For the best experience, open
https://m.kannadavani.news
on your mobile browser.
Advertisement

Shivamogga ಪಾಲಿಕೆಗೆ ದಿಢೀರ್‌ ಮಿನಿಷ್ಟರ್ ಭೇಟಿ ಅಧಿಕಾರಿ ಸಸ್ಪೆಂಡ್.

Shivamogga news 30 November 2024 : ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌ ಶಿವಮೊಗ್ಗ ಮಹಾನಗರ ಪಾಲಿಕೆಗೆ ದಿಢೀರ್‌ ಭೇಟಿ (Sudden Visit) ನೀಡಿ ಅಧಿಕಾರುಗಳಿಗೆ ಶಾಕ್ ನೀಡಿದ್ದಾರೆ.
09:56 PM Nov 30, 2024 IST | ಶುಭಸಾಗರ್
shivamogga ಪಾಲಿಕೆಗೆ ದಿಢೀರ್‌ ಮಿನಿಷ್ಟರ್ ಭೇಟಿ ಅಧಿಕಾರಿ ಸಸ್ಪೆಂಡ್

Shivamogga news 30 November 2024 : ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌ ಶಿವಮೊಗ್ಗ (Shivamogga) ಮಹಾನಗರ ಪಾಲಿಕೆಗೆ ದಿಢೀರ್‌ ಭೇಟಿ (Sudden Visit) ನೀಡಿ ಅಧಿಕಾರುಗಳಿಗೆ ಶಾಕ್ ನೀಡಿದ್ದಾರೆ.

Advertisement

ಪಾಲಿಕೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಕರ್ತವ್ಯ ಲೋಪದ ಆರೋಪದ ಹಿನ್ನೆಲೆ ಆರೋಗ್ಯ ನಿರೀಕ್ಷಕರೊಬ್ಬರನ್ನು ಸಸ್ಪೆಂಡ್‌ ಮಾಡುವಂತೆ ಕಮಿಷನರ್‌ಗೆ ಸೂಚನೆ ನೀಡಿದರು.

ಸಾರ್ವಜನಿಕರಿಗೆ ಸ್ಪಂದಿಸದೆ ಇದ್ದರೆ ಮತ್ತಷ್ಟು ಅಧಿಕಾರಿಗಳ ವಿರುದ್ಧ ಕ್ರಮದ ಎಚ್ಚರಿಕೆ ನೀಡಿದರು.

ಇದನ್ನೂ ಓದಿ:-Shivamogga| ಸೊರಬ ದಲ್ಲಿ ಬೈಕ್ ಗೆ ಬೆಂಕಿಇಟ್ಟ ಕಿಡಿಗೇಡಿಗಳು

ಸಹಾಯವಾಣಿ ಕೇಂದ್ರಕ್ಕೆ ಭೇಟಿ.

ಮಹಾನಗರ ಪಾಲಿಕೆ ಆವರಣದಲ್ಲಿ ಪರಿಶೀಲನೆ ನಡೆಸಿದ ಸಚಿವ ಭೈರತಿ ಸುರೇಶ್‌, ನೇರವಾಗಿ ಸಹಾಯವಾಣಿ ಕೇಂದ್ರಕ್ಕೆ ತೆರಳಿದರು.

ರಿಜಿಸ್ಟರ್‌ನಿಂದ ಈ ಹಿಂದೆ ದೂರು ನೀಡಿದ್ದ ಸಾರ್ವಜನಿಕರೊಬ್ಬರ ನಂಬರ್‌ ಹುಡುಕಿ ಕರೆ ಮಾಡಿದ ಸಚುವರು ಸಮಸ್ಯೆ ಪರಿಹಾರವಾಗಿದೆಯೇ ಎಂದು ಪ್ರಶ್ನಿಸಿದರು.

ಚರಂಡಿ ಬ್ಲಾಕ್ ಆಗಿ 20 ದಿನವಾಗಿದೆ. ದೂರು ನೀಡಿದರು ಕ್ರಮ ಕೈಗೊಂಡಿಲ್ಲ ಎಂದು ಈ ಹಿಂದೆ ದೂರು ನೀಡಿದ ವ್ಯಕ್ತಿ ಅಲವತ್ತುಕೊಂಡರು.

Shivamogga bairathi suresh visit

ಸಿಟ್ಟಾದ ಸಚಿವ ಬೈರತಿ ಸುರೇಶ್‌, (Bairathi suresh)ಆ ಭಾಗದ ಆರೋಗ್ಯ ನಿರೀಕ್ಷಕ ವೇಣುಗೋಪಾಲ್‌ ಎಂಬುವವರನ್ನು ತಕ್ಷಣ ಸಸ್ಪೆಂಡ್‌ ಮಾಡುವಂತೆ ಕಮಿಷನರ್‌ ಕವಿತಾ ಯೋಗಪ್ಪನವರ್‌ ಅವರಿಗೆ ಸೂಚಿಸಿದರು. ಅಲ್ಲದೆ ಸಸ್ಪೆಂಡ್‌ ಮಾಡಿರುವ ಆದೇಶ ಪ್ರತಿಯನ್ನು ತಮಗೆ ವಾಟ್ಸಪ್‌ (whatsaap )ಮಾಡುವಂತೆ ಆದೇಶಿಸಿದರು.

ಖಾತೆ ಮಾಡಿಕೊಡಲು ವಿಳಂಬ, ಖಡಕ್‌ ವಾರ್ನಿಂಗ್‌

ಇದೇ ವೇಳೆ ಹಿರಿಯ ನಾಗರಿಕರೊಬ್ಬರು ಖಾತೆ ಮಾಡಿಕೊಡಲು ಅಧಿಕಾರಿಗಳು ವಿಳಂಬ ಧೋರಣೆ ಅನುಸರಿಸುತ್ತಿರುವ ಕುರಿತು ಅಳಲು ತೋಡಿಕೊಂಡರು.

ಈ ಬಗ್ಗೆ ಸಚಿವ ಬೈರತಿ ಸುರೇಶ್‌ ಕಂದಾಯ ವಿಭಾಗದ ಅಧಿಕಾರಿಗಳನ್ನು ಪ್ರಶ್ನಿಸಿದಾಗ ‘ಸರ್ವರ್‌ ಡೌನ್‌ʼ ಎಂಬ ಉತ್ತರ ಬಂತು. ‘ಆಗಸ್ಟ್‌ನಲ್ಲಿ ಕೊಟ್ಟ ಅರ್ಜಿ ಇನ್ನು ಇತ್ಯರ್ಥವಾಗಿಲ್ಲ. ಆಗಿನಿಂದಲು ಸರ್ವರ್‌ ಸಮಸ್ಯೆಯೇ?’ ಎಂದು ಸಿಟ್ಟಾದರು.

ಇನ್ನೊಂದು ವಾರದಲ್ಲಿ ಖಾತೆಯಾಗಬೇಕು ಎಂದು ಸೂಚಿಸಿದರು. ಅಲ್ಲದೆ ಹಿರಿಯ ನಾಗರಿಕರಿಗೆ ತಮ್ಮ ಮೊಬೈಲ್‌ ನಂಬರ್‌ ಇರುವ ವಿಸಿಟಿಂಗ್‌ ಕಾರ್ಡ್‌ ಕೊಟ್ಟು, ಅಧಿಕಾರಿಗಳು ಮತ್ತೆ ವಿಳಂಬ ಮಾಡಿದರೆ ಕರೆ ಮಾಡಿ ಎಂದು ತಿಳಿಸಿದರು.

ಈಮೂಲಕ ಒಬ್ಬ ಸಚಿವ ಮನಸ್ಸು ಮಾಡಿದರೇ ಹೇಗೆ ಸಮಸ್ಯೆ ಬಗೆಹರಿಸಬಹುದು ಎಂಬುದನ್ನು ತೋರಿಸಿಕೊಟ್ಟರು.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ