ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Modi:ನಿಮ್ಮ ನ್ಯೂಕ್ಲಿಯರ್‌ ಬ್ಲ್ಯಾಕ್‌ಮೇಲ್‌ಗೆ ನಾವು ಬೆದರಲ್ಲ, ಪಾಕ್‌ಗೆ ಮೋದಿ ಎಚ್ಚರಿಕೆ

ನವದೆಹಲಿ: ನಿಮ್ಮ ನ್ಯೂಕ್ಲಿಯರ್‌ ಬ್ಲ್ಯಾಕ್‌ಮೇಲ್‌ಗೆ ನಾವು ಬೆದರುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಸ್ಪಷ್ಟವಾಗಿ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದಾರೆ.
09:54 PM May 12, 2025 IST | ಶುಭಸಾಗರ್
ನವದೆಹಲಿ: ನಿಮ್ಮ ನ್ಯೂಕ್ಲಿಯರ್‌ ಬ್ಲ್ಯಾಕ್‌ಮೇಲ್‌ಗೆ ನಾವು ಬೆದರುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಸ್ಪಷ್ಟವಾಗಿ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದಾರೆ.
ಪ್ರಕೃತಿ ಮೆಡಿಕಲ್ ,ಕಾರವಾರ.

Modi:ನಿಮ್ಮ ನ್ಯೂಕ್ಲಿಯರ್‌ ಬ್ಲ್ಯಾಕ್‌ಮೇಲ್‌ಗೆ ನಾವು ಬೆದರಲ್ಲ, ಪಾಕ್‌ಗೆ ಮೋದಿ ಎಚ್ಚರಿಕೆ

ನವದೆಹಲಿ: ನಿಮ್ಮ ನ್ಯೂಕ್ಲಿಯರ್‌ ಬ್ಲ್ಯಾಕ್‌ಮೇಲ್‌ಗೆ ನಾವು ಬೆದರುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಸ್ಪಷ್ಟವಾಗಿ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದಾರೆ.

Advertisement

ಇಂದು ದೇಶದ ಜನತೆ ಉದ್ದೇಶಿಸಿ ಮಾತನಾಡಿದ ಅವರು, ಭಾರತ ಯಾವುದೇ ರೀತಿಯ ಪರಮಾಣು ಬೆದರಿಕೆಯನ್ನು ಸಹಿಸುವುದಿಲ್ಲ. ಭಾರತದ (India) ಸರ್ಜಿಕಲ್ ದಾಳಿಗಳು ಪಾಕಿಸ್ತಾನದ ಯುದ್ಧ ಸಿದ್ಧತೆಗಳನ್ನು ಛಿದ್ರಗೊಳಿಸಿವೆ ಎಂದು ಹೇಳಿದರು.

ಇದನ್ನೂ ಓದಿ:-ANKOLA| MODIಗಾಗಿ ಸಿದ್ದಿವಿನಾಯಕನಿಗೆ ಉರುಳು ಸೇವೆ ಹರಕೆ ತೀರಿಸಿದ ಅಭಿಮಾನಿ

ಪಾಕಿಸ್ತಾನ ಯುದ್ಧಕ್ಕೆ ಸಿದ್ಧವಾಯಿತು. ಆದರೆ ಭಾರತ ಬಹಾವಲ್ಪುರ್ ಮತ್ತು ಮುರಿಡ್ಕೆಯಲ್ಲಿನ ಭಯೋತ್ಪಾದಕ ಕೇಂದ್ರಗಳನ್ನು ನಾಶಮಾಡುವ ಮೂಲಕ ಅವರ ಹೃದಯವನ್ನು ಹೊಡೆದು ಹಾಕಿತು ಎಂದರು.

Advertisement

ಭಾರತ ನಮ್ಮ ಮೇಲೆ ದಾಳಿ ನಡೆಸಿದರೆ ನಾವು ಪರಮಾಣು ಅಸ್ತ್ರ ಬಳಕೆ ಮಾಡುತ್ತೇವೆ ಎಂದು ಪಾಕಿಸ್ತಾನ ಎಚ್ಚರಿಕೆ ನೀಡುತ್ತಿತ್ತು. ಈಗ ಮೋದಿಯವರು ನಿಮ್ಮ ಅಣ್ವಸ್ತ್ರ ಬೆದರಿಕೆಗೆ ನಾವು ಜಗ್ಗಲ್ಲ, ಬಗ್ಗಲ್ಲ. ನಾವು ಯಾವ ರೀತಿ ಪ್ರತಿಕ್ರಿಯೆ ನೀಡಬೇಕೋ ನಾವು ಅದೇ ರೀತಿಯ ಪ್ರತಿಕ್ರಿಯೆ ನೀಡುತ್ತೇವೆ ಎಂದು ಹೇಳುವ ಮೂಲಕ ಭಾರತ ಎಲ್ಲದ್ದಕ್ಕೂ ಸಿದ್ಧವಿದೆ ಎಂಬ ಸಂದೇಶವನ್ನು ಕಳುಹಿಸಿದರು.

ನಾವು ಮೊದಲು ಅಣ್ವಸ್ತ್ರ ಬಳಕೆ ಮಾಡುವುದಿಲ್ಲ. ಆದರೆ ನಮ್ಮ ಮೇಲೆ ದಾಳಿ ನಡೆಸಿದರೆ ನಾವು ಅಣ್ವಸ್ತ್ರ ಬಳಕೆಗೆ ಹಿಂಜರಿಕೆ ಮಾಡುವುದಿಲ್ಲ ಎಂಬ ನೀತಿಯನ್ನು ಭಾರತ ಅಳವಡಿಸಿಕೊಂಡಿದೆ.

ಇದನ್ನೂ ಓದಿ:-Modi ಪ್ರಧಾನಿಯಾಗಲು ತನ್ನ ತೋರುಬೆರಳನ್ನೇ ಕತ್ತರಿಸಿ ಕಾಳಿ ಮಾತೆಗೆ ಅರ್ಪಿಸಿದ ಮೋದಿ ಭಕ್ತ.

ಇನ್ನು ಆಪರೇಷನ್‌ ಸಿಂಧೂರದ ಮೂಲಕ ದೇಶದ ಸಾಮರ್ಥ್ಯ ವಿಶ್ವಕ್ಕೆ ಗೊತ್ತಾಗಿದೆ. ಈ ಕಾರ್ಯಾಚರಣೆಯ ಯಶಸ್ಸಿಗೆ ಕಾರಣರಾದ ನಮ್ಮ ಸೈನಿಕರಿಗೆ ಸೆಲ್ಯೂಟ್‌ ಹೊಡೆಯುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಶಂಸಿದ್ದಾರೆ.

ಆಪರೇಷನ್ ಸಿಂಧೂರ ಕೇವಲ ಹೆಸರಲ್ಲ. ಇದು ದೇಶದ ಲಕ್ಷಾಂತರ ಜನರ ಭಾವನೆಗಳ ಪ್ರತಿಬಿಂಬವಾಗಿದೆ. ಭಾರತೀಯ ಸಶಸ್ತ್ರ ಪಡೆಗಳು ಪಾಕಿಸ್ತಾನದಲ್ಲಿರುವ ಭಯೋತ್ಪಾದಕ ತಾಣಗಳ ಮೇಲೆ ದಾಳಿ ಮಾಡಿದವು. ಭಾರತ ಇಷ್ಟೊಂದು ದೊಡ್ಡ ಹೆಜ್ಜೆಗಳನ್ನು ಇಡುತ್ತದೆ ಎಂದು ಭಯೋತ್ಪಾದಕರು ಕನಸು ಕಂಡಿರಲಿಲ್ಲ.

ಭಾರತೀಯ ಕ್ಷಿಪಣಿಗಳು ಮತ್ತು ಡ್ರೋನ್‌ಗಳು ಪಾಕಿಸ್ತಾನದಲ್ಲಿರುವ ಆ ತಾಣಗಳ ಮೇಲೆ ದಾಳಿ ಮಾಡಿದಾಗ, ಅದು ಭಯೋತ್ಪಾದಕರ ಕಟ್ಟಡಗಳ ಮೇಲೆ ಮಾತ್ರವಲ್ಲ, ಅವರ ಧೈರ್ಯವನ್ನು ಪುಡಿಪುಡಿ ಮಾಡಲಾಯಿತು.

ಭಯೋತ್ಪಾದಕರನ್ನು ನಾಶಮಾಡಲು ನಾವು ಭಾರತೀಯ ಸೇನೆಗೆ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಿದ್ದೇವೆ. ಭಯೋತ್ಪಾಕರನ್ನು ಅವರ ಮಣ್ಣಲ್ಲಿ ಹೂತು ಹಾಕುತ್ತೇವೆ.

ಆಪರೇಷನ್ ಸಿಂಧೂರ್ ಮೂಲಕ ವಿಶ್ವ ಪಾಕಿಸ್ತಾನದ ಸತ್ಯವನ್ನು ನೋಡಿದೆ. ಭಯೋತ್ಪಾದಕರ ಅಂತ್ಯಕ್ರಿಯೆಯಲ್ಲಿ ಪಾಕ್ ಸೇನೆ ಮುಖ್ಯಸ್ಥರು ಭಾಗಿಯಾಗಿದ್ದಾರೆ. ಇದು ಪಾಕ್ ಪ್ರಾಯೋಜಿತ ಭಯೋತ್ಪಾದಕತೆ ಎನ್ನುವುದಕ್ಕೆ ಮತ್ತೊಂದು ಸಾಕ್ಷಿ ಎಂದರು.

ಪಾಕ್‌ ಜೊತೆ ಮಾತುಕತೆ ನಡೆದ್ರೆ ಭಯೋತ್ಪಾದನೆ, POK ಬಗ್ಗೆ ಮಾತ್ರ: ಮೋದಿ ಖಡಕ್‌ ಮಾತು

ಭಾರತ (India) ಮತ್ತು ಪಾಕಿಸ್ತಾನದ (Pakistan) ನಡುವೆ ಮಾತುಕತೆ ನಡೆದರೆ, ಅದು ಭಯೋತ್ಪಾದನೆ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಬಗ್ಗೆ ಮಾತ್ರ ಎಂದು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟವಾಗಿ ಹೇಳಿದ್ದಾರೆ.

ಭಯೋತ್ಪಾದಕತೆ ಮತ್ತು ಮಾತುಕತೆ ಒಂದೇ ಸಮಯದಲ್ಲಿ ನಡೆಯಲು ಸಾಧ್ಯವಿಲ್ಲ. ಭಯೋತ್ಪಾದನೆ ಮತ್ತು ವ್ಯಾಪಾರ ನಡೆಯಲು ಸಾಧ್ಯವಿಲ್ಲ. ರಕ್ತ ಮತ್ತು ನೀರು ಒಟ್ಟಿಗೆ ಹರಿಯಲು ಸಾಧ್ಯವಿಲ್ಲ. ಭಾರತ ಮತ್ತು ಪಾಕಿಸ್ತಾನದ ನಡುವೆ ಮಾತುಕತೆ ನಡೆದರೆ ಅದು ಭಯೋತ್ಪಾದನೆ ಮತ್ತು ಪಿಒಕೆ ಬಗ್ಗೆ ಮಾತ್ರ ಎಂದು ನಾನು ಅಂತರರಾಷ್ಟ್ರೀಯ ಸಮುದಾಯಕ್ಕೆ ಹೇಳಲು ಬಯಸುತ್ತೇನೆ ಎಂದು ಹೇಳಿದರು.

ಕಾಶ್ಮೀರದ ಬಗ್ಗೆ ನಮಗೆ ಸ್ಪಷ್ಟವಾದ ನಿಲುವು ಇದೆ. ಪಿಒಕೆ ಮರಳುವುದು ಒಂದು ಬಾಕಿಯಿದೆ. ಅವರು ಭಯೋತ್ಪಾದಕರನ್ನು ಹಸ್ತಾಂತರಿಸುವ ಬಗ್ಗೆ ಮಾತನಾಡಿದರೆ, ನಾವು ಮಾತನಾಡಬಹುದು ಅಷ್ಟೇ ಎಂದು ಕಠಿಣ ಪದಗಳಲ್ಲಿ ತಿಳಿಸಿದರು.

Advertisement
Tags :
IndiaKarnatakaNewspakisthan warPm narendra modiPrime Minister speech
Advertisement
Next Article
Advertisement