MLA, MP ಗಳಿಗೆ ಸಿಗುತ್ತೆ ಮಾಜಿಯಾದ ನಂತರ ಪಿಂಚಣಿ :ಎಷ್ಟು ಅಂತೀರಾ ಇಲ್ಲಿದೆ ನೋಡಿ.
MLA, MP ಗಳಿಗೆ ಸಿಗುತ್ತೆ ಮಾಜಿಯಾದ ನಂತರ ಪಿಂಚಣಿ :ಎಷ್ಟು ಅಂತೀರಾ ಇಲ್ಲಿದೆ ನೋಡಿ.

ಒಬ್ಬ ರಾಜಕಾರಣಿ MLA ಅಥವಾ MP ಆದ ನಂತರ ಆತನಿಗೆ ಪಿಂಚಣಿ ಸಿಗುತ್ತಾ ? ಸಿಕ್ಕರೆ ಎಷ್ಟು ಸಿಗುತ್ತ ? ಮೂರ್ನಾಲಕ್ಕು ಬಾರಿ ಗೆದ್ದವರಿಗೆ ಎಷ್ಟು ಸಿಗುತ್ತೆ ಎಂಬುವ ಸಹಜವಾದ ಕುತೂಹಲ ಎಲ್ಲರಿಗೂ ಇದೆ.
ಹಾಗಿದ್ರೆ ಯಾವ ರಾಜ್ಯದಲ್ಲಿ ಯಾವ ಜನಪ್ರತಿನಿಧಿಗೆ ಅವರ ಸೇವಾವಧಿ ಮುಗಿದ ನಂತರ ಎಷ್ಟು ಪಿಂಚಣಿ ಸಿಗುತ್ತೆ ಎನ್ನುವ ವಿವರ ಇಲ್ಲಿದೆ.
ಇದನ್ನೂ ಓದಿ:-Karnataka Government: ಕೋವಿಡ್ ಲಸಿಕೆಯ ಅಡ್ಡಪರಿಣಾಮದಿಂದ ಸಾವು : ತನಿಖೆಗೆ ಸಮಿತಿ ರಚಿಸಿದ ಸರ್ಕಾರ
ಶಾಸಕರ ಪಿಂಚಣಿ ಪ್ರತಿಯೊಂದು ರಾಜ್ಯಕ್ಕೂ ಭಿನ್ನವಾಗಿದೆ. ಕರ್ನಾಟಕ ಸಚಿವರ ವೇತನ ಮತ್ತು ಭತ್ಯೆ ತಿದ್ದುಪಡಿ ಮಸೂದೆ 2022ಕ್ಕೆ ಒಪ್ಪಿಗೆ ಸಿಕ್ಕ ನಂತರ ಶಾಸಕರು ಹಾಗೂ ಸಚಿವರ ವೇತನ ಶೇಕಡಾ 50ರಷ್ಟು ಹೆಚ್ಚಾಗಿದೆ. ಹಾಗೆಯೇ ಪಿಂಚಣಿಯನ್ನು ಸಹ ಹೆಚ್ಚು ಮಾಡಲಾಗಿದೆ.

ತಿದ್ದುಪಡಿ ನಂತರ ಮಾಜಿ ಶಾಸಕರಿಗೆ 40 ಸಾವಿರ ರೂಪಾಯಿ ಪಿಂಚಣಿ ಸಿಗುತ್ತಿದೆ. ಶಾಸಕರ ಅವಧಿ ಹೆಚ್ಚಾದಂತೆ ಒಂದು ಸಾವಿರ ರೂಪಾಯಿ ಪಿಂಚಣಿಯಲ್ಲಿ ಹೆಚ್ಚಳವಾಗುತ್ತದೆ. ಅಂದ್ರೆ ಒಮ್ಮೆ ಶಾಸಕರಾದ ನಂತರ ಮತ್ತೊಮ್ಮೆ ಆಯ್ಕೆಯಾದರೇ ಒಂದುಸಾವಿರ ಹೆಚ್ಚಿನ ಪಿಂಚಣಿ ಪಡೆಯುತ್ತಾರೆ.
ಇದನ್ನೂ ಓದಿ:-Instagram ನಲ್ಲಿ ಗೆಳೆಯನ ಕಿರುಕುಳ : ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಭಟ್ಕಳದ ಯುವತಿ
ಇನ್ನು ಪಿಂಚಣಿ ಜೊತೆ ಅವರು ವೈದ್ಯಕೀಯ ಭತ್ಯೆ, ಪ್ರಯಾಣ ಭತ್ಯೆ ಸೇರಿದಂತೆ ಕೆಲವು ಸೌಲಭ್ಯವನ್ನು ಪಡೆಯುತ್ತಾರೆ.
ಇನ್ನು ದೆಹಲಿಯಲ್ಲಿ ಮಾಜಿ ಶಾಸಕರು ಪ್ರತಿ ತಿಂಗಳು 15000 ರೂಪಾಯಿ ಪಿಂಚಣಿ ಪಡೆಯುತ್ತಾರೆ. ಒಬ್ಬ ಶಾಸಕ, ಮೂರ್ನಾಲ್ಕು ಬಾರಿ ಗೆದ್ದರೂ ಅವರ ಪಿಂಚಣಿಯಲ್ಲಿ ದೊಡ್ಡ ಮಟ್ಟದ ಬದಲಾವಣೆ ಮಾಡಿಲ್ಲ.
ದೆಹಲಿಯಲ್ಲಿ ಪ್ರತಿ ಗೆಲುವಿನ ನಂತ್ರ ಒಂದು ಸಾವಿರ ರೂಪಾಯಿ ಪಿಂಚಣಿ ಹೆಚ್ಚಾಗುತ್ತದೆ. ಇದು ಕೂಡ ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿದೆ. ಉತ್ತರ ಪ್ರದೇಶದಲ್ಲಿ ಒಬ್ಬ ಶಾಸಕ ಪ್ರತಿ ಬಾರಿ ಗೆದ್ದಾಗ ಆತನ ಪಿಂಚಣಿ 2 ಸಾವಿರ ರೂಪಾಯಿ ಹೆಚ್ಚಾಗುತ್ತದೆ.
ಹಿರಿಯ ಸಂಸದರಿಗೆ ಪ್ರತಿ ತಿಂಗಳ ಪಿಂಚಣಿ ಎಷ್ಟು ?
ಸಂಸತ್ ಸದಸ್ಯರ ಸಂಬಳ, ಭತ್ಯೆ ಮತ್ತು ಪಿಂಚಣಿ ಕಾಯ್ದೆ-1954 ರ ಅಡಿಯಲ್ಲಿ ಬರುತ್ತದೆ. ಮಾಜಿ ಸಂಸದರು ಪ್ರತಿ ತಿಂಗಳು 20 ಸಾವಿರ ರೂಪಾಯಿ ಪಿಂಚಣಿ ಪಡೆಯುತ್ತಾರೆ. ಒಬ್ಬ ಸಂಸದ ಐದು ವರ್ಷಗಳಿಗಿಂತ ಹೆಚ್ಚು ಕಾಲ ಸಂಸದರಾಗಿ ಉಳಿದರೆ, ಅವರ ಸೇವಾ ಹಿರಿತನವನ್ನು ಗೌರವಿಸಿ ಪ್ರತಿ ವರ್ಷ 1,500 ರೂಪಾಯಿಗಳನ್ನು ಪ್ರತ್ಯೇಕವಾಗಿ ಪಿಂಚಣಿ ನೀಡಲಾಗುತ್ತದೆ.
ಶಾಸಕರ ಸಂಸದರಾದ್ರೆ ಹೇಗೆ ಸಿಗುತ್ತೆ ಪಿಂಚಣಿ ?
ಒಬ್ಬ ಶಾಸಕರು ಸಂಸದರಾದ್ರೆ ಅವರಿಗೆ ಡಬಲ್ ಪಿಂಚಣಿ ಸಿಗುತ್ತದೆ. ಸಂಸದರ ಸಂಬಳ ಹಾಗೂ ಶಾಸಕರ ಪಿಂಚಣಿ ಅವರಿಗೆ ಸಿಗುತ್ತದೆ. ಮುಂದೆ ಅವರು ಮಾಜಿ ಸಂಸದರಾದ್ಮೇಲೆ ಅವರಿಗೆ ಸಂಸದರ ಪಿಂಚಣಿ ಹಾಗೂ ಶಾಸಕರ ಪಿಂಚಣಿ ಎರಡೂ ಲಭ್ಯವಾಗುತ್ತದೆ.
ಇಲ್ಲಿ ಅವರು ಶಾಸಕರಾಗಿ ಅಥವಾ ಸಂಸದರಾಗಿ ಎಷ್ಟು ವರ್ಷ ಅಧಿಕಾರದಲ್ಲಿದ್ದರು ಎಂಬುದು ಮುಖ್ಯವಾಗುವುದಿಲ್ಲ. ಒಂದೇ ದಿನ ಶಾಸಕನಾಗಿರಲಿ ಇಲ್ಲ 30 ವರ್ಷ ಸಂಸದನಾಗಿರಲಿ ಅವರಿಗೆ ನಿಗದಿಪಡಿಸಿದ ಪಿಂಚಣಿಯೇ ಸಿಗುತ್ತದೆ. ಸಂಸದರ ಕುಟುಂಬ ಸದಸ್ಯರಿಗೂ ಪಿಂಚಣಿ ಸೌಲಭ್ಯ ಸಿಗುತ್ತದೆ. ಸಂಸದರು ಅಥವಾ ಮಾಜಿ ಸಂಸದರು ಸಾವನ್ನಪ್ಪಿದ್ರೆ ಅವರ ಪತ್ನಿ ಅಥವಾ ಅವಲಂಬಿತರಿಗೆ ಪಿಂಚಣಿ ಪಡೆಯುತ್ತಾರೆ.
ಮಾಜಿ ಸಂಸದರು ಉಚಿತ ರೈಲು ಪ್ರಯಾಣದ ಸೌಲಭ್ಯವನ್ನು ಪಡೆಯುತ್ತಾರೆ. ಮಾಜಿ ಸಂಸದರು ಇನ್ನೊಬ್ಬರ ಜೊತೆ ಎರಡನೇ ಎಸಿಯಲ್ಲಿ ಉಚಿತವಾಗಿ ಪ್ರಯಾಣಿಸಬಹುದು. ಫಸ್ಟ್ ಎಸಿಯಲ್ಲಿ ಉಚಿತವಾಗಿ ಒಬ್ಬಂಟಿಯಾಗಿ ಪ್ರಯಾಣಿಸಬಹುದಾಗಿದೆ.
ಒಂದು ಲೆಕ್ಕದಲ್ಲಿ ಹೇಳುವುದಾದರೇ ಕರ್ನಾಟಕದಿಂದ ಶಾಸಕನಾಗಿ ಸೇವಾವಧಿ ಮುಗಿಸಿದ ಮಾಜಿ ಶಾಸಕ ಹೆಚ್ಚು ಪಿಂಚಣಿ ಪಡೆದರೇ ಸಂಸದನಾದರೇ ದುಪ್ಪಟ್ಟು ಪಿಂಚಣಿ ಪಡೆಯುತ್ತಾರೆ.