Modi | ಗೋವಾದ ಪರ್ತಗಾಳಿ ಮಠದಲ್ಲಿ 77 ಅಡಿ ಉದ್ದದ ಕಂಚಿನ ಶ್ರೀರಾಮ ಮೂರ್ತಿ ಮೋದಿ ಉದ್ಘಾಟನೆ| ಹೇಗಿದೆ ವಿಡಿಯೋ ನೋಡಿ
Modi | ಗೋವಾದ ಪರ್ತಗಾಳಿ ಮಠದಲ್ಲಿ 77 ಅಡಿ ಉದ್ದದ ಕಂಚಿನ ಶ್ರೀರಾಮ ಮೂರ್ತಿ ಮೋದಿ ಉದ್ಘಾಟನೆ| ಹೇಗಿದೆ ವಿಡಿಯೋ ನೋಡಿ.
Goa :- ಗೋವಾದ. ಪೋಯಿಂಗ್ವಿನಿಂ (poinguimim) ನಲ್ಲಿ ಇರುವ 550 ವರ್ಷ ಹಳೆಯದಾದ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಕ್ಕೆ ನವಂಬರ್ 28 ರಂದು ಪ್ರಧಾನಿ ನರೇಂದ್ರ ಮೋದಿ ರವರು ಆಗಮಿಸಲಿದ್ದು ,77 ಅಡಿ ಎತ್ತರದ ಕಂಚಿನ ಶ್ರೀರಾಮನ ಪ್ರತಿಮೆ ಹಾಗೂ ಥೀಮ್ ಪಾರ್ಕ್, 3ಡಿ ಪ್ರೊಜೆಕ್ಷನ್ ಅನಾವರಣಗೊಳಿಸಲಿದ್ದಾರೆ. ಇದರ ವಿಶೇಷದ ಕುರಿತು ವಿಡಿಯೋ ಜೊತೆ ಮಾಹಿತಿ ಇಲ್ಲಿದೆ.
ವರ್ಣ ರಂಜಿತ ಚಿತ್ತಾರದಲ್ಲಿ ಸಿದ್ದವಾಗುತ್ತಿರುವ ವೇದಿಕೆ .ಮತ್ತೊಂದೆಡೆ ಉದ್ಘಾಟನೆ ಗೊಳ್ಳಲು ಸಿದ್ದವಾಗುತ್ತಿರುವ 77 ಅಡಿ ಎತ್ತರದ ಕಂಚಿನ ಶ್ರೀರಾಮನ ಪ್ರತಿಮೆ. ಹೌದು 550 ವರ್ಷದ ಇತಿಹಾಸ ಹೊಂದಿದ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ 550 ನೇ ವರ್ಷಾಚರಣೆ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಆಗಮಿಸಲಿದ್ದು , ನವಂಬರ್
28ರಂದು ಶ್ರೀರಾಮನ ಪ್ರತಿಮೆ ಹಾಗೂ ಥೀಮ್ ಪಾರ್ಕ್, 3ಡಿ ಪ್ರೊಜೆಕ್ಷನ್ ಅನಾವರಣಗೊಳಿಸಲಿದ್ದಾರೆ. ಇದಕ್ಕಾಗಿ ಗೋವಾದ (goa) ಪೋಯಿಂಗ್ವಿನಿಂ ನಲ್ಲಿ ಭರದ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಗೌಡಸಾರಸ್ವತ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಈ ಮಠ ಐತಿಹಾಸಿಕ ಹಿನ್ನಲೆ ಹೊಂದಿದ ಮಠವಾಗಿದೆ. 13 ನೇ ಶತಮಾನದಲ್ಲಿ ಮದ್ವಾಚಾರ್ಯರು ಸ್ಥಾಪಿಸಿದ ಈ ಮಠ ವೈಷ್ಣವ ಸಂಪ್ರದಾಯದ ದ್ವೈತ ಕ್ರಮವನ್ನು ಅನುಸರಿಸುತ್ತದೆ.
Goa|ರಾಮನಗರ -ಗೋವಾ ರಾಷ್ಟ್ರೀಯ ಹೆದ್ದಾರಿ ನಿರ್ಬಂಧ ತೆರವು| ಯಾವೆಲ್ಲ ವಾಹನಗಳಿಗೆ ಅವಕಾಶ ವಿವರ ಇಲ್ಲಿದೆ
ಈ ಮಠವು ಕುಶಾವತಿ ನದಿಯ ದಡದಲ್ಲಿರುವ ದಕ್ಷಿಣ ಗೋವಾದ ಸಣ್ಣ ಪಟ್ಟಣವಾದ ಪರ್ತಗಾಲಿಯಲ್ಲಿ ಪ್ರಧಾನ ಕಛೇರಿಯನ್ನು ಹೊಂದಿದೆ. ಇದೀಗ ಈ ಮಠದ ಜೀರ್ಣೋದ್ದಾರ ವನ್ನು 24 ನೇ ಯತಿಗಳಾದ ಪರಮಪೂಜ್ಯ ಶ್ರೀ ವಿದ್ಯಾಧೀಶ ಶ್ರೀಪಾದ ವಡೇರ ಸ್ವಾಮೀಜಿರವರು ನೆರವೇರಿಸಿದ್ದು, ಸರ್ದಾರ್ ವಲ್ಲಭಾಬಾಯ್ ಪಟೇಲ್, ಬೆಂಗಳೂರು ಕೆಂಪೇಗೌಡ ಪ್ರತಿಮೆಯ ಶಿಲ್ಪಿ ರಾಮ ಸುತಾ ಅವರಿಂದ 16 ಕೋಟಿ ವೆಚ್ಚದ 77 ಅಡಿ ಉದ್ದದ ಕಂಚಿನ ಶ್ರೀರಾಮನ ಪ್ರತಿಮೆ ನಿರ್ಮಿಸಿದ್ದಾರೆ. ಇದರ ಜೊತೆ ರಾಮಾಯಣದ ಸಾರ
ಹೊಂದಿದ ಥೀಮ್ ಪಾರ್ಕ ಸಹ ನಿರ್ಮಿಸಿದ್ದು ಇವುಗಳ ಉದ್ಘಾಟನೆ ಪ್ರಧಾನಿ ನರೇಂದ್ರ ಮೋದಿಯಿಂದ ನೆರವೇರಲಿದ್ದು ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಗೋವಾದ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಪರಮಪೂಜ್ಯ ಶ್ರೀ ವಿದ್ಯಾಧೀಶ ಶ್ರೀಪಾದ ವಡೇರ ಸ್ವಾಮೀಜಿ ಮಾಹಿತಿ ನೀಡಿದ್ದಾರೆ.
Goa| ಗೋವಾ -ಮಾಜಾಳಿ ಗಡಿಯಲ್ಲಿ ತಪಾಸಣೆ ವೇಳೆ ಸಿಕ್ಕಿಬಿತ್ತು ಕೋಟಿ ಹಣ ! ಇಬ್ಬರು ಪೊಲೀಸರ ವಶಕ್ಕೆ!
ಇನ್ನು ಈ ಮಠದಲ್ಲಿ 11 ದಿನಗಳ ಕಾಲ ಸಾರ್ಥಪಂಚಶತಮಾನೋತ್ಸವ ಮಹೋತ್ಸವ ಕಾರ್ಯಕ್ರಮ ನೆರೆವೇರುತಿದ್ದು ,ನ.27ರಿಂದ ಡಿ.7ರವರೆಗೆ ವಿವಿಧ ಕಾರ್ಯಕ್ರಮ ನೆರವೇರಲಿದೆ. ಪ್ರಧಾನಿ ನರೇಂದ್ರ ಮೋದಿ ಭೇಟಿ ಹಿನ್ನಲೆಯಲ್ಲಿ ಕಾರ್ಯಕ್ರಮಕ್ಕೆ 15 ಸಾವಿರ ಜನ ಕೂರಬಹುದಾದ ವೇದಿಕೆ ಸಿದ್ದಪಡಿಸಲಾಗಿದೆ.ದಿನಕ್ಕೆ 55ರಂತೆ 11ದಿನಗಳಲ್ಲಿ 550 ಋತ್ವಿಕರ ನೇತೃತ್ವದಲ್ಲಿ ಹೋಮ ನೆರವೇರಲಿದೆ .ಈಗಾಗಲೇ 120 ಕೇಂದ್ರ ಹಾಗೂ 104 ಉಪಕೇಂದ್ರದಲ್ಲಿ 550 ಕೋಟಿ ರಾಮನಾಮ ಜಪ ಪೂರ್ಣಗೊಂಡಿದ್ದು ,11 ದಿನಗಳ ಕಾರ್ಯಕ್ರಮದಲ್ಲಿ ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮಗಳು, ಯೋಗಾ ಶಿಬಿರಗಳು ಹಾಗೂ ತಜ್ಞ ವೈದ್ಯರಿಂದ ಮೆಡಿಕಲ್ ಕ್ಯಾಂಪ್ ಆಯೋಜನೆ ಮಾಡಲಾಗಿದ್ದು ವಿಶಿಷ್ಟವಾಗಿ ಧಾರ್ಮಿಕ ಕಾರ್ಯಗಳು ನೆರವೇರಲಿದೆ.
ಕರ್ನಾಟಕ ,ಗೋವಾ (goa)ಕರಾವಳಿ ಭಾಗದದ ಧಾರ್ಮಿಕ ಶ್ರದ್ದಾ ಕೇಂದ್ರಗಳಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡುತಿದ್ದು ನವಂಬರ್ 28 ರಂದು ಉಡುಪಿ ಹಾಗೂ ಗೋವಾದ ಧಾರ್ಮಿಕ ಶ್ರದ್ಧಾ ಕ್ರೇಂದ್ರದಲ್ಲಿ ಮೋದಿ ಭಾಗವಹಿಸಲಿದ್ದು ಗೋವಾದ ಪರ್ತಗಾಳಿ ಮಠದಲ್ಲಿ 77 ಅಡಿ ಉದ್ದದ ಕಂಚಿನ ಶ್ರೀರಾಮನ ಮೂರ್ತಿ ಲೋಕಾರ್ಪಣೆಗೆ ಸಿದ್ದವಾಗಿ ನಿಂತಿದೆ.