Arecanut medicines ಅಡಿಕೆ ಕ್ಯಾನ್ಸರ್ ಕಾರಕ ಎನ್ನುವವರಿಗೆ ಇಲ್ಲಿದೆ ಅದರ ಔಷಧೀಯ ಗುಣ
Report by - ತಿರುಮಲ ಶರ್ಮ.
ಅಡಿಕೆ ಕ್ಯಾನ್ಸರ್ ಕಾರಕ ಇದನ್ನು ತಿಂದರೇ ಕ್ಯಾನ್ಸರ್ (cancer) ಬರುತ್ತದೆ ಎಂಬ ಚರ್ಚೆಗಳು ಬಹು ವರ್ಷದಿಂದ ಕೇಳುತ್ತಿರುವ ವಿಷಯ.
ಆದರೇ ಅಡಕೆ(Arecanut) ತಂಬಾಕು ಉತ್ಪನ್ನಗಳಿಂದ ಸೇವಿಸುವುದರಿಂದ ಸಂಪ್ರದಾಯಿಕ ಬೆಳೆಗೆ ಕ್ಯಾನ್ಸರ್ ಕಾರಣ ಎಂಬ ಕಳಂಕ ಗುಟ್ಟಗಳಿಂದ ಅಂಟಿಬಿಟ್ಟಿದೆ.
ಈಗಲೂ ಅಡಕೆ ಮೇಲೆ ಹಲವು ಸಂಶೋಧನೆಗಳು ನಡೆಯಿತ್ತಲೇ ಇವೆ. ಹಲವು ವರ್ಷಗಳಿಂದ ಅಡಿಕೆಯಿಂದ ಚಹ ಉತ್ಪನ್ನವನ್ನು ತಯಾರಿಸುತಿದ್ದು ವಿದೇಶಗಳಲ್ಲಿ ಸಹ ಪ್ರಸಿದ್ಧಿ ಪಡೆಯುವ ಮೂಲಕ ತನ್ನ ಸ್ಥಾನ ಗಟ್ಟಿ ಗೊಳಿಸಿಕೊಂಡಿದೆ.
ಹಾಗಿದ್ರೆ ಅಡಿಕೆಯಲ್ಲಿ ಏನೆಲ್ಲಾ ಔಷಧೀಯ ಗುಣ ಇದೆ ಇಲ್ಲಿದೆ ವಿವರ.
ಅಡಿಕೆಯಲ್ಲಿ ಏನಿದೆ?.
ಆಡಿಕೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಟ್ಯಾನಿನ್ ಎಂಬ ಅಂಟಿನಂತಹ ಕೆಂಪು ಬಣ್ಣದ ಸಾರ ಹೇರಳವಾಗಿದೆ. 31.31% ತೇವಾಂತ, 4.9% ಪ್ರೋಟಿನ್ ಹಾಗೂ 11.2% ನಾರಿನಾಂಶವಿದೆ ಮತ್ತು ಅಧಿಕ ಪ್ರಮಾಣದ ಖನಿಜಾಂಶವಿದೆ.ಅದರಲ್ಲೂ ಉತ್ತಮ ಪ್ರಮಾಣದಷ್ಟು ಕ್ಯಾಲ್ಶಿಯಂ, ಜೀವಸತ್ವಗಳಾದ ವಿಟಮಿನ್ ಬಿ6 , ವಿಟಮಿನ್ ಸಿ ಅಡಿಕೆಯಲ್ಲಿದೆ. ಅದ್ದರಿಂದ ಅಡಿಕೆಯ ಸೇವನೆಯಿಂದ ಅಗತ್ಯ ಪೋಷಕಾಂಶಗಳು ಹಾಗೂ ಕ್ಯಾಲ್ಶಿಯಂ , ವಿಟಮಿನ್ ನಂತಹ ಜೀವಸತ್ವಗಳು ದೇಹಕ್ಕೆ ಲಭ್ಯವಾಗುತ್ತದೆ.ಹಲ್ಲಿನ ನೋವಿಗೆ ಸಹಕಾರಿ.
ಅಧಿಕ ಸಿಹಿ ಸೇವನೆ ಮಾಡುವವರ ಹಲ್ಲಿನಲ್ಲಿ ಸಾಮಾನ್ಯವಾಗಿ ಹುಳುಕು ಹಾಗೂ ರಂಧ್ರ ಉಂಟಾಗುವುದು. ಈ ಸಮಸ್ಯೆಯನ್ನು ತಡೆಯಲು ಅಡಿಕೆ ರಸವು ಸಹಾಯ ಮಾಡುತ್ತದೆ.
ಹಲ್ಲಿನಲ್ಲಿ ಇರುವ ಹುಳುಕು ಬೇರಿನ ಆಳಕ್ಕೆ ಹೋಗಿದ್ದರೆ ಅದು ಸಂವೇದನಾ ಶೀಲ ಹಲ್ಲಾಗಿ ಮಾರ್ಪಡುವುದು. ಅದರಿಂದ ಉಂಟಾಗುವ ನೋವುಗಳನ್ನು ಅಡಿಕೆಯ ರಸ ಶಮನಗೊಳಿಸುವುದು.
ಬಾಯಿಯ ದುರ್ನಾತ ನಿವಾರಕ.
ಮಧುಮೇಹ ಇರುವವರಲ್ಲಿ ಆಗಾಗ ಬಾಯಿ ಒಣಗುವುದು, ಬಾಯಲ್ಲಿ ಅತಿಯಾದ ದುರ್ಗಂಧ ಮತ್ತು ಕೆಟ್ಟ ಉಸಿರು ಉಂಟಾಗುವುದು. ಇಂತಹ ಸಮಸ್ಯೆಗಳಿಗೆ ಅಡಿಕೆ ಪರಿಹಾರ ನೀಡುವುದು.
ಅಡಿಕೆಯನ್ನು ಬಾಯಲ್ಲಿ ಇಟ್ಟುಕೊಳ್ಳುವುದು ಅಥವಾ ಅಗೆಯುತ್ತಿರುವುದರಿಂದ ಅಧಿಕ ಲಾಲಾರಸ ಉತ್ಪತ್ತಿ ಆಗುವುದು. ಜೊತೆಗೆ ಬಾಯಿಂದ ಬರುವ ವಾಸನೆಯನ್ನು ತಡೆಯುವುದು. ಅಡಿಕೆಯಿಂದ ಬಾಯಿಗೆ ಸಂಬಂಧಿಸಿದ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳನ್ನು ತಡೆಯಬಹುದು.
ಹಲ್ಲಿನ ಶುದ್ದತೆಗೆ ಹೀಗೆ ಬಳಸಿ.
ಅಡಕೆ ತಿಂದರೇ ಹಲ್ಲು ಕಪ್ಪಾಗುತ್ತದೆ ಎನ್ಬುತ್ತಾರೆ ಖಂಡಿತಾ ಇಲ್ಲ. ತಂಪಾಕು ಜೊತೆ ಸೇವಿಸಿದರೆ ಮಾತ್ರ ಈ ಪರಿಣಾಮ ಎದುರಿಸಬೇಕಾಗುತ್ತದೆ. ಆದರೇ ಅಡಿಕೆಯನ್ನು ಸುಟ್ಟು ಅದನ್ನು ಪುಡಿಮಾಡಿ ಇಜ್ಜಲಿನಂತೆ ಪುಡಿಯನ್ನು ಬಳಸಿ ಹಲ್ಲು ತಿಕ್ಕಿದಲ್ಲಿ ಹಲ್ಲು ಬಿಳಿಯಾಗುವ ಜೊತೆ ನಿಮ್ಮ ವಸಡಿನ ಆರೋಗ್ಯ ಸಹ ಕಾಪಾಡುತ್ತದೆ.
ಈ ಸುಟ್ಟ ಪುಡಿಯನ್ನು ಲವಂಗದ ಜೊತೆ ಸೇರಿಸಿ ಬಾಯಿ ಮುಕ್ಕಳಿಸಿದರೆ ಒಸಡಿನ ರಕ್ತಸ್ರಾವ , ನೋವು ನಿವಾರಣೆಯಾಗುತ್ತದೆ.
ಇದನ್ನೂ ಓದಿ:-ಲಿಂಪಿ ಸ್ಕಿನ್ ರೋಗಕ್ಕೆ ರೈತರಿಂದ ಕೆಂಪು ಇರುವೆ ಚಟ್ನಿ ಪ್ರಯೋಗ! ಏನಿದು ಕೆಂಪು ಇರುವೆ ಚಟ್ನಿ?
ಒಸಡಿನ ಸೆಳೆತ ಅನುಭವಿಸುವವರು ಅಡಿಕೆಯ ಪುಡಿಯನ್ನು ತುಪ್ಪದಲ್ಲಿ ಹುರಿದು, ಅದನ್ನು ಓಂಕಾಳು ಅಥವಾ ಸೇಂಧಾ ಉಪ್ಪಿನೊಂದಿಗೆ ಬೆರೆಸಿ ಪೇಸ್ಟ್ ತಯಾರಿಸಬೇಕು. ಆ ಪೇಸ್ಟ್ ಅನ್ನು ಬಾಧಿತ ಪ್ರದೇಶದಲ್ಲಿ ಅನ್ವಯಿಸಿ, ಸ್ವಲ್ಪ ಸಮಯ ಬಿಡುವುದರಿಂದ ಒಸಡಿನ ನೋವು ಶಮನವಾಗುವುದು.
ಮಲಬದ್ಧತೆ, ಅಜೀರ್ಣ ತಡೆ.
ಯಾರಿಗೆ ಮಲಬದ್ಧತೆ ,ಅಜೀರ್ಣ ಇರುತ್ತದೆಯೋ ಅಂತವರು ಅಡಕೆಯನ್ನು ಬಾಯಲ್ಲಿ ಇಟ್ಟುಕೊಂಡು ನಿಯಮಿತವಾಗಿ ಅದರ ರಸ ನುಂಗುವುದರಿಂದ ಅಜೀರ್ಣ ಹೋಗುತ್ತದೆ, ಮಲಬದ್ಧತೆ ನಿವಾರಣೆಯಾಗುತ್ತದೆ. ಜೊತೆಗೆ ಜೊಲ್ಲಿನ ರಸ ಉತ್ಪತ್ತಿ ಪ್ರಮಾಣ ಸಹ ಹೆಚ್ಚಾಗಲಿದೆ. ಹೊಟ್ಟೆ ಉಬ್ಬುವುದು, ಪದೇ ಪದೇ ಮೂತ್ರಕ್ಕೆ ಹೋಗುವ ಸಮಸ್ಯೆ ಹಾಗೂ ಅತಿಸಾರದ ಸಮಸ್ಯೆಯು ನಿಯಂತ್ರಣವಾಗುವುದು. ವ್ಯಕ್ತಿ ಆರೋಗ್ಯದಲ್ಲಿ ಬಹುಬೇಗ ಚೇತರಿಕೆ ಕಾಣುವನು.
"ಮಹಿಳೆಯರ ಹಾರ್ಮೋನ್‍ಗಳ ಸುಧಾರಣೆಗೆ ಅಡಿಕೆ ಔಷಧ"
ಮಹಿಳೆಯರ ದೇಹದಲ್ಲಿ ಈಸ್ಟ್ರೋಜನ್ ಹಾರ್ಮೋನ್ ಅಸಮತೋಲನದಿಂದ ಕೂಡಿದ್ದರೆ, ಲ್ಯುಕೋರಿಯಾ ಎನ್ನುವ ಹಳದಿ ಬಣ್ಣದ ಯೋನಿ ಸ್ರಾವ ಉಂಟಾಗುವುದು. ಇದು ಕೆಲವೊಮ್ಮೆ ವಾಸನೆಯಿಂದ ಕೂಡಿರುವ ಸಾಧ್ಯತೆಗಳು ಇರುತ್ತವೆ. ಅಡಿಕೆಯ ರಸವನ್ನು ನಿಯಮಿತವಾಗಿ ಸೇವಿಸುವುದರಿಂದ ಅಥವಾ ಬಾಯಲ್ಲಿ ಅಡಿಕೆಯನ್ನು ಇಟ್ಟುಕೊಂಡು ರಸವನ್ನು ನುಂಗುತ್ತಾ ಇದ್ದರೆ ಹಾರ್ಮೋನ್‍ಗಳ ಅಸಮತೋಲನವು ಸುಧಾರಿಸುವುದು. ಋತುಚಕ್ರ ಆರಮಭವಾಗುವ ಮೊದಲು ಅಡಿಕೆಯ ರಸ ಸೇವಿಸಿದರೆ ಯೋನಿ ಸೆಳೆತ, ಹೊಟ್ಟೆನೋವು ಕಡಿಮೆಯಾಗುವುದು.
ನಿದ್ದೆ ಜಾಗೃತಿಗೆ ಇದನ್ನು ಬಳಸಿ.
ವಾಹನ ಸವಾರಿ ಮಾಡುವಾಗ ಹಲವರಿಗೆ ನಿದ್ದೆಯ ಭಯ ಇರುತ್ತದೆ.ಇಂತವರು ವಾಹನ ಸವಾರಿ ಮಾಡುವಾಗ ಅಡಿಕೆ ಸೇವಿಸಿ ರಸ ಕುಡಿಯುವುದರಿಂದ ಜಾಗೃತವಾಗಿರಲು ಸಾಧ್ಯವಾಗುವುದು.
ಲೈಂಗಿಕ ಶಕ್ತಿ ವರ್ಧಕ.
ಸಂಭೋಹದಲ್ಲಿ ಅಕಾಲಿಕ ಸ್ಖಲನವನ್ನು ತಡೆಯಲು ಅಡಿಕೆ ಅತ್ಯುತ್ತಮವಾದದ್ದು. ಅಕಾಲಿಕ ಸ್ಖಲನ ಪುರುಷರಲ್ಲಿ ಬಂಜೆತನವನ್ನು ಉಂಟುಮಾಡುವುದು. ವೀರ್ಯಗಳು ಅಂಡಾಣು ಮೊಟ್ಟೆಯನ್ನು ಸೇರುವ ಶಕ್ತಿಯಲ್ಲೂ ವಿಫಲತೆಯನ್ನು ಅನುಭವಿಸುವುದು. ಅಂತಹವರು ಅಡಿಕೆಯನ್ನು ಬಾಯಲ್ಲಿ ಇಟ್ಟುಕೊಂಡು ರಸವನ್ನು ನುಂಗುತ್ತಿರಬೇಕು. ಇಲ್ಲವೇ ಅಡಿಕೆಯ ರಸವನ್ನು ಸೇವಿಸಬೇಕು. ಅದು ಪುರುಷರಿಗೆ ಪುನರ್ ಯೌವನ ತಂದುಕೊಡುವುದು.
ರಕ್ತ ಹೀನತೆ ,ಸ್ನಾಯು ಶಕ್ತಿಗಾಗಿ.
ಅಡಿಕೆಯನ್ನು ನಿಯಮಿತ ಸೇವಿಸುವುದರಿಂದ ದೇಹದ ಸ್ನಾಯುಗಳು ಗಟ್ಟಿಯಾಗಲಿದೆ. ಮುಖದ ಸುಕ್ಕಿಗೂ ಪರಿಣಾಮ ಬೀರಲಿದೆ.
ಅಡಿಕೆಯನ್ನು ಸೇವಿಸುವುದರಿಂದ ರಕ್ತ ಹೀನತೆ ಹಾಗೂ ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚುವುದನ್ನು ಸುಲಭವಾಗಿ ತಡೆಯಬಹುದು.
ಆಡಿಕೆಯ ಚೂರ್ಣವನ್ನು ನಿಂಬೆಹಣ್ಣಿನ ರಸದೊಂದಿಗೆ ಬೆರೆಸಿ ಸೇವಿಸುವುದರಿಂದ ವಾಂತಿ ಮತ್ತು ವಾಂತಿ ಬಂದಂತಾಗುವ ಲಕ್ಷಣ ಕಡಿಮೆಯಾಗುತ್ತದೆ.
ಅಡಿಕೆ ಜೊತೆ ಇವುಗಳನ್ನು ಬಳಸಿ ನೋಡಿ.
ವೀಳ್ಯದೆಲೆ, ಸುಣ್ಣ, ಅಡಿಕೆ ಹಾಗು ಸುಗಂಧಿ ದ್ರವ್ಯಗಳಾದ ಜಾಕಾಯಿ, ಏಲಕ್ಕಿ, ಪಚ್ಚಕರ್ಪೂರ ಹಾಗೂ ಖದಿರವನ್ನೊಳಗೊಂಡ ತಾಂಬೂಲವನ್ನು ಊಟದ ನಂತರ ದಿನದಲ್ಲಿ ಎರಡು ಬಾರಿ ಸೇವಿಸುವುದರಿಂದ ವಿಶಿಷ್ಠ ಆರೋಗ್ಯದ ಲಾಭ ಲಭಿಸುವುದು ಮತ್ತು ಇದರ ಸೇವನೆ “ಹೃದ್ಯ” ಎಂದು ಆಚಾರ್ಯ ವಾಗ್ಭಟರು ಆಯುರ್ವೇದದಲ್ಲಿ ಉಲ್ಲೇಖಿಸಿದ್ದಾರೆ. ಅಡಿಕೆಯು ರಕ್ತನಾಳಗಳಲ್ಲಿನ ಕೊಬ್ಬಿನಾಂಶವನ್ನು ಕಡಿತಗೊಳಿಸಿ, ರಕ್ತ ಸಂಚಾರವನ್ನು ಉತ್ತಮಗೊಳಿಸುತ್ತದೆ. ಅಲ್ಲದೆ ರಕ್ತ ನಾಳಗಳ ಪರಿಶುದ್ದತೆಯನ್ನು ಕಾಯ್ದಿರಿಸಿ ಹಲವು ಹೃದಯ ಸಂಬಂಧಿ ರೋಗಗಳನ್ನು, ರಕ್ತದೊತ್ತಡ, ಕೊಲೆಸ್ಟ್ರಾಲ್ ಅಂಶದ ಶೇಕರಣೆಯನ್ನು ತಡೆಯಲು ಸಹಕಾರಿಯಾಗುತ್ತದೆ. ಅಲ್ಲದೆ ನಿತ್ಯ ತಾಂಬೂಲ ಸೇವಿಸುವುದರಿಂದ ದೇಹದ ವರ್ಣ, ಆರೋಗ್ಯ, ಬುದ್ದಿ ಮತ್ತು ಸ್ಮೃತಿ (ನೆನಪಿನ ಶಕ್ತಿ) ಹೆಚ್ಚಿಸುತ್ತದೆ.
ಇದನ್ನೂ ಓದಿ:-ನಿಮ್ಮ ಆರೋಗ್ಯಕ್ಕೆ ಮನೆಮದ್ದು! ಗ್ಯಾಸ್ ಸಮಸ್ಯೆಗೆ ಇಲ್ಲಿದೆ ಪರಿಹಾರ.
ಕೆಮ್ಮು ಮತ್ತು ಕಫರೋಗಗಳಲ್ಲಿ ಅಡಿಕೆಯನ್ನು ವೀಳ್ಯದೆಲೆಯೊಂದಿಗೆ ಸೇವಿಸುವುದರಿಂದ ಕಟ್ಟಿರುವ ಕಫ ಸಡಿಲಗೊಳ್ಳುತ್ತದೆ, ಕೆಮ್ಮು ನಿವಾರಣೆಯಾಗುತ್ತದೆ.
ಅಡಿಕೆಯಲ್ಲಿನ ಅರೆಕೋಲಿನ್ ಎಂಬ ಅಂಶವು ಅತಿಯಾದ ರಕ್ತದೊತ್ತಡ ಹಾಗೂ ಗೊರಕೆಯನ್ನು ನಿಯಂತ್ರಿಸುತ್ತದೆ.
ಯಾವ ಅಡಿಕೆ ಬಳಸಬೇಕು?.
ಅಡಿಕೆ ಬೆಳೆದ ಮೂರು ತಿಂಗಳ ನಂತರ ಸೇವಿಸುವುದು ಒಳಿತು. ಇದರಿಂದ ಅಡಿಕೆಯಲ್ಲಿನ ತೀಕ್ಷಣತೆ ಕಡಿಮೆಯಾಗಿ ಸೇವಿಸಲು ಯೋಗ್ಯವಾಗುತ್ತದೆ ಮತ್ತು ಔಷಧೀಯಗುಣದಿಂದ ಸಂಪನ್ನವಾಗಿರುತ್ತದೆ.
ಇದನ್ನೂ ಓದಿ:-ಮುಂಡಗೋಡಿನಲ್ಲಿ ಸಿಗುವ ಜಂಗಲ್ ಜಿಲೇಬಿ ಹುಳಸೆ ಬಗ್ಗೆ ಗೊತ್ತಾ! ನೀವು ಒಮ್ಮೆ ಟ್ರಯ್ ಮಾಡಿ
ಹಸಿ ಅಡಿಕೆಯನ್ನು ನೇರವಾಗಿ ಬಳಸುವುದರಿಂದ ಬಾಯಿ ,ನಾಲಿಗೆ ಒಡೆಯುತ್ತವೆ. ತಂಬಾಕು ಹೊರತುಪಡಿಸಿ ಬಳಸುವುದರಿಂದ ಹಲವು ಉಪಯೋಗಗಳು ಆರೋಗ್ಯಕ್ಕಿದೆ.
ಇತ್ತೀಚೆಗೆ ಅಡಿಕೆ ಸಿಪ್ಪಿಯಿಂದ ಸೊಳ್ಳೆ ಓಡಿಸುವ ಬತ್ತಿಯನ್ನು ಸಹ ಮಾರುಕಟ್ಟೆಗೆ ತರಲಾಗಿದೆ. ಜೊತೆಗೆ ಅಡಿಕೆ ಬಗ್ಗೆ ಹೆಚ್ಚಿನ ಅಧ್ಯಯನ ಸಹ ನಡೆಯುತ್ತಿದೆ. ಅತಿಯಾದರೇ ಅಮೃತವು ವಿಷ ಎನ್ನುವಂತೆ ನಿಯಮಿತ ಸೇವನೆ ಆರೋಗ್ಯಕ್ಕೆ ಉತ್ತಮವಾಗಿರುತ್ತದೆ.
Feed: invalid feed URL