Mundgod| ಟಿಬೇಟಿಯನ್ ಗೆ ಮಾರಾಟ ಮಾಡುತಿದ್ದ 8 ಲಕ್ಷ ಮೌಲ್ಯದ ಚರಸ್ ವಶಕ್ಕೆ
Mundgod| ಟಿಬೇಟಿಯನ್ ಗೆ ಮಾರಾಟ ಮಾಡುತಿದ್ದ 8 ಲಕ್ಷ ಮೌಲ್ಯದ ಚರಸ್ ವಶಕ್ಕೆ .
ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು (mundgod )ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಮಾರಾಟ ಮಾಡುತಿದ್ದ 8 ಲಕ್ಷ ಮೌಲ್ಯದ 781 ಗ್ರಾಮ್ ಚರಸ್ ನನ್ನು ವಶಕ್ಕೆ ಪಡೆದು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.
Karnataka|ಯಕ್ಷಗಾನ ಕಲಾವಿದರಲ್ಲಿ ಬಹುತೇಕರು ಸಲಿಂಗಿಗಳು: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿಳಿಮಲೆ.
ಮುಂಡಗೋಡಿನ ಸುಭಾಷ್ ನಗರದ ಇಂಜಿನಿಯರ್ ವೃತ್ತಿಯಲ್ಲಿ ಇರುವ ಸಚಿನ್ ಟೇಕಬಹುದ್ದೂರ್ ಗೋರ್ಖಾ(26) ಬಂಧಿತ ಆರೋಪಿಯಾಗಿದ್ದಾನೆ.
ಕಚಿತ ಮಾಹಿತಿ ಪಡೆದ ಮುಂಡಗೋಡು ಠಾಣೆಯ ಸಿ.ಪಿ.ಐ ರಂಗನಾಥ್ ನೀಲಮ್ಮನವರ್ ಹಾಗೂ ಪಿ.ಎಸ್.ಐ ಯಲ್ಲಾಲಿಂಗ ಕುನ್ನೂರು ರವರ ತಂಡವು ಮುಂಡಗೋಡು ನಗರದ ಬಸ್ ಡಿಫೋ ಹತ್ತಿರ ಬೈಕ್ ನಲ್ಲಿ ಚರಸ್ ಮಾರಾಟ ಮಾಡುವಾಗ ದಾಳಿ ನಡೆಸಿ ಬಂಧನ ಮಾಡಿದ್ದಾರೆ.
ಮುಂಡಗೋಡು (mundgod) ಟಿಬೇಟಿಯನ್ ಕ್ಯಾಂಪ್ ಗೆ ಈ ಚರಸ್ ನನ್ನು ಮಾರಾಟ ಮಾಡಲು ತಂದಿರುವ ಕುರಿತು ಈತನ ಮೇಲೆ ಆರೋಪವಿದೆ.

ಘಟನೆ ಸಂಬಂಧ ಮುಂಡಗೋಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಕೈಗೊಳ್ಳಲಾಗಿದೆ.