MUDA ಪ್ರಕರಣವನ್ನು ಪರೇಶ್ ಮೇಸ್ತಾ ಹತ್ಯೆ ಪ್ರಕರಣಕ್ಕೆ ಹೋಲಿಸಿದ ಸಚಿವ ವೈದ್ಯ! ಏನಂದ್ರು ನೋಡಿ.
MUDA ಪ್ರಕರಣವನ್ನು ಪರೇಶ್ ಮೇಸ್ತಾ ಹತ್ಯೆ ಪ್ರಕರಣಕ್ಕೆ ಹೋಲಿಸಿದ ಸಚಿವ ವೈದ್ಯ! ಏನಂದ್ರು ನೋಡಿ.
ಕಾರವಾರ : ರಾಜಕಾರಣ ಮಾಡಲು ಸಾಧ್ಯವಾಗದಿದ್ದಾಗ ಬಿಜೆಪಿಯವರು ಇಂತದ್ದೆಲ್ಲಾ ಮಾಡ್ತಾರೆ, ನಮ್ಮ ಮುಖ್ಯಮಂತ್ರಿ ಯಾವುದೇ ತಪ್ಪು ಮಾಡಿಲ್ಲ,
ಏನೇ ಮಾಡಿದರೂ ಅವರು ಯಾವುದೇ ತಪ್ಪು ಮಾಡಿಲ್ಲ ಅನ್ನೋದು ಗೊತ್ತಾಗುತ್ತೆ.
- CENTRAL GOVERNMENT | ಆರು ಬೆಳೆಗಳಿಗೆ ಬೆಂಬಲ ಬೆಲೆ ಘೋಷಣೆ-ವಿವರ ನೋಡಿ
- Karwar: ಮಾಜಾಳಿ ತನಿಖಾ ಠಾಣೆಯಲ್ಲಿ ಮಂಡ್ಯದ ಲಾರಿ ಚಾಲಕನಿಗೆ ಥಳಿತ |ಅಬಕಾರಿ ಅಧಿಕಾರಿಗಳ ತಲೆದಂಡ
- Diwali Special Train| ದೀಪಾವಳಿಗೆ ಕರಾವಳಿ ಮಲೆನಾಡು ರೈಲ್ವೆ ಪ್ರಯಾಣಿಕರಿಗೆ ಸಿಹಿ ಸುದ್ದಿ!
- Job:ಪತ್ರಿಕೋದ್ಯಮ ಪದವೀಧರರಿಗೆ ಅಪ್ರೆಂಟಿಸ್ ತರಬೇತಿ: ಅರ್ಜಿ ಆಹ್ವಾನ
- Dandeli| ಗ್ರಾಹಕರ ಸೋಗಿನಲ್ಲಿ ಬರ್ತಾರೆ ಈ ಕಳ್ಳಿಯರು! ವಿಡಿಯೋ ನೋಡಿ
ವಾಷಿಂಗ್ ಮಿಷಿನ್‌ಗೆ ಹಾಕಿದ್ರೆ ಎಲ್ಲಾ ಸ್ವಚ್ಛ ಆಗತ್ತೆ ಅಂತಾ ತಿಳಿದವರು ಹೇಳ್ತಾರೆ.ಬಿಜೆಪಿಯವರು ಅದಕ್ಕಾಗಿ ಪ್ರಯತ್ನ ಪಡುತ್ತಿದ್ದಾರೆ ಎಂದು ಮೀನುಗಾರಿಕಾ ಸಚಿವ ಮಂಕಾಳು ವೈದ್ಯ ಹೇಳಿದರು.
ಇಂದು ಕಾರವಾರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಮುಡಾ ಹಗರಣದಲ್ಲಿ ಸಿಎಂ ಸಿಕ್ಕಿಸಲು ಈಡಿ ದಾಳಿ ವಿಚಾರವಾಗಿ ಉತ್ತರಿಸಿದ ಅವರು
ಹೊನ್ನಾವರದಲ್ಲೂ ಪರೇಶ ಮೇಸ್ತಾ ಎನ್ನುವ ಯುವಕನ ಸಾವಾಗಿತ್ತು.
ಅದು ಕೊಲೆ ಎಂದು ಬಿಜೆಪಿಯವರು ಸಿಬಿಐ ತನಿಖೆಗೆ ಒತ್ತಾಯಿಸಿದ್ರು, ಆದರೆ ಕೊನೆಯಲ್ಲಿ ಪರೇಶನದ್ದು ಸಹಜ ಸಾವೆಂದು ಸಿಬಿಐ ವರದಿ ನೀಡಿತ್ತು.
ಇದನ್ನೂ ಓದಿ:-Karnika:ಆಕಾಶದತ್ತ ಚಿಗುರೀತಲೇ ಬೇರು ಮುದ್ದಾದಿತಲೇ ಪರಾಕ್ ಈ ವರ್ಷ ದೈವವಾಣಿ ಹೇಳಿದ್ದೇನು ನೋಡಿ.
ಈ ಎರಡೂ ಪ್ರಕರಣದಲ್ಲಿ ಯಾವುದೇ ವ್ಯತ್ಯಾಸವಿಲ್ಲ,
ಮುಡಾ ಪ್ರಕರಣದಲ್ಲೂ ಸಿಎಂ ಸಿದ್ಧರಾಮಯ್ಯ ಕ್ಲೀನ್ ಚಿಟ್ ಆಗಿ ಬರ್ತಾರೆ.ಮುಡಾ ಹಗರಣ ಆರೋಪದಲ್ಲೂ ಏನೂ ಆಗಲ್ಲ, ಸಿಎಂಗೆ ಯಾವುದೇ ತೊಂದರೆ ಇಲ್ಲ ಎಂದರು.