ಸಚಿವರ ಹೇಳಿಕೆ! ವಿಡಿಯೋ ನೋಡಿ
ಶಿವಮೊಗ್ಗ (ಅ.7):- ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಹಾಗೂ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕನ್ನು ಒಳಗೊಂಡಂತೆ ಶರಾವತಿ ಪಂಪ್ ಸ್ಟೋರೇಜ್ ಯೋಜನೆಗೆ ಸ್ಥಳೀಯರ ವಿರೋಧ ವ್ಯಕ್ತವಾದ ಬೆನ್ನಲ್ಲೇ ಸಾರ್ವಜನಿಕ ಅಹವಾಲು ಸ್ವೀಕಾರ ಸಭೆಯಲ್ಲೂ ತೀವ್ರ ವಿರೋಧ ವ್ಯಕ್ತವಾಯಿತು. ಇದರ ಬೆನ್ನಲ್ಲೇ ಇಂಧನ ಸಚಿವ ಕೆಜೆ ಜಾರ್ಜ ರವರು ಶರಾವತಿ ಪಂಪ್ ಸ್ಟೋರೇಜ್ ಪ್ರಾಜಕ್ಟ್ ಕುರಿತು ಶಿವಮೊಗ್ಗ ಕ್ಕೆ ಭೇಟಿನೀಡಿದ್ದು ಪ್ರಾಜಕ್ಟ್ ಬಗ್ಗೆ ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.
ಶರಾವತಿ ಪಂಪ್ ಸ್ಟೋರೇಜ್ ಯೋಜನೆಗೆ ಕೇವಲ 120 ಎಕರೆ ಭೂಮಿ ಬೇಕಾಗುತ್ತದೆ.2000 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುತ್ತೇವೆ,ಒಳಗಡೆ ಸುರಂಗ ಕೊರೆದು ಪೈಪ್ ಒಳಗೆ ಹೋದಮೇಲೆ ಅದರ ಮೇಲೆ ಅರಣ್ಯ ಬೆಳಸುತ್ತೇವೆ ಎಂಬ ಅಂಬದ್ದ ಉತ್ತರ ನೀಡಿರುವ ಅವರು ಈಗ ವಿದ್ಯುತ್ ಗಾರದಿಂದ ಸಾವಿರ ಮೆಗಾ ವ್ಯಾಟ್ ವಿದ್ಯುತ್ ಬರ್ತಾ ಇದೆ ಪ್ರಾಜಕ್ಟ್ ಆದಮೇಲೆ ಮೂರುಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುತ್ತೇವೆ.ಪ್ರಾಜಕ್ಟ್ ಮುಗಿಯಲು ಮೂರ್ನಾಲ್ಕು ವರ್ಷ ಬೇಕಾಗುತ್ತದೆ.ಮುಂದಾಲೋಚನೆ ಇಟ್ಟು ಮಾಡುತಿದ್ದೇವೆ. ಹೈವೆ ರಸ್ತೆಗಳಿಗೆ ಮರಗಳ ಕಡಿತಲೆ ಆಗುತ್ತದೆ ಹೀಗೆಯೇ ಯಾವುದೇ ಪ್ರಾಜಕ್ಟ್ ಬಂದರೂ ಮರಗಳ ಕಟಾವು ಮಾಡಬೇಕಾಗುತ್ತದೆ.ಇದಕ್ಕಾಗಿ ಬೇರೆ ಜಾಗ ನಿಗಧಿ ಮಾಡಿದ್ದೇವೆ , ಕಡಿದ ಮರಕ್ಕಿಂತ ಹೆಚ್ಚು ಮರ ಬೆಳಸುತ್ತೇವೆ ಎಂದು ಹೇಳಿದ್ದಾರೆ. ಈ ಮೂಲಕ ಶರಾವತಿ ಪಂಪ್ ಸ್ಟೋರೇಜ್ ಜನರು ವಿರೋಧ ಮಾಡಿದರೂ ಮಾಡಿಯೇ ಸಿದ್ದ ಎಂಬ ಅರ್ಥದಲ್ಲಿ ಹೇಳಿಕೆ ನೀಡಿರುವ ಸಚಿವರು ನಿಜಾಂಶವನ್ನು ತಿಳಿಸುವ ಬದಲು ಸುಳ್ಳು ಮಾಹಿತಿ ನೀಡಿದ್ದಾರೆ.
Sharavathi|ಪಂಪ್ ಸ್ಟೋರೇಜ್ ಸ್ಥಳ ಪರಿಶೀಲನೆ ವರದಿಗೆ ವನ್ಯಜೀವಿ ಮಂಡಳಿ ನಿರ್ದೇಶನ|ವಿವರ ನೋಡಿ
ಇನ್ನು ಪ್ರಶ್ನೆ ಕೇಳಿದ ಪತ್ರಕರ್ತರಿಗೂ ಪರಿಸರ ಹಾನಿಯಾದರೇ ಏನಾಗುತ್ತದೆ, ಈ ಪ್ರಾಜಕ್ಟ್ ಬಂದರೇ ಆಗುವ ತೊಂದರೆ ಬಗ್ಗೆ ಅರಿವು ಇಲ್ಲದಿರುವುದು ಹಾಗೂ ಮಾಹಿತಿ ಕೊರತೆ ಪತ್ರಕರ್ತರಲ್ಲೂ ಎದ್ದು ಕಾಣಿಸಿತ್ತು. ಇನ್ನು ಇದನ್ನೇ ಬಂಡವಾಳ ಮಾಡಿಕೊಂಡ ಸಚಿವರು ಮೈಕ್ ಹಿಡಿದ ಪತ್ರಕರ್ತರಿಗೆ ಪ್ರಶ್ನೆ ಕೇಳಿದ್ದು , ಉತ್ತರ ಕೊಡಲು ಪತ್ರಕರ್ತರು ಸಹ ತಡಕಾಡಿದ್ದು ಮಾತ್ರ ದುರಂತ.
Sharavathi |ಶರಾವತಿ ಭೂಗತ ಜಲವಿದ್ಯುತ್ ಯೋಜನೆ ಕುರಿತ ಸಾರ್ವಜನಿಕ ಅಹವಾಲು ಸ್ವೀಕಾರ-ಸಭೆಯಲ್ಲಿ ನಡೆದಿದ್ದು ಏನು?
ಈ ಯೋಜನೆ ಬಗ್ಗೆ ಪತ್ರಕರ್ತರಿಗೇ ಮಾಹಿತಿ ಇರದಿದ್ದರೇ ಸರ್ಕಾರವನ್ನು ಪ್ರಶ್ನೆ ಮಾಡುವವರು ಯಾರು ಎಂಬ ಪ್ರಶ್ನೆ ಏಳುವಂತೆ ಮಾಡಿದೆ.