Mantralayam ಕಾಣಿಕೆ ಹುಂಡಿ ಎಣಿಕೆ 31 ದಿನದಲ್ಲೇ ಕೋಟಿ ಕೋಟಿ ಕಾಣಿಕೆ ಸಂಗ್ರಹ.
Andrapradesh news 29 November 2024 :- ಆಂದ್ರ ಪ್ರದೇಶ ಹಾಗೂ ಕರ್ನಾಟಕ ಗಡಿಯ ಪ್ರಸಿದ್ದ ಮಂತ್ರಾಲಯದ (Mantralayam)ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಭಕ್ತರು ನೀಡಿದಕಾಣಿಕೆ ಹುಂಡಿ ಎಣಿಕೆ ಮಾಡಲಾಗಿದೆ.
ನಿನ್ನೆದಿನ ಕಾಣಿಕೆ ಹುಂಡಿ ಎಣಿಕೆ ಕಾರ್ಯ ಪ್ರಾರಂಭ ಮಾಡಲಾಗಿದ್ದು ನೂರಾರು ಜನರು ಎಣಿಕಾ ಕಾರ್ಯದಲ್ಲಿ ಭಾಗಿಯಾಗಿದ್ದರು.

ಇಂದು ಎಣಿಕಾ ಕಾರ್ಯ ಮುಕ್ತಾಯವಾಯಿತು.ಕೇವಲ 31 ದಿನದಲ್ಲಿ 3 ಕೋಟಿ 92 ಲಕ್ಷ 58,940 ರೂ ಕಾಣಿಕೆ ಸಂಗ್ರಹವಾಗಿದೆ.
ರಾಯರ ಸನ್ನಿದಿಯಲ್ಲಿ ಸಂಗ್ರಹವಾದ ಕಾಣಿಕೆಯಲ್ಲಿ 3 ಕೋಟಿ 83 ಲಕ್ಷ 93,760 ರೂಪಾಯಿ (money) ಕರೆನ್ಸಿ ನೋಟುಗಳು, 8,65,180 ರೂಪಾಯಿ ನಾಣ್ಯಗಳು ಸಂಗ್ರಹವಾಗಿವೆ. ಇನ್ನೂ 174 ಗ್ರಾಂ ಚಿನ್ನ, 1270 ಗ್ರಾಂ ಬೆಳ್ಳಿ ಕಾಣಿಕೆ ರೂಪದಲ್ಲಿ ಮಠಕ್ಕೆ ಭಕ್ತರು ನೀಡಿದ್ದಾರೆ.

ಮಂಯ್ರಾಲಯಕ್ಕೆ ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆ ಏರಿಕೆ ಕಂಡಿದೆ. ಉಚಿತ ಬಸ್ ನಿಂದ ಮಹಿಳೆಯರು ಹೆಚ್ಚಾದರೇ ಸರತಿ ರಜೆಯಿಂದಾಗಿ ಪ್ರವಾಸಿಗರು,ವಿದೇಶಿಗರು ಸಹ ಮಂತ್ರಾಲಯಕ್ಕೆ (manthralayam) ಭೇಟಿ ನೀಡಿದ್ದಾರೆ.