For the best experience, open
https://m.kannadavani.news
on your mobile browser.
Advertisement

MankalsVaidya| ಬೀನಾ ವೈದ್ಯ ನನ್ನ ಉತ್ತರಾಧಿಕಾರಿ| ಇಬ್ಬರು ಮಕ್ಕಳ ಬಗ್ಗೆ ಸಚಿವ ಮಂಕಾಳು ವೈದ್ಯ ಹೇಳಿದ್ದೇನು?

Karnataka Minister and Bhatkal MLA Mankal S. Vaidya has publicly announced that his daughter Beena Vaidya will be his political successor. Rising from grassroots politics,
10:02 PM Nov 17, 2025 IST | ಶುಭಸಾಗರ್
Karnataka Minister and Bhatkal MLA Mankal S. Vaidya has publicly announced that his daughter Beena Vaidya will be his political successor. Rising from grassroots politics,

MankalsVaidya| ಬೀನಾ ವೈದ್ಯ ನನ್ನ ಉತ್ತರಾಧಿಕಾರಿ| ಇಬ್ಬರು ಮಕ್ಕಳ ಬಗ್ಗೆ ಸಚಿವ ಮಂಕಾಳು ವೈದ್ಯ ಹೇಳಿದ್ದೇನು?

Advertisement

ಮೀನುಗಾರಿಕಾ ಸಚಿವ ಮಂಕಾಳು ವೈದ್ಯ 2005 ರಲ್ಲಿ  ಮಾವಳ್ಳಿ ಜಿಲ್ಲಾ ಪಂಚಾಯತ್ ಸದಸ್ಯರಾಗಿ ಆಯ್ಕೆಯಾದರು.ತಳಮಟ್ಟದ ರಾಜಕಾರಣದಿಂದ ಭಟ್ಕಳ ಕ್ಷೇತ್ರದಲ್ಲಿ ಪಕ್ಷೇತರರಾಗಿ ಘಟಾನು ಘಟಿಗಳ ಮುಂದೆ ಗೆಲವು ಕಂಡು ನಂತರ 2023 ರಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಶಾಸಕರಾದರು. ಇದೇ ಅವಧಿಯಲ್ಲಿ ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾಗಿ ಅಧಿಕಾರ ವಹಿಸಿಕೊಂಡರು.

ಭಟ್ಕಳ ಕ್ಷೇತ್ರದಲ್ಲಿ ತನ್ನದೇ ಆದ ಹಿಡಿತ ಹೊಂದಿರುವ ಮಂಕಾಳು ವೈದ್ಯ (mankalu vaidya) ಇತ್ತೀಚೆಗೆ ತಮ್ಮ ಮಗಳು ಬೀನಾ ವೈದ್ಯರನ್ನ ಕ್ಷೇತ್ರದಲ್ಲಿ ಪರಿಚಯಿಸಿದ್ದಾರೆ. ಹಾಲು ಗೆನ್ನೆಯ ಮುದ್ದಾದ ಮನಸ್ಸು ಹೊಂದಿದ ಬೀನಾ ಕ್ಷೇತ್ರದಲ್ಲಿ ಪುಟ್ಟ ಹೆಜ್ಜೆಯನ್ನಿಟ್ಟು ಇದೀಗ ಕ್ಷೇತ್ರದಲ್ಲಿ ತಂದೆಯಂತೆ ಜನರ ಮನದಲ್ಲಿ ಹೆಸರು ಮೂಡಿಸುವ ಪ್ರಯತ್ನದಲ್ಲಿದ್ದಾರೆ.

ಇದಕ್ಕೆ ಸಾಕ್ಷಿ ಎನ್ನುವಂತೆ ಬೀನಾ ವೈದ್ಯರಿಗೆ ಕಾಂಗ್ರೆಸ್ ಪಕ್ಷ ಪ್ರದೇಶ ಕಾಂಗ್ರೇಸ್ ಮಹಿಳಾ ಸಮಿತಿಯ ಕಾರ್ಯದರ್ಶಿಯ ಹೊಣೆ ನೀಡಿದೆ.

Bhatkal| ಐಷಾರಾಮಿ ಕಾರಿನಲ್ಲಿ ಬಂದು ದೇವಸ್ಥಾನದ ಮುಂದೆಯೇ ಗೋ ಕಳ್ಳತನ | ವಿಡಿಯೋ ನೋಡಿ

ಮುಗ್ದ ಸ್ವಭಾವದ ಈ ಹುಡುಗಿ ಇದೀಗ ಭಟ್ಕಳದಲ್ಲಿ ಸದ್ದು ಮಾಡುತ್ತಿರುವುದು ನಿಜ.ತಂದೆಯಂತೆ ರಾಜಕೀಯ ಅಖಾಡದಲ್ಲಿ ಇಳಿದಿರುವ ಇವರು ಮುಂಬರುವ ಜಿಲ್ಲಾ ಪಂಚಾಯ್ತಿ ಚುನಾವಣೆಗೆ ಸ್ಪರ್ಧಿಸುತ್ತಾರೆ ಎನ್ನುವ ಸುದ್ದಿ ಹರಡುತ್ತಲೇ ಇದೆ. ಆದರೇ ಮಗಳ ಬಗ್ಗೆ ಯಾವತ್ತೂ ಅತಿಶಯೋಕ್ತಿ ಮಾತನಾಡದ ಸಚಿವ ಇಂದು ಕಾರವಾರದಲ್ಲಿ ಮನ ಬಿಚ್ಚಿ ಮಾತನಾಡಿದ್ದಾರೆ. ತಮ್ಮ ಮುಂದಿನ ರಾಜಕೀಯ ವಾರಸುದಾರರು ಬೀನಾ ವೈದ್ಯ ಎಂದಿದ್ದಾರೆ. ನನ್ನ ಒಬ್ಬ ಮಗಳು ರಾಜಕೀಯಕ್ಕೆ ,ಇನ್ನೊಬ್ಬಳು ವೈದ್ಯಕೀಯ ರಂಗಕ್ಕೆ ಎಂದ ಅವರು ಹೇಳಿದ ಮಾತುಗಳ ವಿಡಿಯೋ ಇಲ್ಲಿದೆ.

ವಿಡಿಯೋ ನೋಡಿ:-

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ